ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರೀಕ್ಷೆಯಲ್ಲಿ ಹೈಟೆಕ್ ನಕಲು : ವಿದೇಶಿ ವಿದ್ಯಾರ್ಥಿನಿ ಡಿಬಾರ್

By Srinath
|
Google Oneindia Kannada News

iPad
ಮೈಸೂರು, ಜೂನ್ 26: ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎನ್ನುತ್ತಾರೆ ಗುರು, ಹಿರಿಯರು. ಆದರೆ ಗುರುವಿಗೇ ತಿರುಮಂತ್ರ ಹೇಳಲು ಅತ್ಯಾಧುನಿಕ ನಕಲು ವಿಧಾನಕ್ಕೆ ಮಾರುಹೋದ ಪ್ರಸಂಗವಿದು. ಏನಾಯಿತೆಂದರೆ ಇಲ್ಲೊಬ್ಬ ವಿದ್ಯಾರ್ಥಿನಿ, ಅದೂ ವಿದೇಶೀಯಳು, ಅದೂ ಕನ್ನಡ ಭಾಷೆಯಲ್ಲಿ, ಅದೂ ಸಾಕ್ಷಾತ್ ಸಾಂಸ್ಕೃತಿಕ ರಾಜಧಾನಿಯಲ್ಲಿ, ಅದೂ ರಾಷ್ಟ್ರಕವಿ ಕುವೆಂಪು ಅಧ್ಯಯನ ಕೇಂದ್ರದಲ್ಲಿ ಇಂತಹ ಅಕ್ಷ್ಯಮ್ಯ ಅಪರಾಧ ಎಸಗಿದ್ದಾಳೆ.

ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದ ವಿದೇಶಿ ವಿದ್ಯಾರ್ಥಿನಿ ನಕಲು ಮಾಡಲು ಐ-ಪ್ಯಾಡ್ ಬಳಸಿ ಸಿಕ್ಕಿಬಿದ್ದು ಡಿಬಾರ್ ಆಗಿದ್ದಾಳೆ. ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ವಿದೇಶಿ ವಿದ್ಯಾರ್ಥಿನಿ ನಾಲ್ಕನೇ ಸೆಮಿಸ್ಟರ್ ಭಾಷಾ ವಿಜ್ಞಾನದ ವಿಷಯಕ್ಕೆ ಜೂ. 22 ರಂದು ಉತ್ತರಿಸಲು ಐ-ಪ್ಯಾಡ್‌ನಿಂದ ನಕಲು ಮಾಡುವಾಗ ಸಿಕ್ಕಿಬಿದ್ದು ಡಿಬಾರ್ ಆಗಿದ್ದಾರೆ.

ಐ-ಪ್ಯಾಡ್‌ನಲ್ಲಿ ಕಾಪಿ ಹೊಡೆಯುತ್ತಿದ್ದುದ್ದನ್ನು ಗಮನಿಸಿದ ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಕೂಡಲೇ ಸಂಸ್ಥೆಯ ನಿರ್ದೇಶಕರ ಗಮನಕ್ಕೆ ತಂದರು. ಈ ವಿಷಯ ವಿಶ್ವವಿದ್ಯಾನಿಲಯದ ಕುಲಸಚಿವ (ಪರೀಕ್ಷಾಂಗ) ಬಿ. ರಾಮು ಅವರಿಗೆ ತಿಳಿದು ಕೂಡಲೇ ಸಂಸ್ಥೆಯ ಪರೀಕ್ಷಾ ಕೊಠಡಿಗೆ ತೆರಳಿ ಐ-ಪ್ಯಾಡ್ ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಂಡರು.

English summary
A foreign student is being caught red-handed while copying using an iPad in the post-graduation exams on June 22. A fourth semester girl student of Linguistics Science had video recorded answers of some of the questions on her iPad. She was caught at the Kuvempu Institute of Kannada Studies in Manasagangotri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X