ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೋಮ್, ಐಇಗಿಂತ ಫೈರ್ ಫಾಕ್ಸ್5 ಸಾವಿರ ಪಾಲು ಉತ್ತಮ!

By Mahesh
|
Google Oneindia Kannada News

Mozilla Firefox 5 release
ಕ್ಯಾಲಿಫೋರ್ನಿಯಾ ಜೂ 23: ವೆಬ್ ಬ್ರೌಸರ್ ಪೈಪೋಟಿಯ ಫಲವಾಗಿ ಕಡಿಮೆ ಅವಧಿಯಲ್ಲೇ ಹೊಸ ಆವೃತ್ತಿಗಳು ಬಳಕೆದಾರರಿಗೆ ಲಭ್ಯವಾಗುತ್ತಿದೆ. ಫೈರ್ ಫಾಕ್ಸ್ 4 ಬಿಡುಗಡೆಗೊಂಡ ಮೂರು ತಿಂಗಳೊಳಗೆ ಮೊಝಿಲ್ಲಾ ತನ್ನ ಹೊಚ್ಚ ಹೊಸ ಆವೃತ್ತಿಯನ್ನು ಹೊರ ಹಾಕಿದೆ. ಡೆಸ್ಕ್ ಟಾಪ್ ಹಾಗೂ ಆಂಡ್ರ್ಯಾಡ್ ಸಾಧನಗಳಿಗೆ ಈ ವೆಬ್ ಬ್ರೌಸರ್ ಬಳಸಬಹುದಾಗಿದೆ. ಒಟ್ಟಾರೆ ಬ್ರೌಸರ್ ಜಗತ್ತಿನಲ್ಲಿ ಮೈಕ್ರೋಸಾಫ್ಟ್ ಇಂಟರ್ ನೆಟ್ ನ ಏಕಸ್ವಾಮ್ಯತೆಗೆ ಕೊಡಲಿ ಪೆಟ್ಟು ಬಿದ್ದಿದೆ.

ತ್ವರಿತಗತಿ ಅಭಿವೃದ್ಧಿ ವೃತ್ತ ಎಂದು ಹೇಳಿರುವ ಮೊಝಿಲ್ಲಾ ಇತರೆ ಬ್ರೌಸರ್ ಗಳಿಗಿಂತ ಫೈರ್ ಫಾಕ್ಸ್ 5 ಉತ್ತಮ ಎಂದು ಹೇಳಿಕೊಂಡಿದೆ. ಗೂಗಲ್ ಕ್ರೋಮ್ 12 ಹಾಗೂ ಐಇ 9 ರ ಕಾರ್ಯ ಕ್ಷಮತೆಗೆ ಹೋಲಿಸಿದರೆ ಫೈರ್ ಫಾಕ್ಸ್ 1 ಸಾವಿರ ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದ್ದು, ಸುಧಾರಿತ ಸೌಲಭ್ಯಗಳನ್ನು ಹೊಂದಿದೆ

ಹೊಚ್ಚ ಹೊಸ ಆಡ್ ಆನ್ ಗಳು, ವೆಬ್ ಅಪ್ಲಿಕೇಷನ್ ಗಳು ಹಾಗೂ ವೆಬ್ ತಾಣ ರಚನೆಗೆ ಇದು ಸಹಕಾರಿಯಾಗಿದೆ. ಗ್ರಾಹಕರ ಸುರಕ್ಷಿತ ವೆಬ್ ಬ್ರೌಸರ್ ಗರಿಷ್ಠ ಮಟ್ಟದ ಭರತೆ ಹೊಂದಿದೆ. ಆಂಡ್ರ್ಯಾಡ್ ಮೊಬೈಲ್ ಗಳಲ್ಲಿ 'ಡು ನಾಟ್ ಟ್ರ್ಯಾಕ್' ಎಂಬ ಸೌಲಭ್ಯ ಹೊಂದಿದ್ದು, ಯಾವುದೇ ನಿಶಾನೆ ಇಲ್ಲದೆ ವೆಬ್ ನಲ್ಲಿ ಸುರಕ್ಷಿತವಾಗಿ ಬ್ರೌಸ್ ಮಾಡಬಹುದಾಗಿದೆ.

* ಸಿಎಸ್ಎಸ್ ಅನಿಮೇಷನ್ ಗೆ ಬೆಂಬಲ.
* ಡು ನಾಟ್ ಟ್ರ್ಯಾಕ್ ಮೂಲಕ ಹೆಚ್ಚಿನ ಸುರಕ್ಷತೆ.
* HTML5, XHR, MathML, SMIL, ಹಾಗೂ canvas ಬೆಂಬಲ.
* ಉತ್ತಮ ಸ್ಪೆಲ್ ಚೆಕ್ಕರ್ .
* ಡೆಸ್ಕ್ ಟಾಪ್ ಜೊತೆ ಇಂಟಿಗ್ರೇಷನ್ (ಲೈನಕ್ಸ್ ಬಳಕೆದಾರರಿಗೆ).

ವಿಂಡೋಸ್, ಲೈನಕ್ಸ್ ಹಾಗೂ ಮ್ಯಾಕ್ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಲಭ್ಯವಿದ್ದು, ಹೊಚ್ಚ ಹೊಸ ಬ್ರೌಸರ್ ನ ಅನುಭವ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

English summary
Just three months after the launch of Firefox 4, the Mozilla has announced the release of brand new Firefox 5 web-browser for desktop and Android devices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X