• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ರೀಡೆಗಾಗಿ ಸ್ತನ ಭಾರ ಇಳಿಸಿಕೊಂಡ ಟೆನಿಸ್‌ ತಾರೆ!

By Srinath
|
ಲಂಡನ್‌, ಜೂನ್ 23: ರುಮೇನಿಯಾದ 17 ವರ್ಷದ ಟೆನಿಸ್ ಬೇಬಿ ಸಿಮೋನಾ ಹಾಲೆಪ್‌ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡುವ ಸಲುವಾಗಿ ತಮ್ಮ ಮೈಮಾಟ ಅಡ್ಡಿಯಾಗಬಾರದು ಎಂದು 2 ವರ್ಷಗಳ ಹಿಂದೆ ಮಾಡಿದ್ದ ದೃಢ ಸಂಕಲ್ಪ ಈಗ ಫಲ ನೀಡಿದೆ. ಕೋರ್ಟ್ ನಲ್ಲಿ ಟೆನಿಸ್ ಬಾಲ್ ಮಾತ್ರ ಪುಟಿದೇಳಬೇಕೆಂಬ ಅಭಿಲಾಷೆ ಹೊತ್ತಿದ್ದ ಭಾರದ ಎದೆಗಾತಿ ಹಾಲೆಪ್ ಸ್ತನ ಶಸ್ತ್ರಚಿಕಿತ್ಸೆ ಬಳಿಕ ಕೋರ್ಟ್ ನಲ್ಲಿ ಪುಟಿದೇಳುತ್ತಿದ್ದಾರೆ.

ವಾಸ್ತವವಾಗಿ ಹಾಲೆಪ್ ಗೆ ಎದೆ ಭಾರದಿಂದ ಆಟಕ್ಕೆ ತೊಂದರೆಯಾಗುತ್ತಿತ್ತು. ಪದೇ ಪದೆ ಬೆನ್ನುನೋವು ತೊಂದರೆ ಕೊಡುತ್ತಿತ್ತು ಹಾಗೂ ಕೋರ್ಟ್‌ನಲ್ಲಿ ಸುಲಭವಾಗಿ ಚಲಿಸಲು ಸಾಧ್ಯವಾಗುತ್ತಿರಲಿಲ್ಲ. ವಿಶ್ವ ಶ್ರೇಯಾಂಕದಲ್ಲಿ ಆಕೆ 500ಕ್ಕಿಂತ ಕೆಳಗೆ ಜಾರಿದ್ದರು.

ಶಸ್ತ್ರಚಿಕಿತ್ಸೆ ಮೂಲಕ ತಮ್ಮ ಸ್ತನ ಭಾರವನ್ನು ಗಣನೀಯ ಪ್ರಮಾಣದಲ್ಲಿ ಇಳಿಸಿಕೊಂಡ ಹಾಲೆಪ್‌ಗೆ ತತ್ಫಲವಾಗಿ ಡಬ್ಲ್ಯೂಟಿಎ ಟೆನಿಸ್‌ ಶ್ರೇಯಾಂಕ ಪಟ್ಟಿಯಲ್ಲಿ ಈ ವರ್ಷ 450 ಮೆಟ್ಟಿಲು ಮೇಲೇರಿದ್ದಾರೆ. ಸ್ತನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ 2 ವರ್ಷಗಳ ಬಳಿಕ ಮಂಗಳವಾರ ವಿಂಬಲ್ಡನ್‌ನಲ್ಲಿ ಆಡಿದ ಹಾಲೆಪ್‌, ಉತ್ತಮ ಪ್ರದರ್ಶನ ನೀಡಲಾರಂಭಿಸಿದ್ದಾರೆ.

2008ರ ಫ್ರೆಂಚ್‌ ಓಪನ್‌ನಲ್ಲಿ ಹಾಲೆಪ್‌ ಜೂನಿಯರ್ ಚಾಂಪಿಯನ್‌ ಪಟ್ಟಕ್ಕೇರಿದಾಗ ಅವರ ಭಾರವಾದ ಭಾರಿ ಎದೆ ಸಾಕಷ್ಟು ಪ್ರಚಾರ ಪಡೆದಿತ್ತು. ಪುರುಷ ಅಭಿಮಾನಿಗಳ ಸಂಖ್ಯೆ ದಿನೇ ದಿನೆ ವೃದ್ಧಿಸಿತ್ತು. ಸ್ತನ ಶಸ್ತ್ರಚಿಕಿತ್ಸೆಗೊಳಪಡುವ ಮುನ್ನ ಹಾಲೆಪ್‌, ತಮ್ಮ ನಿರ್ಧಾರ ಬಹಿರಂಗಪಡಿಸಿದಾಗ ಅಭಿಮಾನಿಗಳಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೆ ತಾನು ನಿರ್ಧಾರ ಮಾಡಿಯಾಗಿದೆ ಎಂದು ಹಾಲೆಪ್‌ ಆಗ ಹೇಳಿಕೊಂಡಿದ್ದರು.

ಸದ್ಯ ವಿಶ್ವದಲ್ಲಿ 58ನೇ ಶ್ರೇಯಾಂಕ ಹೊಂದಿರುವ ಹಾಲೆಪ್‌ಗೆ ಇದೇ ಮೊದಲ ವಿಂಬಲ್ಡನ್‌. 'ನನ್ನ ಎದೆಯ ಗಾತ್ರದಿಂದ ನನಗೆ ಇರುಸು ಮುರುಸಾಗುತ್ತಿತ್ತು. ನಾನು ಟೆನಿಸ್‌ ಆಟಗಾರ್ತಿ ಆಗಿರದಿದ್ದರೂ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದೆ. ಏಕೆಂದರೆ, ನಿತ್ಯ ಬದುಕಿನಲ್ಲೂ ನಾನು ಅದನ್ನು ಇಷ್ಟಪಡುವುದಿಲ್ಲ' ಎಂದು ಹಾಲೆಪ್‌ ಹೇಳಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Romanian has made a full recovery from the breasts surgery and is back in training for tournaments, 17 years Simona Halep has been tipped as one of the tennis stars of the future and a place in the final of the junior French Open last year.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more