ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಮೇಯರ್ ಶಾರದಮ್ಮ ಹೊರಟರು ಕೊರಿಯಾಕ್ಕೆ

By Srinath
|
Google Oneindia Kannada News

sharadamma
ಬೆಂಗಳೂರು, ಜೂನ್ 23: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರಥಮ ದಲಿತ ಮಹಿಳಾ ಮೇಯರ್ ಪಿ. ಶಾರದಮ್ಮ ಅವರು ಅಧಿಕಾರ ವಹಿಸಿಕೊಂಡ ಎರಡು ತಿಂಗಳ ಅಂತರದಲ್ಲಿ ವಿದೇಶ ಪ್ರವಾಸ ಕೈಗೊಳ್ಳುವ ಸುಯೋಗ ಪಡೆದಿದ್ದಾರೆ.

ಕೊರಿಯಾದ ಗ್ವಾಂಗ್‌ಜು ಸಿಟಿಯ ಮೂವರು ಅಧಿಕಾರಿಗಳು ಬುಧವಾರ ಮೇಯರ್ ಶಾರದಮ್ಮ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿದಾಗ ಕೊರಿಯಾದ ಕಾನ್ಸುಲೇಟ್ ಜನರಲ್ ಹಾಗೂ ಗ್ವಾಂಗ್‌ಜು ಸಿಟಿ ಮೇಯರ್ ಕಾಂಗ್ ವೂನ್-ಟೇ ಪರವಾಗಿ ತಮ್ಮ ದೇಶಕ್ಕೆ ಬರುವಂತೆ ಕೋರಿದ ಆಮಂತ್ರಣ ಪತ್ರವನ್ನು ಮೇಯರ್ ಶಾರದಮ್ಮ ಅವರಿಗೆ ನೀಡಿ ಮುಕ್ತ ಆಹ್ವಾನ ಕೋರಿದರು.

ಅಕ್ಟೋಬರ್ 11 ರಿಂದ 13 ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ತಮ್ಮನ್ನು ಭೇಟಿ ಮಾಡಲು ನಿರೀಕ್ಷಿಸಿರುವುದಾಗಿ ಗ್ವಾಂಗ್‌ಜು ಸಿಟಿ ಮೇಯರ್ ಕಾಂಗ್ ವೂನ್-ಟೇ ಅವರು ಶಾರದಮ್ಮ ಅವರಿಗೆ ಕಳಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ. ಆಹ್ವಾನ ಪತ್ರ ಸ್ವೀಕರಿಸಿದ್ದೇ ತಡ. ಇ-ಮೇಲ್ ಸಂದೇಶ ರವಾನಿಸಿ, ದಮ್ಮಯ್ಯ ಕಾರ್ಯಕ್ರಮಕ್ಕೆ ಬರ್ತೀನಿ ಎಂದಿದ್ದಾರೆ.

ಒಂದು ವೇಳೆ ಮೇಯರ್ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಾದರೆ ಅದು ಅವರ ಪ್ರಥಮ ವಿದೇಶ ಪ್ರವಾಸವಾಗಲಿದೆ. ಅಲ್ಲದೆ, ಅದು ಅವರ ಪ್ರಥಮ ವಿಮಾನಯಾನ ಕೂಡ ಹೌದು. ಕಾರ್ಯಕ್ರಮವು ಪರಿಸರ ಕಾಳಜಿ ಕುರಿತಾದ ವಿಶ್ವಸಂಸ್ಥೆಯ ಶಿಖರ ಸಮ್ಮೇಳನವಾಗಿದೆ.

English summary
Just 52 days after being sworn in as the first woman mayor of Bangalore, Sharadamma, who has never set foot outside the state, is getting ready to fly to South Korea. Mayor Sharadamma has been invited to the Gwanju environmental summit in South Korea in October.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X