ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಯ ಸಾಯಿ ಬಾಬಾ ರಹಸ್ಯ ಬಹಿರಂಗಕ್ಕೆ ಮಹೂರ್ತ ಫಿಕ್ಸ್

By Mahesh
|
Google Oneindia Kannada News

Isaac Tigrett
ಪುಟ್ಟಪರ್ತಿ ಜೂ 22: ಸತ್ಯ ಸಾಯಿ ಬಾಬಾ ಅವರ ಜೀವಂತ ಉಯಿಲು(ವಿಲ್) ನಾನೇ ಎಂದು ಹಾರ್ಡ್ ರಾಕ್ ಮತ್ತು ಹೌಸ್ ಆಫ್ ಬ್ಲ್ಯೂಸ್ ಹೋಟೆಲ್ ನ ಮಾಲೀಕ ಐಸಾಕ್ ಟೈಗ್ರೇಟ್ ಘೋಷಿಸಿದ್ದಾರೆ. ಸತ್ಯಸಾಯಿ ಆಶ್ರಮ, ಸಂಸ್ಥೆ ಹೇಗೆ ನಡೆಸಬೇಕೆಂದು ಬಾಬಾ ನನಗೆ ರಹಸ್ಯ ಸಂದೇಶ ನೀಡಿದ್ದಾರೆ. ಜುಲೈ 15 ರ ಗುರು ಪೂರ್ಣಿಮಾ ಶುಭ ದಿನದಂದು ಎಲ್ಲಾ ರಹಸ್ಯವನ್ನು ಬಹಿರಂಗ ಮಾಡುತ್ತೇನೆ ಎಂದು ಬಾಬಾ ಅವರ ನೆಚ್ಚಿನ ಭಕ್ತ ಐಸಾಕ್ ಹೇಳಿದ್ದಾರೆ.

ಬಾಬಾರ ಕನಸಿನ ಕೂಸಾದ ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ ಲಕ್ಷಾಂತರ ಡಾಲರ್ ಗಳನ್ನು ಸುರಿದಿರುವ ಈ ಮಹಾನ್ ಭಕ್ತ, ಸದ್ಯ ಪ್ರಶಾಂತಿ ನಿಲಯಂನಲ್ಲಿ ನೆಲೆಸಿದ್ದಾರೆ. ಬಾಬಾ ಅವರ ಉತ್ತರಾಧಿಕಾರಿ ಯಾರು? ಟ್ರಸ್ಟ್ ಹಾಗೂ ಆಶ್ರಮಕ್ಕೆ ಯಾರು ದಿಕ್ಕು? ಮುಂತಾದ ಬಗೆಹರಿಯದ ಪ್ರಶ್ನೆಗಳಿಗೆ ಸ್ವತಃ ಬಾಬಾ ಉತ್ತರ ನೀಡಿದ್ದಾರೆ. ಬಾಬಾ ನನಗೆ ನೀಡಿರುವ ರಹಸ್ಯ ಸಂದೇಶವನ್ನು ಸೂಕ್ತ ದಿನದಂದು ಪ್ರಕಟಿಸುತ್ತೇನೆ ಎಂದು ಐಸಾಕ್ ಹೇಳಿದ್ದಾರೆ.

ಆದರೆ, ಐಸಾಕ್ ಅವರ ಹೇಳಿಕೆಯನ್ನು ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ ತಳ್ಳಿ ಹಾಕಿದ್ದು, ಬಾಬಾ ಯಾವುದೇ ರಹಸ್ಯ ಇಟ್ಟುಕೊಂಡಿಲ್ಲ. ಇದು ಐಸಾಕ್ ಅವರ ವೈಯಕ್ತಿಕ ಅನುಭವ ಇದಕ್ಕೂ ಟ್ರಸ್ಟ್ ಆಡಳಿತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಟ್ರಸ್ಟಿ ನಾಗಾನಂದ ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ಬಾಬಾ ಆಸ್ತಿ ಅಕ್ರಮ ಸಾಗಾಣಿಕೆ ಆರೋಪದ ಮೇಲೆ ಬಾಬಾ ಅವರ ಸಂಬಂಧಿ ಹಾಗೂ ಪ್ರಮುಖ ಟ್ರಸ್ಟಿ ರತ್ನಾಕರ್ ಅವರಿಗೆ ಆಂಧ್ರ ಪೊಲೀಸರು ನೋಟಿಸ್ ನೀಡಿದ್ದಾರೆ. ಉಡುಪಿ ಮೂಲದ ವ್ಯಕ್ತಿಯನ್ನು ಬಂಧಿಸಿ ಟ್ರಸ್ಟ್ ಗೆ ಸೇರಿದ್ದ 35.5 ಲಕ್ಷ ರು ಅನ್ನು ವಶಪಡಿಸಿಕೊಳ್ಳಲಾಗಿತ್ತು. ಬಾಬಾ ಅವರ ಯಜುರ್ ಮಂದಿರದಲ್ಲಿ 11.56 ಕೋಟಿ ನಗದು, 98 ಕೆಜಿ ಚಿನ್ನ ಹಾಗೂ ಆಭರಣ, 307 ಕೆಜಿ ಬೆಳ್ಳಿ ಪದಾರ್ಥ ಸೇರಿದಂತೆ ಅಮೂಲ್ಯ ವಸ್ತುಗಳು ಕಾಣಿಸಿತ್ತು.

English summary
Isaac Tigrett of Hard Rock café fame, has claimed that he is the 'living will' of the departed Godman. Isaac Tigrett would reveal all the details of Sathya Sai's dreams and secrets on Guru Purnima, which falls on July 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X