ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಟ್ಟಾ ಜಗದೀಶ್ ಫೇಲ್, ಚೆನ್ನಿಗಪ್ಪ ಪಾಸೋ ಪಾಸ್ !

By Srinath
|
Google Oneindia Kannada News

Katta Jagadish Naidu
ಬೆಂಗಳೂರು, ಜೂನ್ 22: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಹಗರಣದಲ್ಲಿ ಸಿಲುಕಿರುವ ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್ ಹಾಗೂ ಕೆಐಎಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ ಟಿ.ವಿ. ಮುನಿನಾರಾಯಣ ಅವರ ವಿರುದ್ಧ ತನಿಖೆ ಮುಂದುವರಿಸಲು ಲೋಕಾಯುಕ್ತರಿಗೆ ಹೈಕೋರ್ಟ್ ಹಸಿರು ನಿಶಾನೆ ತೋರಿದೆ.

ಪ್ರಕರಣದ ತನಿಖೆ ವಿರುದ್ಧ ಇದ್ದ ತಡೆಯಾಜ್ಞೆಯನ್ನು ನ್ಯಾಯಮೂರ್ತಿ ವಿ. ಜಗನ್ನಾಥನ್ ಅವರು ಮಂಗಳವಾರ ತೆರವುಗೊಳಿಸಿದರು. ವಿವಾದಿತ ಇಟಾಸ್ಕಾ ಕಂಪನಿಗೆ ಕೆಐಎಡಿಬಿ ಮೂಲಕ 325 ಎಕರೆ ಭೂಮಿ ಮಂಜೂರು ಮಾಡಲು 87 ಕೋಟಿ ರೂ. ಲಂಚ ಪಡೆದಿರುವ ಆರೋಪ ಇದಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಸೆ. 29ರಂದು ಲೋಕಾಯುಕ್ತ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿ ತನಿಖೆಗೆ ಮುಂದಾಗಿದ್ದರು. ಆದರೆ ತನಿಖೆಗೆ ಕೋರ್ಟ್ ಕಳೆದ ಅಕ್ಟೋಬರ್ ತಡೆ ನೀಡಿತ್ತು.

ಚೆನ್ನಿಗಪ್ಪ ವಿರುದ್ಧ ಅರ್ಜಿ ವಜಾ: ಮಾಜಿ ಸಚಿವ ಸಿ. ಚೆನ್ನಿಗಪ್ಪ ಅವರು ಸರ್ಕಾರಿ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಿರುವುದಾಗಿ ಆರೋಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಹೈಕೋರ್ಟ್ ಮಂಗಳವಾರ ವಜಾ ಮಾಡಿದೆ.

ವಿನಾಕಾರಣ ಅರ್ಜಿ ಸಲ್ಲಿಸಿದ್ದ ನೆಲಮಂಗಲದ ನಿವಾಸಿ ಎನ್. ರಾಜಣ್ಣ ಎಂಬುವವರಿಗೆ 50 ಸಾವಿರ ರುಪಾಯಿ ದಂಡ ವಿಧಿಸಿದೆ. 10 ಸಾವಿರ ವಿದ್ಯಾರ್ಥಿಗಳಿಗೆ 240 ಕೊಠಡಿ ನಿರ್ಮಿಸುವ ಉದ್ದೇಶದಿಂದ 35 ಕೋಟಿ ರು.ಗಳನ್ನು ಸಾರ್ವಜನಿಕರಿಂದ ದೇಣಿಗೆ ರೂಪದಲ್ಲಿ ವಸೂಲು ಮಾಡಲಾಗಿದೆ ಎನ್ನುವುದು ಅರ್ಜಿದಾರರ ದೂರಾಗಿತ್ತು.

English summary
High Court on June 21 permitted Karnataka Lokayukta to continue investigation against Katta Jagadish Naidu in KIADB Case. But, PIL against fomer minister Chennigappa in land convertion case has been dismissed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X