ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಹಾಗೂ ಮಾಜಿ ಸಿಎಂಗೆ ದೇಗುಲ ಪ್ರವೇಶ ನಿಷಿದ್ಧ

By Mahesh
|
Google Oneindia Kannada News

Agni Sridhar
ಬೆಂಗಳೂರು, ಜೂ.22: ಸಿಎಂ ಹಾಗೂ ಮಾಜಿ ಸಿಎಂಗಳ ಆಣೆ ಪ್ರಮಾಣವನ್ನು ಪ್ರಗತಿಪರ ಸಂಘಟನೆಗಳು ತೀವ್ರವಾಗಿ ಖಂಡಿಸಿದೆ. ಪ್ರಜಾತಂತ್ರ ವ್ಯವಸ್ಥೆಗೆ ವಿರುದ್ಧವಾದ ಮತ್ತು ಜನರ ಭಾವನೆಗಳಿಗೆ ಧಕ್ಕೆ ತರುವಂಥ ಈ ನಿರ್ಧಾರವನ್ನು ಕೈ ಬಿಟ್ಟು ಜನತೆಯ ಕ್ಷಮೆ ಯಾಚಿಸಬೇಕು ಎಂದು ಪತ್ರಕರ್ತ ಅಗ್ನಿ ಶ್ರೀಧರ್ ಅವರು ಆಗ್ರಹಿಸಿದ್ದಾರೆ. ಜೂ.27ರಂದು ಯಡಿಯೂರಪ್ಪ ಹಾಗೂ ಎಚ್‌ಡಿ ಕುಮಾರಸ್ವಾಮಿ ಅವರು ದೇಗುಲ ಪ್ರವೇಶಿಸದಂತೆ ತಡೆಯಲು ತೀರ್ಮಾನಿಸಿದ್ದೇವೆ ಎಂದು ಶ್ರೀಧರ್ ಹೇಳಿದ್ದಾರೆ.

ಜೂ.27ಕ್ಕೆಪ್ರತಿಭಟನೆ: ಆಣೆ- ಪ್ರಮಾಣ ನಾಟಕವನ್ನು ರೈತ, ದಲಿತ ಮತ್ತು ಪ್ರಗತಿಪರ ಸಂಘಟನೆಗಳು ತೀವ್ರವಾಗಿ ಖಂಡಿಸಲಿದ್ದು, ಜೂ.27ರಂದು ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಇಬ್ಬರನ್ನು ಧರ್ಮಸ್ಥಳ ದೇಗುಲ ಪ್ರವೇಶ ಮಾಡದಂತೆ ತಡೆಯುವ ಕೆಲಸವನ್ನು ರೈತ ಮತ್ತು ದಲಿತ ಸಂಘಟನೆಗಳು ಮಾಡಲಿವೆ ಎಂದು ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದರು.

ದೇವರಿಗೆ ಸುಪಾರಿ: ಬಸವಣ್ಣನ ಬಗ್ಗೆ ಮಾತನಾಡುವ ಎಳ್ಳಷ್ಟು ಯೋಗ್ಯತೆ ಇಲ್ಲದ ಈ ಯಡಿಯೂರಪ್ಪರ ವರ್ತನೆ ವೀರಶೈವ ತತ್ವದ ಗೌರವ, ಘನತೆ ಮತ್ತು ಆಶಯಗಳಿಗೆ ಧಕ್ಕೆ ತರುತ್ತಿದೆ ಎಂದು ವೀರಶೈವ ಮಠಾಧೀಶರುಗಳು ಬುದ್ಧಿವಾದ ಹೇಳದೇ ಇರುವುದೇಕೆ? ಎಂದು ಅಗ್ನಿ ಶ್ರೀಧರ್ ಪ್ರಶ್ನಿಸಿದ್ದಾರೆ.

ಮಂಜುನಾಥನಿಗೆ ಸುಪಾರಿ ಆಣೆ-ಪ್ರಮಾಣ ಸುಳ್ಳಾದರೆ ಇಡೀ ಕುಟುಂಬ ನಾಶ ಆಗುತ್ತೆ ಎಂಬ ನಂಬಿಕೆ ಇದೆ. "ಮಂಜುನಾಥ ಮಾತು ಬಿಡ, ತಿಮಪ್ಪ ಕಾಸು ಬಿಡ" ಎಂಬ ಮಾತಿದೆ. ಹಾಗಾಗಿ ಒಬ್ಬ ಮುಖ್ಯಮಂತ್ರಿಯಾಗಿ, ತುಂಬು ಕುಟುಂಬದ ಯಜಮಾನನಾಗಿ ಆಣೆ-ಪ್ರಮಾಣಕ್ಕೆ ಮುಂದಾಗಿ ಮತ್ತೊಂದು ಕುಟುಂಬದ ನಾಶ ಮಾಡಲು ಯಡಿಯೂರಪ್ಪ ಹೊರಟಿದ್ದಾರೆ. ಒಂದು ರೀತಿಯಲ್ಲಿ ಮಂಜುನಾಥನಿಗೆ ಕೊಲೆ ಸುಪಾರಿ ನೀಡಿದಂತಿದೆ ಎಂದು ಅಗ್ನಿ ಶ್ರೀಧರ್ ಕಿಡಿಕಾರಿದ್ದಾರೆ. ಇವರ ಹುಚ್ಚಾಟಕ್ಕೆ ಅವಕಾಶ ನೀಡಬಾರದು ಎಂದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಮನವಿ ಮಾಡುವುದಾಗಿ ಹೇಳಿದರು.

English summary
CM BSY HDK Truth Test is against democracy and we won't let them inside Dharmasthala Temple says Journalist Agni Sridhar. He said both the leaders should ask apology in.public. Karnataka Raitha Sangha Kodihalli Chandrashekar said we will protest on Jun 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X