• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಯ್ಯೋ ಕನ್ನಡಿಗರ ದುರ್ವಿಧಿಯೇ ಎಂದ ಮುಖ್ಯಮಂತ್ರಿ

By Mahesh
|

ಬೆಂಗಳೂರು, ಜೂ.20: ವಾಹನದ ನೋಂದಣಿ ಸಂಖ್ಯೆ ಫಲಕವನ್ನು ಕನ್ನಡದಲ್ಲಿ ಬರೆಸಿರುವ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸ್ ದಂಡ ವಿಧಿಸುತ್ತಿದ್ದಾರೆ. ಈ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು, ಗೃಹ ಹಾಗೂ ಸಾರಿಗೆ ಇಲಾಖೆ ಕೂಡಲೇ ಈ ಕನ್ನಡ ವಿರೋಧಿ ಕ್ರಮವನ್ನು ಕೈ ಬಿಡುವಂತೆ ಒತ್ತಾಯಿಸಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಬಳಸದೆ ಇನ್ನೆಲ್ಲಿ ಬಳಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಮಾತನಾಡಿದ ಅವರು, ವಾಹನಗಳ ನೋಂದಣಿ ಸಂಖ್ಯೆಯನ್ನು ಸಂಪೂರ್ಣವಾಗಿ ಕನ್ನಡದಲ್ಲೆ ಬರೆಸಿರುವುದು ಭಾವನಾತ್ಮಕ ವಿಷಯವಾಗಿದೆ. ಇಂತಹ ವಿಷಯದಲ್ಲಿ, ದಂಡ ವಿಧಿಸಲು ತೋರುವ ಉತ್ಸಾಹವನ್ನು ಅಧಿಕಾರಿಗಳು, ಆಂಗ್ಲ ಭಾಷೆಯ ಜೊತೆ ಕನ್ನಡವನ್ನು ಬರೆಸದ ವಾಹನಗಳ ಮೇಲೆ ದಂಡ ವಿಧಿಸುವಂತಹ ಕ್ರಮವನ್ನು ಯಾಕೆ ಕೈಗೊಳ್ಳಬಾರದು. ಸರ್ಕಾರ ವಾಹನಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸಿ ಜಾರಿಗೆ ತರಲಾಗಿದೆ. ಆಗ ಇಲ್ಲದ ಕಾನೂನು ಈಗ ಏಕೆ ಎಂದು ಪ್ರಶ್ನಿಸಿದ್ದಾರೆ.

ಖಾಸಗಿ ವಾಹನಗಳು ನೋಂದಣಿ ಸಂಖ್ಯೆಯನ್ನು ಕನ್ನಡ ಅಕ್ಷರ ಮತ್ತು ಅಂಕಿಯಲ್ಲಿ ಬರೆಸಲು ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ಸದ್ಯಕ್ಕೆ ಕನ್ನಡದಲ್ಲಿ ವಾಹನದ ಅಂಕಿಯನ್ನು ಬರೆಸಿರುವರಿಗೆ ದಂಡ ವಿಧಿಸುತ್ತಿರುವುದನ್ನು ನಿಲ್ಲಿಸುವಂತೆ ಸಾರಿಗೆ ಸಚಿವ ಆರ್.ಅಶೋಕ್‌ರಿಗೆ ಮನವಿ ಸಲ್ಲಿಸಲಾಗಿದೆ ಎಂದು ಚಂದ್ರು ತಿಳಿಸಿದರು.

ಕಾನೂನು ಏನು ಹೇಳುತ್ತದೆ?: ಮೋಟಾರು ವಾಹನ ಕಾಯಿದೆ 1989ರ ನಿಯಮ 50 ಉಪ ನಿಯಮ 2 ಡಿಯ ಪ್ರಕಾರ ವಾಹನ ನೋಂದಣಿ ಸಂಖ್ಯೆ ಫಲಕ ಇಂಗ್ಲೀಷಿನಲ್ಲಿರಬೇಕು ಹಾಗೂ ಅಂಕೆಗಳು ಅರೇಬಿಕ್ ಮಾದರಿಯಲ್ಲಿ ಬರೆಸಿರಬೇಕು. ಈ ಬಗ್ಗೆ ಸರ್ಕಾರದ ಸುತ್ತೋಲೆ(No.SO. 444E dated June 12, 1989) ಪ್ರಕಾರ ಈ ನಿಯಮ ಮೀರಿದರೆ ಶಿಕ್ಷೆಗೆ ಅರ್ಹರು ಎಂದು ಹೇಳಿದೆ. ಆದರೆ, ಕರ್ನಾಟಕದಲ್ಲಿ ವಾಹನದ ಮುಂದೆ ಇಂಗ್ಲೀಷಿನಲ್ಲಿ ಹಿಂದೆ ಕನ್ನಡದಲ್ಲಿ ಫಲಕ ಹಾಕಿಕೊಂಡು ಕಾನೂನು ಪಾಲಿಸಿ, ಅಭಿಮಾನಿ ಮೆರೆಯುತ್ತಿರುವವರ ಬಹಳಷ್ಟು ಜನರನ್ನು ಕಾಣಬಹುದು. ಕನ್ನಡ ಫಲಕ ಬೇಕೆ? ಬೇಡವೇ? ನಮಗೆ ತಿಳಿಸಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
KDA Chief Mukhyamantri Chandru who is fighting to make kananda mandatory in all name plates, boards used in vehicles and shops. But according to Motor Vehicle Act it is illegal and Traffic police are collecting fine those use kannada name plates in vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more