ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿಗೆ ಸ್ವಾಮಿ ದ್ರೋಹ: 30 ಸಿಬ್ಬಂದಿ ಕಿಕ್ಡ್ ಔಟ್

By Srinath
|
Google Oneindia Kannada News

wikileaks
ಬೆಂಗಳೂರು, ಜೂನ್ 21: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಚೇರಿಯಲ್ಲಿ ವಿಕಿಲೀಕ್ಸ್ ಕಾಣಿಸಿಕೊಂಡಿದ್ದು, ಮಾಹಿತಿ ಸೋರಿಕೆಯ ಶಂಕೆ ಹಿನ್ನೆಲೆಯಲ್ಲಿ 30 ಮಂದಿ ಆಪ್ತ ಸಹಾಯಕರನ್ನು (ಪಿ.ಎ) ಅಲ್ಲಿಂದ ಬಿಡುಗಡೆ ಮಾಡಿ, ಮಾತೃ ಇಲಾಖೆಗಳಿಗೆ ವರ್ಗಾಯಿಸಲಾಗಿದೆ.

ಕೊಟ್ಟಕಲ್ ಪ್ರವಾಸ ಮುಂತಾದ ಮಾಹಿತಿಗಳು ದಾಖಲೆ ಸಹಿತ ಬಹಿರಂಗಗೊಂಡಿದ್ದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ಈ ಮಾಹಿತಿ ಸೋರಿಕೆಯೇ ಆಣೆ ಪ್ರಮಾಣ ಪ್ರಹಸನಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಎಂ.ಸಿ.ನಾಗರಾಜ್ ಮತ್ತು ಲಕ್ಷ್ಮಯ್ಯ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಮುಖ್ಯಮಂತ್ರಿಯವರ ಪರಿಹಾರ ನಿಧಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ವೀರಪ್ಪ ಮತ್ತು ಶಿವಮಾದು, ಮುಖ್ಯಮಂತ್ರಿಯವರ ಉಪ ಕಾರ್ಯದರ್ಶಿ ಮುಹಮದ್ ಮೊಹಮದ್ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್ ಅವರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ.

ಈ ಮಧ್ಯೆ, ಸಚಿವಾಲಯದಲ್ಲಿ ಪ್ರಸ್ತುತ 230 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ 150 ಮಂದಿ ಸಾಕು. ಆದ್ದರಿಂದ ಹೆಚ್ಚುವರಿಯಾಗಿದ್ದ 30 ಮಂದಿಯನ್ನು ಮಾತೃ ಇಲಾಖೆಗಳಿಗೆ ವಾಪಸು ಕಳಿಸಲಾಗಿದೆ ಎಂದು ಸಚಿವಾಲಯ ಸ್ಪಷ್ಟನೆ ನೀಡಿದೆ.

English summary
As many as 30 employees working in the Chief Minister’s Secretariat have been transferred back to their parent departments on suspicion that they were allegedly passing on information and copies of internal documents to Opposition leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X