ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಆಣೆ-ಪ್ರಮಾಣಕ್ಕೆ ರೆಡ್ಡಿ ಥಂಬ್ಸ್ ಅಪ್

By Rohini Bellary
|
Google Oneindia Kannada News

Janardhana Reddy
ಬಳ್ಳಾರಿ, ಜೂ. 20 : ಭಾರತೀಯ ಸಂಸ್ಕೃತಿಯಲ್ಲಿ ದೇವರು ಮತ್ತು ದೈವೀಶಕ್ತಿಗೆ ವಿಶೇಷ ಪ್ರಾಧಾನ್ಯತೆ ಇದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದೇವರನ್ನು ಮತ್ತು ದೈವೀಶಕ್ತಿಯನ್ನು ಅಪಾರವಾಗಿ ನಂಬುತ್ತಾರೆ. ದೇವರ ಹೆಸರಲ್ಲಿ ಅನೇಕ ಸಮಾಜಮುಖಿ, ಜನಮುಖಿ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಧರ್ಮಸ್ಥಳದ ಶ್ರೀಮಂಜುನಾಥನ ದೈವೀ ಸನ್ನಿಧಿಯಲ್ಲಿ ಆಣೆ, ಪ್ರಮಾಣ ಮಾಡಲು ಸಿದ್ಧರಾಗಿದ್ದಾರೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.

'ನಿಮ್ಮೊಂದಿಗೆ ನಾವು" ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪೂರ್ವದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಸಿನೆಟ್ಟು ಮಾಧ್ಯಮಗಳ ಜೊತೆ ಭಾನುವಾರ ಮಾತನಾಡಿದ ಅವರು, ಯಡಿಯೂರಪ್ಪನವರು ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದನ್ನು ಅವರು ಬೆಂಬಲಿಸಿದರು.

ಸಿದ್ದು ರಾಜಕೀಯ ನಿವೃತ್ತಿ ಪಡೆಯುವರೆ? : ಮುಂದಿನ ಚುನಾವಣೆಯಲ್ಲೂ ಬಿಜೆಪಿ ಗೆದ್ದೇ ಗೆಲ್ಲುತ್ತದೆ. ಬಿಜೆಪಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಲ್ಲಿ ಸಿದ್ಧರಾಮಯ್ಯ ರಾಜಕೀಯದಿಂದ ನಿವೃತ್ತಿ ಪಡೆಯುವರೇ? ಎಂದು ಜನಾರ್ದನ ರೆಡ್ಡಿ ಸಿದ್ದರಾಮಯ್ಯನವರಿಗೆ ಸವಾಲು ಹಾಕಿದರು. ಬಿಜೆಪಿ ಇನ್ನೂ ಐದು ದಶಕಗಳ ಕಾಲ ರಾಜ್ಯದಲ್ಲಿ ಅಧಿಕಾರ ನಡೆಸಲಿದೆ. ಕಾಂಗ್ರೆಸ್ - ಜೆಡಿಎಸ್ ಈ ಅವಧಿಯಲ್ಲಿ ವಿರೋಧ ಪಕ್ಷದ ಸ್ಥಾನಕ್ಕೇ ಸಮಾಧಾನ ಪಡಬೇಕಾಗುತ್ತದೆ ಎಂದು ಅವರು ಭವಿಷ್ಯ ನುಡಿದರು.

ಕಾಂಗ್ರೆಸ್ ಪುನಶ್ಚೇತನಕ್ಕೆ ಎಸ್.ಎಂ. ಕೃಷ್ಣ ಅಥವಾ ಯಾರು ಬಂದರೂ ಅದು ಚೇತರಿಸಿಕೊಳ್ಳುವುದಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ತಳ್ಳಲಿಕ್ಕಾಗಿ ಜೆಡಿಎಸ್ - ಕಾಂಗ್ರೆಸ್ ಪದೇ ಪದೇ ವಿಫಲಯತ್ನ ನಡೆಸುತ್ತಿವೆ. ಬಿಜೆಪಿ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತ ಜನಪರವಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿಯದ್ದೇ ಪದೇ ಪದೇ ಗೆಲುವು ಎಂದರು.

English summary
Bellary district in-charge minister of BJP J Janardhana Reddy has supported BS Yeddyurappa for his challenge to take oath in front of Dharmasthala Manjunatha to prove himself. Janardhana reddy has also challenged Siddaramaiah if he is ready to take political sanyas if he is defeated in next election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X