ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಬೀಡಿ ಕಾರ್ಮಿಕರಿಗಾಗಿ ವಿಶೇಷ ಆಸ್ಪತ್ರೆ

By Prasad
|
Google Oneindia Kannada News

Special hospitals for beedi workers
ಬೆಂಗಳೂರು, ಜೂ. 20 : ಕರ್ನಾಟಕದ ಯಾದಗಿರಿ, ಮಂಡ್ಯ ಮತ್ತು ಕೊಳ್ಳೇಗಾಲ ಸೇರಿದಂತೆ ರಾಷ್ಟ್ರದ 7 ಕಡೆಗಳಲ್ಲಿ ಬೀಡಿ ಕಾರ್ಮಿಕರಿಗಾಗಿಯೇ ವಿಶೇಷ ಆಸ್ಪತ್ರೆಗಳನ್ನು ತಲಾ 50 ಕೋಟಿ ರು. ವೆಚ್ಚದಲ್ಲಿ ಕೇಂದ್ರ ನಿರ್ಮಿಸುತ್ತಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜು ಖರ್ಗೆ ಹೇಳಿದ್ದಾರೆ.

ಯಾದಗಿರಿ, ಮಂಡ್ಯ, ಕೊಳ್ಳೇಗಾಲ, ಅಹ್ಮದಾಬಾದ್, ಜಬ್ಬಲ್ ಪುರ, ಕೊಲ್ಕತಾ, ಹೈದರಾಬಾದ್ ನಗರಗಳಲ್ಲಿ 15 ಹಾಸಿಗೆಗಳಿರುವ ಸುಸಜ್ಜಿತ ಆಸ್ಪತ್ರೆಗಳನ್ನು, ಬೀಡಿ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಅವರು ಬೆಂಗಳೂರಿನಲ್ಲಿ ಭಾನುವಾರ ತಿಳಿಸಿದರು.

ಆಸ್ಪತ್ರೆಗಳಿಗಾಗಿ ನಿವೇಶನ ನೀಡುವಂತೆ ಮನವಿ ಮಾಡಿ ಎಲ್ಲಾ ರಾಜ್ಯ ಸರಕಾರಗಳ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದ್ದು, ಕಟ್ಟಡ ನಿರ್ಮಾಣ ಮತ್ತು ನಿರ್ವಹಣೆಯ ವೆಚ್ಚಗಳನ್ನು ಕೇಂದ್ರ ಸರಕಾರವೇ ಭರಿಸಲಿದೆ ಎಂದು ಖರ್ಗೆ ಅವರು ನುಡಿದರು.

ಬೀಡಿ ನಿರ್ಮಿಸುವ ಹಂತದಲ್ಲಿ ಕಾರ್ಮಿಕರು ಪ್ರಮುಖವಾಗಿ ಕ್ಯಾನ್ಸರ್, ಹೃದಯಾಘಾತ ಮತ್ತು ಉಸಿರಾಟಕ್ಕೆ ಸಂಬಂಧಿಸಿದಂತೆ ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಈಗ ಅವರಿಗಾಗಿಯೇ ಆಸ್ಪತ್ರೆಗಳನ್ನು ನಿರ್ಮಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇದಕ್ಕೆ ಕೈ ಜೋಡಿಸಬೇಕಾದ ಜವಾಬ್ದಾರಿ ರಾಜ್ಯ ಬಿಜೆಪಿ ಸರಕಾರದ ಮೇಲಿದೆ.

English summary
Central govt is proposing to build 7 special hospitals for beedi workers in Yadagiri, Mandya, Kollega, Allahabad, Jabbalpur, Hyderabad, Kolkata. Union labour minister Mallikarjun Kharge announced in Bangalore. He has writter letters to chief secretaries to sanction land for the project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X