ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಸುದ್ದಿಯನ್ನು ಕ್ರೈಂ ನ್ಯೂಸ್ ಸ್ಟೈಲಿನಲ್ಲಿ ಓದಿರಿ

By Shami
|
Google Oneindia Kannada News

Who is saying the truth among these two?
ಕರ್ನಾಟಕದ ಹಾಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ವಿರೋಧ ಪಕ್ಷದಲ್ಲಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಬ್ಬರ ನಡುವೆ ಹಾವು ಮುಂಗುಸಿಯ ರಿಲೇಷನ್ ಶಿಪ್ ಕಂಡುಬಂದಿದೇ.

ಯಡಿಯೂರಪ್ಪನವರು ಮತ್ತು ಅವರ ಸರಕಾರ ಅತ್ಯಂತ ಭ್ರಷ್ಟ ಎನ್ನುವುದು ಕುಮಾರಸ್ವಾಮಿಯವರ ಆರೋಪವಾಗಿದೇ. ಭ್ರಷ್ಟತನದಲ್ಲಿ ಮುಖ್ಯವಾಗಿ ಭೂಮಿ ಕಬಳಿಕೆ, ಸ್ವಜನ ಪಕ್ಷಪಾತ, ಇತ್ಯಾದಿ ವಿಚಾರಗಳಿವೇ.

ತಮ್ಮ ವಿರುದ್ಧ ಕುಮಾರ್ ಮತ್ತು ಅವರ ಅಪ್ಪ ಎಚ್ ಡಿ ದೇವೇಗೌಡ ಅವರು ಮಾಡುವ ಆರೋಪಗಳು ಹಸೀ ಸುಳ್ಳು ಎಂದು ಯಡಿಯೂರಪ್ಪನವರು ನಾಡಿನ ಜನತೆಗೆ ಮತ್ತು ಹೈ ಕಮಾಂಡಿಗೆ ಸಮಜಾಯಿಷಿ ನೀಡುತ್ತಿದ್ದಾರೇ.

ಇವರಿಬ್ಬರಲ್ಲಿ ಯಾರು ಸರಿ, ಯಾರು ತಪ್ಪು ಎನ್ನುವುದು ಗೊತ್ತಾಗದೆ ಜನತೆ ತಬ್ಬಿಬ್ಬಾಗಿದ್ದಾರೇ. ಇಬ್ಬರೂ ಭ್ರಷ್ಟರೇ ಎಂಬ ತೀರ್ಮಾನಕ್ಕೆ ಬಂದ ಜನತೆಯೂ ಈ ನಾಡಿನಲ್ಲಿದ್ದಾರೇ.

ಈ ನಾಡಿನಲ್ಲಿ ಕೋರ್ಟು ಕಚೇರಿಗಳು ಬೇಕಾದಷ್ಟಿವೇ. ಆದರೆ ನ್ಯಾಯ ಎಲ್ಲಿದೆಯೋ ಶಿವನೇ ಎಂದು ಅಮಾಯಕ ಜನ ಕೇಳುತ್ತಿದ್ದಾರೇ. ಈ ಕಳವಳ ನಿವಾರಣೆ ಮಾಡಲು ಇಬ್ಬರೂ ನಾಯಕರು ತಾವಾಗಿಯೇ ಮುಂದೆ ಬಂದಿದ್ದಾರೇ.

ಈ ಇಬ್ಬರೂ ನಾಯಕರು ಸ್ವಪ್ರೇರಣೆಯಿಂದ ದೇವರ ಮುಂದೆ ನಿಂತು ಆಣೆ-ಪ್ರಮಾಣ ಮಾಡಲು ಸಿದ್ಧರಾಗಿದ್ದಾರೇ. ಜೂನ್ 27ರಂದು ಧರ್ಮಸ್ಥಳದ ಶ್ರೀ ಮಂಜುನಾಥನ ಮುಂದೆ ನಿಂತು ತಪ್ಪೊಪ್ಪಿಗೆ ಅಥವಾ ಸತ್ಯ ಸಮರ್ಪಣೆ ಮಾಡುವ ಸಾಧ್ಯತೆ ಇದೇ.

ಯಾವ ದೇವರ ಮುಂದೆ ಸುಳ್ಳು ಹೇಳಿದರೂ ಬಚಾವ್ ಆಗಬಹುದು. ಆದರೆ, ಧರ್ಮಸ್ಥಳದಲ್ಲಿ ಸುಳ್ಳು ಹೇಳಿದವನು ಬಚಾವ್ ಆಗಲಾರ ಎಂಬ ಮಾತಿದೇ. ಸುಳ್ಳು ಹೇಳಿದವನು ರವರವ ನರಕಕ್ಕೆ ಹೋಗುತ್ತಾನೆ ಎಂಬ ಪ್ರತೀತಿ ಕೂಡಾ ಇದೇ.

ಒಂದು ವೇಳೆ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರು ಧರ್ಮಸ್ಥಳದಲ್ಲಿ ಮೀಟ್ ಆಗಿ ದೇವರ ಮುಂದೆ ನಿಜ ಹೇಳುವ ಕಾರ್ಯಕ್ರಮ ರದ್ದಾದರೆ ಅದಕ್ಕೂ ಶಿಕ್ಷೆ ಇದೇ. ಮಾತಿಗೆ ತಪ್ಪಿದ ಯಾರನ್ನೂ ಮಂಜುನಾಥ ದೇವರು ಕ್ಷಮಿಸುವುದಿಲ್ಲ, ಧರ್ಮಸ್ಥಳದ ದಂಡಸಂಹಿತೆ ಪ್ರಕಾರ ಶಿಕ್ಷೆ ವಿಧಿಸುತ್ತಾನೇ.

English summary
If everything works out as decided, heavy political drama will unfold in the abode of Manjunatha in holy place Dharmasthala in Dakshina Kannada district on June 27. Read this political story like TV crime reader does.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X