ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇತ್ರಾವತಿ ನದಿ ತಿರುವಿಗೆ ನಮ್ಮ ವಿರೋಧ ಯಾಕೆಂದರೆ...

|
Google Oneindia Kannada News

ಚಿತ್ರಕೃಪೆ: ಕೇಶವ್ ವಿಟ್ಲ
ಮಂಗಳೂರು, ಜೂನ್ 20: ನೇತ್ರಾವತಿ ನದಿ ತಿರುವು ಯೋಜನೆ ಕರಾವಳಿ ಜಿಲ್ಲೆಗಳಿಗೆ ಮಾರಕವಾಗಿದ್ದು ಅದರ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲವೆಂದು ನೇತ್ರಾವತಿ ನದಿ ಬಳಕೆದಾರರ ವೇದಿಕೆ ಆಯೋಜಿಸಿದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಯೋಜನೆಗೆ ಯಾಕೆ ವಿರೋಧ? ಏನು ಸಮಸ್ಯೆ? ಸಭೆಯಲ್ಲಿ ಕೇಳಿಬಂದ ಅಭಿಪ್ರಾಯಗಳಿವು

* ಈ ಯೋಜನೆ ಮತಬ್ಯಾಂಕ್ ರಾಜಕಾರಣ ಮತ್ತು ಹಣ ಲೂಟಿ ಮಾಡುವ ಯೋಜನೆ. ಇದನ್ನು ವಿರೋಧಿಸಲು ಪ್ರತಿ ಗ್ರಾಮದಲ್ಲೂ ಸಮಿತಿ ರಚಿಸಬೇಕು: ನೇತ್ರಾವತಿ ನದಿ ಬಳಕೆದಾರರ ವೇದಿಕೆ ಸಂಚಾಲಕ ಪಿ. ವಿ. ಮೋಹನ್

* ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿರುವ ನೀರಿನ ಸಮಸ್ಯೆಗೆ ಕರಾವಳಿ ಜನರು ಕಾರಣರಲ್ಲ. ರಾಜ್ಯ, ಕೇಂದ್ರ ಸರಕಾರ ಅದರ ಜವಾಬ್ದಾರಿ ವಹಿಸಬೇಕು. ಅವರ ಬಗ್ಗೆ ನಮಗೆ ಕರುಣೆಯಿದೆ. ಹಾಗಂತ ನದಿ ನೀರನ್ನು ಅಲ್ಲಿಗೆ ತಿರುಗಿಸೋದಕ್ಕೆ ಅವಕಾಶ ನೀಡುವುದಿಲ್ಲ: ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ.

* ನೇತ್ರಾವತಿ ನದಿ ನೀರನ್ನು ಇಲ್ಲಿನ ಜನರ ಉಪಯೋಗಕ್ಕೆ ಬಳಸುವ ಒಂದೇ ಯೋಜನೆ ರೂಪಿಸಿಲ್ಲ. ನಮ್ಮ ರಾಜಕಾರಣಿಗಳು ಈ ಕುರಿತು ಚಿಂತಿಸದಿರುವುದು ವಿಷಾದನೀಯ: ಡಾ. ಎಚ್ ಜಿ ಮಯ್ಯ, ಎನ್ಐಟಿಕೆ ಪ್ರಾಧ್ಯಾಪಕರು

* ಈ ಯೋಜನೆ ಮೀನುಗಾರಿಕೆಗೆ ಹೊಡೆತ ನೀಡಲಿದೆ. ಸಮುದ್ರಕ್ಕೆ ಹರಿಯುವ ನೀರು ಕಡಿಮೆಯಾಗಿ, ಮೀನಿನ ಸಂತಾನಾಭಿವೃದ್ಧಿಗೆ ಹೊಡೆತ ನೀಡಲಿದೆ: ವಾಸುದೇವ ಬೋಳೂರು.

* ಸರಕಾರ ಎತ್ತಿನ ಹಳ್ಳ ಯೋಜನೆಯೊಂದನ್ನು ಈಗಾಗಲೇ ಸಕಲೇಶಪುರದಿಂದ ಆರಂಭಿಸಿದೆ. ಇದು ನೇತ್ರಾವತಿ ತಿರುವ ಯೋಜನೆಯಾಗಿರುವ ಸಾಧ್ಯತೆಯಿದೆ: ಸುಂದರ ರಾವ್, ಕೃಷಿಕ

* ಇದು ಕರಾವಳಿ ಜಿಲ್ಲೆಗಳಿಗೆ ಮಾರಕ: ಸಭೆಯಲ್ಲಿ ಎಲ್ಲರ ಅಭಿಪ್ರಾಯ [ಓದಿ: ನೇತ್ರಾವತಿ ಗೋಳು ಕೇಳುವವರು ಯಾರು? ]

English summary
Nethravathi Balakedarara Vedike, a forum of the river users, at a meeting opposed the government's move to divert the Nethravathi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X