ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ತಿ ಘೋಷಿಸಲು ತಯಾರಾದ ದೇಶದ ಪ್ರಥಮ ಪ್ರಜೆ

By Mahesh
|
Google Oneindia Kannada News

Pratibha Patil
ನವದೆಹಲಿ, ಜೂ.19: ಭಾರತದ ಪ್ರಥಮ ಪ್ರಜೆ ಪ್ರತಿಭಾ ಪಾಟೀಲ್ ತಮ್ಮ ಆಸ್ತಿಯನ್ನು ಶೀಘ್ರವೇ ಘೋಷಿಸಲು ನಿರ್ಧರಿಸಿದ್ದಾರೆ. ಅಧ್ಯಕ್ಷರು ತಮ್ಮ ಸಂಪತ್ತನ್ನು ಘೋಷಿಸಬೇಕು ಎಂಬ ಕಾನೂನು ಇಲ್ಲ. ಆದರೆ, ಇದೇ ಮೊದಲ ಬಾರಿಗೆ ಭಾರತದ ಪ್ರೆಸಿಡೆಂಟ್ ತಮ್ಮ ಸಂಪತ್ತನ್ನು ಬಹಿರಂಗಪಡಿಸುವ ಮೂಲಕ ಹೊಸ ಸಂಪ್ರದಾಯ ಹುಟ್ಟುಹಾಕುತ್ತಿದ್ದಾರೆ.

ಆಸ್ತಿ ವಿವರ ಬಹಿರಂಗಗೊಳಿಸುವುದು ಪ್ರತಿಭಾ ಪಾಟೀಲರಿಗೆ ಬಿಟ್ಟ ವಿಷಯ. ಅದರ ಬಗ್ಗೆ ಯಾವುದೇ ಸೂಚನೆ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಮಾಹಿತಿ ಆಯೋಗ (Central Information Commission) ಹೇಳಿಕೆ ನೀಡಿದ 48 ಗಂಟೆಗಳಲ್ಲೇ ರಾಷ್ಟ್ರಪತಿ ಕಚೇರಿಯಿಂದ ಆಸ್ತಿ ಘೋಷಣೆ ವಿಷಯ ಹೊರಬಿದ್ದಿದೆ.

ರಾಷ್ಟ್ರಾಧ್ಯಕ್ಷರು ಯಾವುದೇ ಸಾರ್ವಜನಿಕ ಪ್ರಾಧಿಕಾರದ ಮುಂದೆ ತಮ್ಮ ಆಸ್ತಿಯನ್ನು ಘೋಷಿಸಬೇಕಾಗಿಲ್ಲ. ಆದರೆ, ಪ್ರತಿಭಾ ಪಾಟೀಲ್ ಅದನ್ನು ಮಾಡಲಿದ್ದಾರೆಂದು ರಾಷ್ಟ್ರಪತಿ ಭವನದ ವಕ್ತಾರೆ ಅರ್ಚನಾ ದತ್ತಾ ತಿಳಿಸಿದ್ದಾರೆ.

ಆರ್ ಟಿಐ ಕಾಯಿದೆಗೆ ರಾಷ್ಟ್ರಪತಿಗಳನ್ನು ಒಳಪಡಿಸಲಾಗಿಲ್ಲ. ಆದರೆ, ಅವರ ಕುಟುಂಬದವರ ಆಸ್ತಿ ವಿವರ ಬಹಿರಂಗ ಪಡಿಸದೇ ಇದ್ದಲ್ಲಿ, ಮಾಹಿತಿ ಹಕ್ಕು ಕಾಯಿದೆ ಮೂಲಕ ಆಸ್ತಿ ವಿವರ ಪಡೆಯಬಹುದು. ಪ್ರತಿಭಾ ಪಾಟೀಲರ ಆಸ್ತಿ ಘೋಷಣೆಗೆ ಸ್ವಂತ ನಿರ್ಧಾರ, ಇದೇ ರೀತಿ ಸಚಿವರುಗಳು, ಜಡ್ಜ್ ಗಳು ಇತರೆ ಅಧಿಕಾರಿಗಳು ಸ್ವಪ್ರೇರಣೆಯಿಂದ ಆಸ್ತಿ ಘೋಷಿಸಿಕೊಳ್ಳುವುದು ಉತ್ತಮ ನಡೆಯಾಗುತ್ತದೆ ಎಂದು ಮಾಹಿತಿ ಆಯುಕ್ತ ಶೈಲೇಂದ್ರ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

English summary
President Pratibha Patilhas decided to declare her assets soon. This is the first time that the President of the country will be making assets public although there is no law that mandates her to do it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X