ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರ್ಮಸ್ಥಳದಲ್ಲಿ ಆಣೆ: ದೂತರಾಗಿ ಈಶ್ವರಪ್ಪ, ಶೋಭಾ ಪ್ರತ್ಯಕ್ಷ

By Mahesh
|
Google Oneindia Kannada News

KS Eshwarappa, Shobha visits Dharmasthala
ಬೆಳ್ತಂಗಡಿ, ಜೂ 19: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅವರ ನಡುವಿನ ಆಣೆ ಪ್ರಮಾಣದ ದಿನಾಂಕ ಜೂ 27 ಎಂದು ನಿಗದಿಯಾಗಿದೆ. ಇದರ ಬೆನ್ನಲ್ಲೇ ಯಡಿಯೂರಪ್ಪ ಅವರ ಪರವಾಗಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಹಾಗೂ ಸಚಿವೆ ಶೋಭಾ ಕರಂದ್ಲಾಜೆ ಅವರು ಇಂದು ಧರ್ಮಸ್ಥಳಕ್ಕೆ ಬಂದಿದ್ದು, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೊಡನೆ ಸಮಾಲೋಚನೆ ನಡೆಸಿದ್ದಾರೆ.

'ಈ ಆಣೆ ಪ್ರಮಾಣ ಎಲ್ಲಾ ವೈಯಕ್ತಿಕ ದ್ವೇಷ ದಿಂದ ಆಗುತ್ತಿದೆ. ನಮ್ಮ ಪಕ್ಷ ರಾಜಿ ಸಂಧಾನ ಮಾಡುವುದಕ್ಕೆ ಲೆಹರ್‌ಸಿಂಗ್‌ ಅವರಿಗೆ ಜಿಪಿಎ ನೀಡಿಲ್ಲ. ಜನರಿಂದ ದೂರವಾಗಿರುವ ಪಕ್ಷದ ಜೊತೆ ನಾವೇಕೆ ಮಾತನಾಡೋಣ. ಯಡಿಯೂರಪ್ಪ ಅವರಿಗೆ ಬಿಜೆಪಿಯಲ್ಲಿ ಸಂಪೂರ್ಣ ಬೆಂಬಲವಿದೆ. ಅಣೆ ಮಾಡಲು ಇಬ್ಬರು ಒಪ್ಪಿದ್ದಾರೆ. ಈ ಬಗ್ಗೆ ವೀರೇಂದ್ರ ಹೆಗ್ಗಡೆ ಅವರೊಡನೆ ಮಾತಾಡಿದ್ದೇವೆ. ಮುಂದೇನಾಗುತ್ತದೆಯೋ ಕಾದು ನೋಡಿ'ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.

ಸಿಎಂ ಹಾಗೂ ಮಾಜಿ ಸಿಎಂ ಅವರ ಪಂಥಾಹ್ವಾನ ಮಂಜುನಾಥನ ಸನ್ನಿಧಿಯವರೆಗೂ ಬಂದಿರುವುದು ಮಾಧ್ಯಮಗಳ ಮೂಲಕ ತಿಳಿಯಿತು. ಕ್ಷೇತ್ರದ ಹೆಸರನ್ನು, ವೈಯಕ್ತಿಕ ದ್ವೇಷಕ್ಕಾಗಿ ಬಳಸಿಕೊಂಡು ದುರುಪಯೋಗಪಡಿಸಿಕೊಳ್ಳುವುದು ಸರಿಯಲ್ಲ ಎಂದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಹೇಳಿದ್ದರು. ಈಗ ಸಚಿವೆ ಶೋಭಾ ಹಾಗೂ ಈಶ್ವರಪ್ಪ ಅವರ ಭೇಟಿ ನಂತರ ಪ್ರತಿಕ್ರಿಯೆ ಇನ್ನೂ ನೀಡಿಲ್ಲ.

ಧರ್ಮಸ್ಥಳ ಮಂಜುನಾಥನೇ ಸಾಕ್ಷಿ ಎಂದು ದೇವರ ಮೇಲೆ ಆಣೆ ಮಾಡಲು ಕುಮಾರಸ್ವಾಮಿ ಅವರು ಮಹೂರ್ತ ಫಿಕ್ಸ್ ಮಾಡಿದ ಮೇಲೆ, ರಾಜಕಾರಣಿಗಳ ಆಣೆ ಪ್ರಮಾಣದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗಳು ನಡೆದಿದೆ. ಜೂ 27ರಂದು ಧರ್ಮಸ್ಥಳದಲ್ಲಿ ಕುಟುಂಬ ಸಮೇತ ಬಂದು ಆಣೆ ಮಾಡುವುದಾಗಿ ಯಡಿಯೂರಪ್ಪ ಅವರು ತಮ್ಮ ರಾಜಕೀಯ ಕಾರ್ಯದರ್ಶಿ ಬಿಜೆ ಪುಟ್ಟಸ್ವಾಮಿ ಹಾಗೂ ಆಪ್ತ ಸಚಿವ ಸಮೂಹದ ಮೂಲಕ ಹೇಳಿಸಿದ್ದರು.

English summary
Chief Minister BS Yeddyurappa and EX CM HD Kumaraswamy to take truth test at the Sri Kshetra Dharmasthala on June 27. Kumaraswamy has accepted the challenge. Meanwhile minister Shobha Karandlaje and BJP state president KS Eshwarappa visited Dharmasthala met Dharmadhikari Dr. Veerendra Heggade in this regard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X