ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್‌ಬುಕ್‌ ಕಳ್ಳತನ: ಫೇಸ್‌ಬುಕ್‌ 'ಗೆಳೆಯರೇ' ಹುಷಾರು

By Srinath
|
Google Oneindia Kannada News

Thieves use Facebook to rob
ಲಂಡನ್‌, ಜೂನ್ 18: ಚೋರರು ಫೇಸ್‌ಬುಕ್‌ ಬಳಸಿ ಕಳ್ಳತನಕ್ಕೆ ಇಳಿದಿದ್ದಾರೆ ಹುಷಾರು. ಫೇಸ್‌ಬುಕ್‌ನಲ್ಲಿ ಸ್ನೇಹಿತರಾಗುವ ಈ ಕಳ್ಳರು ಪ್ರವಾಸದ ದಿನ ಸಮಯವನ್ನೆಲ್ಲ ನೋಟ್ ಮಾಡಿಕೊಂಡು ಸೀದಾ ನಿಮ್ಮ ಮನೆಗೆ ಕನ್ನ ಹಾಕುತ್ತಾರೆ.

ಲಂಡನ್‌ನ ವೆಸ್ಟ್‌ ಸಸ್ಸೆಕ್ಸ್‌ನಲ್ಲಿ ಇಂತಹ ಕಳ್ಳರ ಹಾವಳಿ ಜೋರಾಗಿದೆ. ಮನೆಯವರ ರಜೆಯ ಯೋಜನೆಗಳನ್ನೆಲ್ಲ ಫೇಸ್‌ಬುಕ್‌ ಮೂಲಕ ಸ್ನೇಹಿತರಂತೆ ಸೋಗುಹಾಕಿ ತಿಳಿದುಕೊಂಡು ಯಾವುದೇ ಅಡಚಣೆಯಿಲ್ಲದೆ ದೋಚುವ ಅತ್ಯಾಧುನಿಕ ವಿಧಾನ ಇದು.

ಇಂತಹ ಕನಿಷ್ಠ 12 ಕಳ್ಳತನಗಳು ಸಂಭವಿಸಿದ ಬಳಿಕ ಪೊಲೀಸರು ಫೇಸ್‌ಬುಕ್‌ನಲ್ಲಿ ರಜೆಯ ಯೋಜನೆಗಳನ್ನು ಜಾಹೀರುಗೊಳಿಸಬೇಡಿ ಎಂದು ವಿನಂತಿಸಿದ್ದಾರೆ. ಮನೆಯವರು ಒಂದೆರಡು ವಾರಗಳ ಅವಧಿಗೆ ಪ್ರವಾಸ ಹೋಗಿದ್ದಾಗಲೇ ಹೆಚ್ಚಿನ ಕಳ್ಳತನಗಳು ಸಂಭವಿಸಿವೆ. ಇಂತಹ ದೀರ್ಘಾವಧಿಯ ಪ್ರವಾಸಗಳು ಕಳ್ಳರಿಗೆ ಕಳ್ಳತನದ ಸಂಚು ರೂಪಿಸಲು ಸಾಕಷ್ಟು ಕಾಲಾವಕಾಶ ಕೊಡುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

English summary
Thieves in Britain are inviting Facebook users to become 'friends' in order to find out when they will go on holiday so that they can rob their homes. 12 houses have been robbed in the past four months. police have urged people not to reveal their holiday plans on the website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X