ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಕಾಂಗ್ರೆಸ್ ಸಾರಥ್ಯ ಮತ್ತೆ ಕೃಷ್ಣ ಕೈಗೆ?

By Srinath
|
Google Oneindia Kannada News

SM Krishna
ಬೆಂಗಳೂರು, ಜೂ 18: ಕೇಂದ್ರ ಸಚಿವ ಎಸ್ ಎಂ ಕೃಷ್ಣ ರಾಜ್ಯ ಕಾಂಗ್ರೆಸ್ ಸಾರಥ್ಯ ವಹಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ರಾಜ್ಯದಲ್ಲಿ ಪ್ರಭಾವಿ ಸಮುದಾಯಗಳಾದ ಲಿಂಗಾಯಿತ, ಒಕ್ಕಲಿಗ, ಪರಿಶಿಷ್ಟ ಜಾತಿ ಮತ್ತು ಪಂಗಡದವರ ವಿಶ್ವಾಸಗಳಿಸಿ ಮುಂದಿನ ಚುನಾವಣೆಗೆ ಅನುಕೂಲಕರ ಭೂಮಿಕೆ ಸಿದ್ದಪಡಿಸಲು ಹೈಕಮಾಂಡ್ ಇಂತಹ ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ.

ದಾಖಲಾರ್ಹವೆಂದರೆ, 1999ರಲ್ಲಿ ಎಸ್ ಎಂ ಕೃಷ್ಣ KPCC ಚುಕ್ಕಾಣಿ ಹಿಡಿದಿದ್ದಾಗ ಕಾಂಗ್ರೆಸ್ ಜಯಭೇರಿಯಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಸೋತು ಹೈರಾಣವಾಗಿರುವ ಪಕ್ಷಕ್ಕೆ ಚೈತನ್ಯ ತುಂಬಲು ಸೂಕ್ತ ನಾಯಕ ಎಂದರೆ ಕೃಷ್ಣ ಒಬ್ಬರೇ ಎನ್ನುವ ನಿರ್ಣಯಕ್ಕೆ ಹೈಕಮಾಂಡ್ ಬಂದಿದೆ.

ಅಸಮಾಧಾನಗೊಂಡ ನಾಯಕರನ್ನು ಒಟ್ಟಿಗೆ ಕರೆದೊಯ್ಯುವ ಜವಾಬ್ದಾರಿ ಕೃಷ್ಣ ಹೆಗಲೇರಿದೆ. ಅಲ್ಲದೆ ಅತೃಪ್ತಿಯಲ್ಲಿ ಮುಳುಗಿರುವ ನಾಯಕರುಗಳ ಮನಸು ಹಗುರಗೊಳಿಸಿ, ಪಕ್ಷ ಸಂಘಟನೆಗೆ ಹುರಿದುಂಬಿಸುವ ಕಾಯಕವನ್ನು ಕೃಷ್ಣಗೆ ವಹಿಸಲು ಹೈಕಮಾಂಡ್ ಚಿಂತನೆ ನಡೆಸಿದೆ.

ವಲಸೆ ನಾಯಕರುಗಳಿಂದ ತುಂಬಿ ಒಡೆದ ಮನೆಯಂತಾಗಿರುವ ಪಕ್ಷದಲ್ಲಿ ಮೂಲ ಕಾಂಗ್ರೆಸಿಗರು ಮತ್ತು ವಲಸೆ ಕಾಂಗ್ರೆಸಿಗರ ಮಧ್ಯೆ ಭಾರೀ ಬಿರುಕು ಬಿಟ್ಟಿದ್ದು ಅಂತ ಮನಸಿಗೆ ಬೆಸುಗೆ ಹಾಕುವಂತ ದೊಡ್ಡ ಜವಾಬ್ದಾರಿಯನ್ನು ಕೃಷ್ಣ ಅವರಿಗೆ ವಹಿಸಲು ದೆಹಲಿ ಮಟ್ಟದಲ್ಲಿ ಗಂಭೀರ ಚರ್ಚೆ ನಡೆದಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

English summary
In all probability S.M. Krishna will be brought back to the State to lead the Congress campaign in the upcoming elections to the Assembly. According to sources in Congress party, the high command is reportedly considering a shake-up of the State unit to take on the ruling BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X