ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಮನ್‌ ಮನೆಗೆಲಸ: ಜೂ. 20ರಿಂದ ಕಾನೂನು ಬಿಗಿ

By Srinath
|
Google Oneindia Kannada News

Oman housemaids
ಮಸ್ಕತ್, ಜೂನ್ 17: ಮನೆಗೆಲಸ ಉದ್ಯೋಗವನ್ನರಸಿ ಕೊಲ್ಲಿ ರಾಷ್ಟ್ರ ಒಮನ್‌ಗೆ ತೆರಳುವ ಮಹಿಳೆಯರ ಸೇವಾ ಒಪ್ಪಂದಗಳಲ್ಲಿ ಜೂನ್ 20ರಿಂದ ಜಾರಿಗೆ ಬರುವಂತೆ ಭಾರತ ಸರ್ಕಾರ ಕೆಲವು ನಿಯಮಗಳನ್ನು ಬಿಗಿಗೊಳಿಸಿದೆ.

'ಮನೆಕೆಲಸ ಮಾಡುವ ಮಹಿಳೆಯರನ್ನು ರಕ್ಷಿಸುವ ಸಲುವಾಗಿ ಮತ್ತು ಕೌಶಲ್ಯ ಹೊಂದಿದವರನ್ನು ಮನೆಗೆಲಸಕ್ಕೆ ಕಳುಹಿಸುವ ಸಲುವಾಗಿ ಈ ಮಹತ್ತರ ಬದಲಾವಣೆಗಳನ್ನು ಮಾಡಲಾಗಿದೆ' ಎಂದು ಒಮನ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯ ಹೇಳಿಕೆ ತಿಳಿಸಿದೆ.

ಸಾಗರೋತ್ತರ ಭಾರತೀಯ ವ್ಯವಹಾರ ಸಚಿವಾಲಯ ಮತ್ತು ಒಮನ್ ಸಚಿವಾಲಯದ ಪ್ರತಿನಿಧಿಗಳ ನಡುವೆ ನಡೆದ ಮಾತುಕತೆಯ ವೇಳೆ ಈ ವಿಷಯ ಪ್ರಸ್ತಾಪಿಸಲಾಗಿದೆ. ಹೊಸ ನಿಯಮದ ಪ್ರಕಾರ ಕೆಲಸ ನೀಡುವ ಮನೆಯ ಮಾಲೀಕರು ಪ್ರತಿ ತಿಂಗಳಿಗೆ 1000 ಒಮಾನಿ ರಿಯಾಲ್ (259 ಡಾಲರ್) ನೀಡುವ ಕುರಿತಂತೆ ವೇತನ ಪ್ರಮಾಣ ಪತ್ರ ನೀಡಬೇಕು. ಜತೆಗೆ ಕೆಲಸಕ್ಕೆ ನೇಮಿಸುವ ವೇಳೆ 1100 ರಿಯಾಲ್‌ ನಷ್ಟು ಬ್ಯಾಂಕ್ ಗ್ಯಾರಂಟಿ ಇರುವ ದಾಖಲೆಯನ್ನು ಪ್ರದರ್ಶಿಸಬೇಕು.

ಈ ಭದ್ರತಾ ಠೇವಣಿಯನ್ನು ಸಾಮಾನ್ಯವಾಗಿ ಮಾಲೀಕರಿಗೆ ಹಿಂತಿರುಗಿಸಲಾಗುತ್ತದೆ. ಆದರೆ ಕೆಲವು ವಿಶೇಷ ಸಂದರ್ಭಗಳಲ್ಲಿ ಅವರನ್ನು ಸ್ವದೇಶಕ್ಕೆ ಕಳುಹಿಸಲು ಈ ಹಣವನ್ನು ಬಳಸಲಾಗುವುದು ಎಂದು ತಿಳಿಸಿದೆ. ಒಂದು ವೇಳೆ ಮಾಲೀಕ ಅವರನ್ನು ಇನ್ನೊಬ್ಬರಿಗೆ ವಹಿಸುವುದಾದಲ್ಲಿ ಹೊಸ ಮಾಲೀಕ ಹೊಸ ಕರಾರುಪತ್ರಕ್ಕೆ ಸಹಿ ಹಾಕಬೇಕು ಎಂದೂ ಹೇಳಿಕೆ ತಿಳಿಸಿದೆ. ಜತೆಗೆ ಸಂಬಳವನ್ನು ಬ್ಯಾಂಕ್ ಮೂಲಕವೇ ನೀಡಬೇಕು ಎಂದೂ ಹೊಸ ನಿಯಮ ಸ್ಪಷ್ಟಪಡಿಸಿದೆ.

;

English summary
The Indian government has decided to tighten service contract regulations to protect Indian housemaids taking up employment in the Gulf nations with effect from June 20, 2011
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X