ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ್ಪಿಟ್ಟು ಮಾಡಿ 100,000 ಡಾಲರ್ ಗೆದ್ದ ಬಾಣಸಿಗ

By Mahesh
|
Google Oneindia Kannada News

Indian-origin chef Floyd Cardoz winsTop Chef Masters America
ನ್ಯೂಯಾರ್ಕ್ ಜೂ 17: ಭಾರತೀಯ ಮೂಲದ ಬಾಣಸಿಗ ಫ್ಲೊಯ್ಡ್ ಕಾರ್ಡೊಜ್ ಅಮೆರಿಕದ ಹೆಸರಾಂತ ರಿಯಾಲಿಟಿ ಶೋ "ಟಾಪ್ ಚೆಫ್ ಮಾಸ್ಟರ್" ನ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಫ್ಲೊಯ್ಡ್ ಕಾರ್ಡೊಜ್ ಕೈಗೆ 100,000 ಅಮೆರಿಕನ್ ಡಾಲರ್ ದೊರೆಕಿಸಿಕೊಟ್ಟ ತಿಂಡಿ ಮತ್ತ್ಯಾದು ಅಲ್ಲ ಉಪ್ಪಿಟ್ಟು. ಫೊಯ್ಡ್ ತಯಾರಿಸಿದ ಉಪ್ಪಿಟ್ಟಿಗೆ ಅಮೆರಿಕ ಮನಸೋತಿದೆ.

ಮುಂಬೈನಲ್ಲಿ ಜನಿಸಿದ ಕಾರ್ಡೊಜ್, ಗೋಧಿ ರವೆ ಹಾಗೂ ಮಶ್ರೂಮ್ ಬಳಸಿ ತಯಾರಿಸಿದ ಉಪ್ಪಿಟ್ಟು, ಲಾಸ್ ಏಂಜಲೀಸ್ ಹಾಗೂ ಸ್ಯಾನ್ ಫ್ರಾನಿಸ್ಕೋದ ಪ್ರತಿಸ್ಪರ್ಧಿಗಳ ತಿಂಡಿಯನ್ನು ಹಿಂದಕ್ಕೆ ಹಾಕಿದೆ. ಟಾಪ್ ಚೆಫ್ ಮಾಸ್ಟರ್ಸ್ ನ ಮೂರನೇ ಸೀಸನ್ ನಲ್ಲಿ ಲಾಸ್ ಏಂಜಲೀಸ್ ನ ಮಿಲ್ಲಿಕನ್ ರನ್ನು ಮನಿಸದೆ ಹಿಂದೆ ಬಿದ್ದದ್ದ ಕಾರ್ಡೊಜ್ ಈಗ ಸೇಡು ತೀರಿಸಿಕೊಂಡಿದ್ದಾರೆ.

ನ್ಯೂಯಾರ್ಕ್ ನಲ್ಲಿ ನೆಲೆಸಿರುವ ಕಾರ್ಡೊಜ್ ಈ ಸ್ಪರ್ಧೆಯಲ್ಲು ಗೆದ್ದಿರುವುದು ಅಚ್ಚರಿ ಮೂಡಿಸಿದೆ. ಸ್ಪರ್ಧೆ ಕಠಿಣವಾಗಿತ್ತು. ಮಿಲ್ಲಿಕೆನ್ ಗೆಲ್ಲುವ ನಿರೀಕ್ಷೆಯಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ. ಒಳ್ಳೆ ತಿನಿಸು ತಯಾರಿಸಲು ಒಳ್ಳೆ ಭಾವನೆಗಳು ನಿಮ್ಮಲಿರಬೇಕು ಆಗ ನಿಮ್ಮ ಅತಿಥಿಗಳ ಮನಸ್ಸನ್ನು ಅರಿತು ಅದಕ್ಕೆ ತಕ್ಕಂತೆ ತಿಂಡಿ ತಯಾರಿಸಬಹುದು ಎನ್ನುತ್ತಾರೆ ಕಾರ್ಡೊಜ್.

ಭಾರತೀಯ ರೆಸ್ಟೋರೆಂಟ್ ವೊಂದರಲ್ಲಿ ನೌಕರಿಗಿದ್ದ ಕಾರ್ಡೊಜ್, ರುಚಿ ತಜ್ಞನಾಗಿ ಪ್ರಸಿದ್ಧಿ. ಹಿಂದೆ ಎಂದೋ ಮಾಡಿದ ಸ್ಮರಣೀಯ ತಿನಿಸನ್ನು ಮತ್ತೆ ತಯಾರಿಸಿ ಅದೇ ಸ್ವಾದ, ರುಚಿಯನ್ನು ಉಳಿಸಿಕೊಳ್ಳುವಂತೆ ಮಾಡುವಲ್ಲಿ ಕಾರ್ಡೊಜ್ ಯಶಸ್ವಿಯಾಗಿದ್ದೆ ಸ್ಪರ್ಧೆ ಗೆಲ್ಲಲು ಸಹಾಯಕವಾಗಿದೆ ಎಂದು ಎಂಗ್ಜಾಮ್.ಕಾಮ್ ವರದಿ ಮಾಡಿದೆ.

ಸುಮ್ನೆ ತಮಾಷಿಗೆ: ಅಮೆರಿಕದಲ್ಲಿದ್ದಾಗ ಸುಮಾರು ನಾಲ್ಕು ವರ್ಷಗಳ ಬರೀ ಉಪ್ಪಿಟ್ಟು ಮಾಡಿಕೊಂಡು ಜೀವಿಸಿದ್ದ ನಮ್ಮ ಎಚ್ ನರಸಿಂಹಯ್ಯ ಅವರ ಉಪ್ಪಿಟ್ಟಿನ ವಾಸನೆ ಮುಂಬೈ ಬಾಣಸಿಗನಿಗೆ ಸ್ಪೂರ್ತಿ ಆಯಿಯೋ ಏನೋ ಗೊತ್ತಿಲ್ಲ. ಉಪ್ಪಿಟ್ಟು ಎಂದರೆ ಭಾರತದಲ್ಲಿ ಇಂದಿಗೂ ಮೂಗು ಮುರಿಯುತ್ತಾರೆ. ಆದರೆ, ಉಪ್ಪಿಟ್ಟಿನ ನಿಜವಾದ ಬೆಲೆ ವಿದೇಶದ ಈ ಸ್ಪರ್ಧೆಯಿಂದ ಜಗಜ್ಜಾಹೀರಾಗಿದೆ.

;
English summary
Indian-origin chef Floyd Cardoz has been crowned the winner of America's much-watched 'Top Chef Masters' contest and took home a whopping USD 100,000 prize after wowing the judges with a humble upma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X