ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಲೌಡ್ ಕಂಪ್ಯೂಟಿಂಗ್ : ತೊಷಿಬಾ ಜತೆ ಎಚ್ ಪಿ

By * ಇಂದ್ರೇಶ್
|
Google Oneindia Kannada News

HP
ಟೊಕಿಯೋ, ಜೂ 17: ಜಪಾನ್ ನ ತೊಷಿಬಾ ಕಾರ್ಪೊರೇಷನ್ ಹಾಗೂ ಹ್ಯೂಲೆಟ್ ಪ್ಯಾಕರ್ಡ್(HP) ಕಂಪೆನಿ ಕ್ಲೌಡ್ ಕಂಪ್ಯೂಟಿಂಗ್ ಸರ್ವಿಸ್ ಗಳ ಸಂಬಂಧಿತ ಸಹಯೋಗವನ್ನು ಮಾಡಿಕೊಂಡಿದೆ.

ಈ ಸಹಯೋಗದ ಮೂಲಕ ಸಾರ್ವಜನಿಕ ಸೇವೆಗಳಾದ ವಿದ್ಯುತ್, ನೀರು, ಅನಿಲ ರಂಗದಲ್ಲಿ ಮಾಹಿತಿ ತಂತ್ರಜ್ಞಾನ ಸೇವೆಗಳನ್ನು ಒದಗಿಸಲಿದೆ. ಜಪಾನ್ ನಲ್ಲಿ ಕಳೆದ ಮಾರ್ಚ್ ನಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಆಣು ಸ್ಥಾವರ ಗಳಲ್ಲಿನ ಆಸಕ್ತಿಯನ್ನು ಕಡಿಮೆ ಮಾಡಬೇಕೆಂದು ತೊಷಿಬಾ ಮೇಲೆ ಒತ್ತಡವಿದ್ದು ಈ ರೀತಿಯ ಸೇವೆಗಳನ್ನು ಒದಗಿಸುವ ಮೂಲಕ ತನ್ನ ಸ್ಮಾರ್ಟ್ ಕಮ್ಯುನಿಟಿ ಮಾರಾಟವನ್ನು ಈಗಿನ 300 ಬಿಲಿಯನ್ ಯೆನ್ ಗಳಿಂದ 2015 ರ ವೇಳೆಗೆ 900 ಬಿಲಿಯನ್ ಯೆನ್ ಗಳಿಗೇರಿಸಲು ಯೋಜನೆ ಹಾಕಿಕೊಂಡಿದೆ.

ಕೈಗಾರಿಕಾ ಎಲೆಕ್ಟ್ರಾನಿಕ್ ಕಂಪೆನಿಯಾದ ತೊಷಿಬಾ, ರಿಯಾಕ್ಟರ್, ಚಿಪ್, ವಾಷಿಂಗ್ ಮೆಷೀನ್ ಗಳನ್ನು ತಯಾರು ಮಾಡುತ್ತಿದ್ದು, ಟೊಕಿಯೊ ಎಲೆಕ್ಟ್ರಿಕ್ ಕಂಪೆನಿಯ ಅಧೀನದಲ್ಲಿರುವ ಫೂಕುಷಿಮಾ ಅಣು ಸ್ಥಾವರದ ನಿರ್ವಹಣೆಯನ್ನೂ ಮಾಡುತ್ತಿದೆ. ಅಲ್ಲದೆ ನವೀಕೃತ ಇಂಧನ ಬಳಕೆ ಹೆಚ್ಚಳಕ್ಕಾಗಿ ತನ್ನ 39 ಅಣು ರಿಯಾಕ್ಟರ್‌ಗಳ ಗುತ್ತಿಗೆ ಯನ್ನು ಎರಡರಿಂದ ಮೂರು ವರ್ಷಗಳವರೆಗೆ ಮುಂದೂಡುವುದಾಗಿಯೂ ಹೇಳಿದೆ.

English summary
Hewlett-Packard(HP) and Toshiba will collaborate on Cloud computing. The companies work together in the areas like water supply, energy, health-care and transportation and improve critical infrastructure areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X