ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವಮಾನವನಿಗೆ 9 ಕೋಟಿ ದಂಡ ವಿಧಿಸಿದ ಸುಪ್ರೀಂಕೋರ್ಟ್

By Mahesh
|
Google Oneindia Kannada News

Godman Chandraswami
ನವದೆಹಲಿ ಜೂ. 16: ವಿದೇಶಿ ವಿನಿಮಯ ನಿಯಂತ್ರಕ ಕಾಯ್ದೆ (ಎಫ್‌ಇಆರ್‌ಎ)ಯ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ವಘೋಷಿತ ದೇವ ಮಾನವ ಚಂದ್ರಸ್ವಾಮಿಗೆ 9 ಕೋಟಿ ರು ದಂಡ ವಿಧಿಸಿದೆ. ಎನ್‌ಫೋರ್ಸ್ ಮೆಂಟ್ ಡೈರೆಕ್ಟೊರೇಟ್ (Enforcement Directorate)ಗೆ ಜುಲೈ ಎರಡನೆ ವಾರದೊಳಗೆ ಚಂದ್ರಸ್ವಾಮಿ ದಂಡ ಕಟ್ಟಬೇಕಿದೆ. ಆದರೆ, ಎಲ್ಲವನ್ನು ಕಳೆದು ಕೊಂಡು ಶಕ್ತಿಹೀನನಾದ ಸ್ವಾಮಿ, ಹಣ ಸಂಗ್ರಹಕ್ಕೆ ಮೂರು ತಿಂಗಳ ಕಾಲಾವಧಿ ಬೇಡಿದ್ದಾನೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿಎಸ್ ಚೌಹಾಣ್ ಮತ್ತು ಸ್ವತಂತರ್ ಕುಮಾರ್‌ರನ್ನೊಳಗೊಂಡ ನ್ಯಾಯಪೀಠ ಚಂದ್ರಸ್ವಾಮಿ ಮತ್ತು ಆತನ ಸಹಚರ ವಿಕ್ರಮ್ ಕುಮಾರ್‌ ವಿರುದ್ಧ ಆದೇಶಿಸಿದೆ. ಮೊದಲ ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿ ರೂ. 25 ಲಕ್ಷ ಪಾವತಿಸಿ, ಇನ್ನುಳಿದ ಎಲ್ಲ ಪ್ರಕರಣಗಳಿಗೆ ದಂಡ ಪಾವತಿಸುವುದ ರಿಂದ ವಿನಾಯತಿ ನೀಡುವಂತೆ ಚಂದ್ರಸ್ವಾಮಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ಮನವಿಯನ್ನು ತಿರಸ್ಕರಿಸಿರುವ ನ್ಯಾಯಪೀಠ, ಸಂಪೂಣ ದಂಡವನ್ನು ಬ್ಯಾಂಕ್ ಡ್ರಾಫ್ಟ್ ಮುಖಾಂತರ ನೀಡಬೇಕು ಎಂದು ಆದೇಶಿಸಿದೆ.

ಆತ ಹಣ ಪಾವತಿಸುತ್ತಾನೆ, ಆದರೆ ಒಂದೇ ಹಂತದಲ್ಲಿ ಸಂಪೂರ್ಣ ಮೊತ್ತವನ್ನು ಪಾವತಿಸಲು ಆದೇಶಿಸುವುದು ತುಂಬಾ ಕಷ್ಟಕರ ಮತ್ತು ಕಠಿಣ ನಿರ್ಧಾರವಾಗುತ್ತದೆ ಎಂದು ಚಂದ್ರಸ್ವಾಮಿ ಪರ ನ್ಯಾಯವಾದಿಗಳು ನ್ಯಾಯಾಲಯದಲ್ಲಿ ವಾದಿಸಿದ್ದರು. ಎಫ್‌ಇಆರ್‌ಎ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದ 13 ಪ್ರಕರಣಗಳು ಚಂದ್ರಸ್ವಾಮಿಯ ವಿರುದ್ಧ ದಾಖಲಾಗಿದ್ದವು. ಈ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿ ಆತ ರೂ. 9 ಕೋಟಿ ದಂಡ ಪಾವತಿಸುವಂತೆ ED ಆದೇಶಿಸಿತ್ತು

ಈ ಮೊದಲು ರೂ. 9 ಕೋಟಿ ದಂಡ ಪಾವತಿಸುವಂತೆ ವಿದೇಶಿ ವಿನಿಮ ಯಕ್ಕೆ ಸಂಬಂಧಿಸಿದ ಟ್ರಿಬ್ಯೂ ನಲ್ ಚಂದ್ರಸ್ವಾಮಿಗೆ ಆದೇಶಿಸಿತ್ತು. ಆದರೆ ಈ ಆದೇಶವನ್ನು ಚಂದ್ರಸ್ವಾಮಿ ದಿಲ್ಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ದಿಲ್ಲಿ ಹೈಕೋರ್ಟ್ ಕೂಡ ಸ್ವಾಮಿಯ ಅರ್ಜಿಯನ್ನು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಚಂದ್ರಸ್ವಾಮಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದನು.

English summary
Godman Nemi Chand Jain aka Chandraswami have to pay hefty penalty of Rs 9 crores in foreign exchange law violations cases. After losing lot of political ground godman went through severe financial crunch. Now he has asked court to give three months to gather the funds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X