ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಯಕ ಎಂಎಸ್ ಧೋನಿ ಮೈಸೂರು ಕೂಸು ಅಗಸ್ತ್ಯ

By Bm Lavakumar
|
Google Oneindia Kannada News

ಮೈಸೂರು, ಜೂನ್ 16: ನಮ್ಮ ಕ್ರಿಕೆಟ್ ಆಟಗಾರರು ಪ್ರಾಣಿ ಪ್ರೇಮ ಹೆಚ್ಚಾಗುತ್ತಿದೆ. ಇದಕ್ಕೆ ಮೈಸೂರು ಮೃಗಾಲಯದಲ್ಲಿರುವ ಪ್ರಾಣಿಗಳನ್ನು ಅವರು ದತ್ತು ತೆಗೆದುಕೊಳ್ಳುತ್ತಿರುವುದೇ ಸಾಕ್ಷಿಯಾಗಿದೆ. ಈಗಾಗಲೇ ಮಧುಕೇಶ್ವರ ಎಂಬ ಹುಲಿಯನ್ನು ಜಹೀರ್ ಖಾನ್ ಒಂದು ವರ್ಷದ ಅವಧಿಗೆ ಒಂದು ಲಕ್ಷ ರೂಪಾಯಿಗೆ ದತ್ತು ಪಡೆದಿದ್ದರೆ, ಗೌರಿಶಂಕರ ಎಂಬ ಸಿಂಹಗಳನ್ನು ಅನಿಲ್‌ಕುಂಬ್ಳೆ, ಚಿರತೆಯನ್ನು ಜಾವಗಲ್ ಶ್ರೀನಾಥ್ ದತ್ತು ಪಡೆದಿದ್ದಾರೆ.

ಇದೀಗ ಟೀಂ ಇಂಡಿಯಾದ ಕ್ಯಾಪ್ಟನ್ ಎಂ.ಎಸ್.ಧೋನಿ ಅಗಸ್ತ್ಯ ಎಂಬ 9 ವರ್ಷದ ಹುಲಿಯನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ. ಈ ವಿಷಯವನ್ನು ಅವರು ತಮ್ಮ ಗೆಳೆಯ ಜಾವಗಲ್ ಶ್ರೀನಾಥ್ ಅವರಿಗೆ ಇಮೇಲ್ ಮೂಲಕ ತಿಳಿಸಿದ್ದಾರೆ ಎನ್ನಲಾಗಿದೆ.

ಮೈಸೂರು ಮೃಗಾಲಯದಲ್ಲಿರುವ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆಯುವ ಬಗ್ಗೆ ಆಸಕ್ತಿಯಿರುವವರು ಮೃಗಾಲಯದ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಯೋಗ ಗುರು ಬಿಕೆಎಸ್ ಅಯ್ಯಂಗಾರ್ ಅವರು ಕೂಡ ಒಂದೊಂದು ಹುಲಿಯನ್ನು ದತ್ತು ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

English summary
Team India Captain Mahendra Singh Dhoni has adopted a nine-year-old tiger named Agasthya. MS Dhoni is seen very active in Save the Tiger campaign. Former Indian Pacer Javagal Srinath and Dhoni visited Mysore Zoo last day. Dhoni also gave a cheque of Rupees one lakh to take care of Agasthya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X