ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂರಾರು ಯೋಜನೆ 68 ಸಾವಿರ ಕೋಟಿ ಹೂಡಿಕೆ: ನಿರಾಣಿ

By Mahesh
|
Google Oneindia Kannada News

Minister Murugesh R Nirani
ಬೆಂಗಳೂರು ಜೂ 16: ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರ ಕೈಗೊಂಡಿರುವ ನೂರಾರು ಸಾರ್ವಜನಿಕ ಯೋಜನೆಗಳಿಗೆ ಒಟ್ಟು 68,000 ಕೋಟಿ ರು ಬಂಡವಾಳ ಹೂಡಲಾಗಿದೆ ಎಂದು ಭಾರಿ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಹೇಳಿದ್ದಾರೆ.

ಎರಡು ದಿನಗಳ ಭಾರತ ಪ್ರವಾಸಕ್ಕೆ ಬಂದಿರುವ ಸ್ಲೋವೆನಿಯಾ ಪ್ರಧಾನಿ ಬೊರುತ್ ಪಹೋರ್ ಅವರೊಡನೆ ಸಂವಾದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಚಿವ ನಿರಾಣಿ, ರಾಜ್ಯದ ಬಂಡವಾಳ ಹೂಡಿಕೆ ವಿವರ ಬಿಚ್ಚಿಟ್ಟರು.

ಲ್ಯಾಂಡ್ ಬ್ಯಾಂಕ್ ಯೋಜನೆಯಡಿಯಲ್ಲಿ ಕೈಗಾರಿಕೆಗಳಿಗಾಗಿ ಒಂದು ಲಕ್ಷ ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಅದರಲ್ಲಿ 83,000 ಎಕರೆಗೆ ನೋಟಿಫಿಕೇಷನ್ ನೀಡಲಾಗಿದೆ. ಶೀಘ್ರದಲ್ಲೆ ಅಷ್ಟೂ ಭೂಮಿ ಸರ್ಕಾರದ ವಶಕ್ಕೆ ಬರಲಿದೆ.

ಜಿಎಂ 2010 ಎಫೆಕ್ಟ್: 2010ರ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದ ಫಲವಾಗಿ 389 ಕಂಪೆನಿಗಳ ಜೊತೆ ಸುಮಾರು 87.5 ಬಿಲಿಯನ್ ಯುಎಸ್ ಡಾಲರ್ ಮೊತ್ತದ ಬಂಡವಾಳ ಹರಿದು ಬಂದಿದೆ. 19 ಯೋಜನೆಗಳು ಈಗಾಗಲೇ ಕಾರ್ಯಗತವಾಗಿದ್ದು, 222 ಯೋಜನೆಗಳ ಅನುಷ್ಠಾನ ಪ್ರಗತಿಯಲ್ಲಿದೆ.52 ವಿಶೇಷ ಆರ್ಥಿಕ ವಲಯಗಳಿಗೆ ಅನುಮೋದನೆ ನೀಡಲಾಗಿದೆ. ಅದರಲ್ಲಿ 20 ಚಾಲನೆಯಲ್ಲಿದೆ ಎಂದು ನಿರಾಣಿ ವಿವರಿಸಿದರು.

ಸ್ಲೋವೆನಿಯಾಗೆ ಆಹ್ವಾನ 2012ರಲ್ಲಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಆಯೋಜಿಸಲಾಗುವುದು. ಹಾಗೂ ಸ್ಲೋವೆನಿಯಾ ದೇಶವನ್ನು ಕಾರ್ಯಕ್ರಮದ ಸಹಭಾಗಿಯಾಗಲು ಆಹ್ವಾನಿಸಲಾಗಿದೆ. ಇದು ಪರಸ್ಪರ ಎರಡೂ ಕಡೆಗಳಲ್ಲಿ ಬಂಡವಾಳ ಹೂಡಿಕೆಗೆ ಸಹಾಯಕವಾಗಲಿದೆ ಎಂದು ಮುರುಗೇಶ್ ನಿರಾಣಿ ಹೇಳಿದ್ದಾರೆ.

English summary
Karnataka government has invested more than Rs 68,000 crore on 100 public-private-partnership model projects said Large and Medium Industries Minister Murugesh R Nirani. Next global investors meet will be held in June 2012 he added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X