ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶತಕದ ಸಂಭ್ರಮದಲ್ಲಿ ಸಾಫ್ಟ್ ವೇರ್ ದಿಗ್ಗಜ ಐಬಿಎಂ

By Mahesh
|
Google Oneindia Kannada News

IBM turns 100
ಬೆಂಗಳೂರು ಜೂ 16: ಐಬಿಎಂ ಎಂದೆ ಜನಜನಿತವಾಗಿರುವ ಇಂಟರ್ ನ್ಯಾಷನಲ್ ಬಿಸಿನೆಸ್ ಮೆಷಿನ್ಸ್(IBM)ಗೆ ಇಂದು 100ರ ಸಂಭ್ರಮ. ಜಗತ್ತಿನಾದ್ಯಂತ ಸಾಫ್ಟ್ ವೇರ್ ಮಾರುಕಟ್ಟೆ ಸ್ಥಿತಿ ಹದಗೆಟ್ಟಿರುವ ಸಂದರ್ಭದಲ್ಲಿ ಐಬಿಎಂ ಸಂಭ್ರಮದ ಸ್ಥಿತಿಯಲ್ಲಿದೆ. ಸುಮಾರು 100 ಬಿಲಿಯನ್ ಡಾಲರ್ ತೂಗುವ ಸಾಫ್ಟ್ ವೇರ್ ದಿಗ್ಗಜ, ಭಾರತದಲ್ಲೂ ತನ್ನ ಅಸ್ತಿತ್ವವನ್ನು ಭದ್ರವಾಗಿ ಸ್ಥಾಪಿಸಿಕೊಂಡಿದೆ. ಸುಮಾರು 1.2ಲಕ್ಷಕ್ಕೂ ಅಧಿಕ ಉದ್ಯೋಗಿಗಳು ಐಬಿಎಂನ ಈ ಸಂಭ್ರಮ ದಿನವನ್ನು ಆಚರಿಸುತ್ತಿದ್ದಾರೆ.

ಏರ್ ಟೆಲ್, ವೊಡಾಫೋನ್ , ಐಡಿಯಾ ಹಾಗೂ ಬಿಎಸ್ ಎನ್ ಎಲ್ ಟೆಲಿಕಾಂ ಸಂಸ್ಥೆಗಳಿಗೆ ಐಬಿಎಂ ಸಾಫ್ಟ್ ವೇರ್ ಸೌಲಭ್ಯ ಒಗದಿಸಿದೆ. ಸುಮಾರು 400 ಮಿಲಿಯನ್ ಮೊಬೈಲ್ ಚಂದಾದರರನ್ನು ಐಬಿಎಂ ವ್ಯವಸ್ಥೆ ಸಂಭಾಳಿಸುತ್ತಿದೆ.

ಸಂವಹನ ಕ್ಷೇತ್ರದಲ್ಲಿ ಕ್ರಾಂತಿ: ಅನೇಕಾನೇಕ ಎನ್ ಜಿಒಗಳು ವಿದ್ಯಾಲಯಗಳೊಡನೆ ಐಬಿಎಂ ಕೈಜೋಡಿಸಿದೆ. ಸಾವಿರಕ್ಕೂ ಅಧಿಕ ಐಬಿಎಂ ಉದ್ಯೋಗಿಗಳು ಸಾಫ್ಟ್ ವೇರ್ ಜೀವನ ಅಲ್ಲದೆ ಅನೇಕ ಅಭಿವೃದ್ಧಿ ಯೋಜನೆಗಳಲ್ಲಿ ತೊಡಗಿಕೊಂಡಿದ್ದಾರೆ. ಘಾನಾ, ಕೀನ್ಯಾ, ವಿಯಟ್ನಾಂ, ದಕ್ಷಿಣ ಆಫ್ರಿಕಾ, ಮಲೇಶಿಯಾ ಹಾಗೂ ಬ್ರೆಜಿಲ್ ಮುಂತಾದ ದೇಶಗಳಲ್ಲಿ ಅಭಿವೃದ್ಧಿ ಯೋಜನೆಗಳಲ್ಲಿ ಐಬಿಎಂ ಉದ್ಯೋಗಿಗಳನ್ನು ಕಾಣಬಹುದು.

ಭಾರತದಲ್ಲಿ ಸುಮಾರು 300ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಜೊತೆ ಕೈ ಜೋಡಿಸಿ, ವಿದ್ಯಾರ್ಥಿಗಳಿಗೆ ಹಾರ್ಡ್ ವೇರ್ ಹಾಗೂ ಸಾಫ್ಟ್ ವೇರ್ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಸರ್ಕಾರಿ ಶಾಲೆಗಳಿಗೆ ಐಬಿಎಂ ಕಂಪ್ಯೂಟರ್ ಗಳು ಕೊಡುಗೆ ನೀಡಲಾಗಿದೆ. ಶಾಲೆಗಳಲ್ಲಿ ವಿಜ್ಞಾನ ಹಾಗೂ ಗಣಿತ ವಿಭಾಗಕ್ಕೆ ಹೆಚ್ಚಿನ ಪ್ರಾಶಸ್ತ್ರ್ಯ ನೀಡಲು ಸಂಸ್ಥೆ ಸಹಾಯ ಹಸ್ತ ಚಾಚಿದೆ ಎಂದು ಐಬಿಎಂ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಶಂಕರ್ ಹೇಳುತ್ತಾರೆ.

ಐಬಿಎಂ ಎಬಿಸಿಡಿ ಹಾಗೂ ಗಮನಾರ್ಹ ಅಂಶಗಳು:
* Computing-Tabulating-Recording Co ಎಂದಿದ್ದ ಸಂಸ್ಥೆ ಹೆಸರು ನಂತರ ಐಬಿಎಂ ಎಂದು ಬದಲಾಯಿಸಲಾಯಿತು.
* ಐಬಿಎಂ ಅಮೆರಿಕದ ನ್ಯೂರ್ಯಾರ್ಕ್ ನಲ್ಲಿ ಕೇಂದ್ರ ಕಚೇರಿ ಹೊಂದಿದೆ. ಸ್ಯಾಮ್ಯುಯಲ್ ಜೆ. ಪಾಲ್ಮಿಸಾನೊ ಸಂಸ್ಥಯ ಸಿಇಒ.
* ಡಾಟಾ ಪ್ರೊಸೆಸಿಂಗ್ ಘಟಕ, ಕ್ಯಾಲ್ಕುಲೇಟರ್, ಟೈಪ್ ರೇಟರ್, ಕ್ಲಾಥಿಂಗ್ ಮೆಷಿನ್, ಮೂನ್ ಮಿಷನ್(ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟಿದ್ದಕ್ಕೆ ಎಬಿಎಂ ಕೂಡಾ ಸಹಾಯಕ)
*1971ರಲ್ಲಿ ಆಸ್ಟ್ರೋ ಫ್ಲಾಶ್ ಮೂಲಕ ಆನ್ ಲೈನ್ ಜಾತಕ, ಜ್ಯೋತಿಷ್ಯ, ಭವಿಷ್ಯ
* ಮೊಟ್ಟಮೊದಲ ಪರ್ಸನಲ್ ಕಂಪ್ಯೂಟರ್ 1981ರಲ್ಲಿ ಐಬಿಎಂನಿಂದ ಹೊರ ಬಂದಿತು. ಪ್ರಿಂಟರ್, ಡಿಸ್ಕ್ ಡ್ರೈವ್ ಹಾಗೂ ಮಾನಿಟರ್ ಒಳಕೊಂಡಿತ್ತು.
* 1986 ರಲ್ಲಿ scanning tunneling microscope ಸಂಶೋಧಿಸಿದ ಐಬಿಎಂ ವಿಜ್ಞಾನಿ ರೊಹ್ ರರ್, ಬಿನ್ನಿಂಗ್ ಗೆ ನೊಬೆಲ್ ಪ್ರಶಸ್ತಿ ಲಭಿಸಿತು
* 1995ರಲ್ಲಿ ಲೋಟಸ್ ಡೆವಲಪ್ ಮೆಂಟ್ ಕಂಪೆನಿಯನ್ನು ಖರೀದಿಸಿದ ಐಬಿಎಂ
*1996ರಲ್ಲಿ ಐಬಿಎಂನ ಸೂಪರ್ ಕಂಪ್ಯೂಟರ್ ಡೀಪ್ ಬ್ಲೂ ಜೊತೆ ಸೆಣಸಿದ ಗ್ಯಾರಿ ಕಾಸ್ಪರೋವ್ 4-2 ಅಂತರದಿಂದ ಗೆಲವು ಸಾಧಿಸಿದರು. ಡೀಪ್ ಬ್ಲೂ ಸಾಮರ್ಥ್ಯಕ್ಕೆ ಸಾಟಿ ಇಲ್ಲ ಗ್ರ್ಯಾಂಡ್ ಮಾಸ್ಟರ್ ಗ್ಯಾರಿ ಘೋಷಿಸಿದ್ದರು.
*ಕಂಪ್ಯೂಟರ್ ಚಿಪ್ ತಯಾರಿಕೆಯತ್ತ ಐಬಿಎಂ ಚಿತ್ತ. ವೆರ್ ಮೋಂಟ್ ಐಬಿಎಂ ಪ್ಲಾಂಟ್ ಮೂಲಕ ನಿಂಟೆಂಟೋ ಮಾದರಿಯಿಂದ ಹೆಚ್ಚು ಸಾಮರ್ಥ್ಯದ ಅನಿಮೆಡೆಟ್ ಗ್ರಾಫಿಕ್ಸ್ ಸಾಧನೆ
*1992 ಥಿಂಕ್ ಪ್ಯಾಡ್ ಸರಣಿ ನೋಟ್ ಬುಕ್ ಕಂಪ್ಯೂಟರ್ ಶಕೆ ಆರಂಭ. ಸುಮಾರು 300ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿಕೊಟ್ಟ ಐಬಿಎಂನ ಅದ್ಭುತ ಉತ್ಪನ್ನ
* 3ಡಿ ಕಂಪ್ಯೂಟರ್ ಚಿಪ್ ತಯಾರಿಕೆಯಲ್ಲಿ ಐಬಿಎಂ ಯಶಸ್ವಿ.

ಶತಕ ಬಾರಿಸಿದ ನೆನಪಿಗಾಗಿ ಐಬಿಎಂನ ಬೆಂಗಳೂರು ಕಚೇರಿಗಳಲ್ಲಿ ಉದ್ಯೋಗಿಗಳಿಗೆ ಸ್ಮರಣಿಕೆಗಳನ್ನು ನೀಡಲಾಗಿದೆ. ಕಾಫಿ ಮಗ್, ಟೀ ಶರ್ಟು ಹಾಗೂ ಪುಸ್ತಕದ ಉಡುಗೊರೆಗಳನ್ನು ಕೊಡಲಾಗಿದೆ. ಆದರೆ, ಐಬಿಎಂನ ಇತರೆ ದೇಶಗಳಲ್ಲಿರುವ ಕಚೇರಿಗಳಲ್ಲಿನ ಸಂಭ್ರಮಾಚರಣೆಯ ಯಾವ ಸುದ್ದಿ ಬಂದಿಲ್ಲ.

English summary
International Business Machines turns 100 on Thursday Jun 16, 2011. In 1911 the Tabulating Machine Co., the International Time Recording Co. and the Computing Scale Co. merged to become the Computing-Tabulating-Recording Co. later it is renamed as IBM Corp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X