ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಕೋಮುಗಲಭೆ, ಪತ್ರಕರ್ತನ ಕೊಲೆ?

By * ಪತ್ರಕರ್ತ, ಹಾಸನ
|
Google Oneindia Kannada News

Effect of Lunar eclipse on Karnataka journalists
ಬುಧವಾರ ರಾತ್ರಿ ಸಂಭವಿಸಿದ ನಯನ ಮನೋಹರ ಚಂದ್ರಗ್ರಹಣವನ್ನು ನೀವು ಕಂಡಿರಾ? ನಾವಂತೂ ನೋಡಿದೆವು. ನಗುಮೊಗದ ಚಂದ್ರನ ಮುಖ ಕಪ್ಪಿಟ್ಟಿತ್ತು. ರಾಹುವಿನ ಕಿತಾಪತಿಯಿಂದಾಗಿ ಸಂಭವಿಸಿದ ಚಂದ್ರನ ಮುಖಕ್ಕೆ ಮಸಿ ಬಳಿಯುವ ಈ ಗ್ರಹಣದ ಶುಭ ಅಶುಭ ಫಲಗಳ ಬಗ್ಗೆ ಜಗತ್ತಿನಾದ್ಯಂತ ಅನೇಕ ಚರ್ಚೆಗಳು ನಡೆಯುತ್ತಿವೆ.

ಈ ಕುತೂಹಲ ಕೇವಲ ಕರ್ನಾಟಕ ಮತ್ತು ಕನ್ನಡಿಗನಿಗೆ ಮಾತ್ರ ಸೀಮಿತವಾಗಿಲ್ಲ. ದೇಶ ಕಾಲ ಸಂಸ್ಕೃತಿಗೆ ಅನುಗುಣವಾಗಿ ಪೂಜೆ ಪುನಸ್ಕಾರ, ಹೋಮ ಹವನಗಳು ನಡೆಯುತ್ತಿವೆ. ನಂಬಿಕೆಗಳಿಗೆ ಜಾತಿ, ಧರ್ಮ, ಭೌಗೋಳಿಕ ಮಿತಿ ಇಲ್ಲ ಎಂಬ ಅಂಶ ಪುನಃ ಪ್ರೂವ್ ಆಗಿದೆ.

ಚಂದ್ರಗ್ರಹಣದ ಕುರಿತಾಗಿ ನಿನ್ನೆ ಕನ್ನಡ ಟಿವಿ ವಾಹಿನಿಗಳಲ್ಲೂ ಭರಪೂರ ಚರ್ಚೆ, ವಿಮರ್ಶೆಗಳು ನಡೆದವು. ಒಂದು ವಾಹಿನಿಯಲ್ಲಿ ಒಬ್ಬ ಜ್ಯೋತಿಷಿಗಳು ಮಾತನಾಡುತ್ತಾ, ಬರಲಿರುವ ದಿನಗಳಲ್ಲಿ ಸಂಭವಿಸುವ ಕೆಲವು ವಿದ್ಯಮಾನಗಳ ಬಗೆಗೆ ಮುನ್ಸೂಚನೆ ಕೊಟ್ಟರು.

ಶತಮಾನದ ಅತ್ಯಂತ ದೀರ್ಘ ಚಂದ್ರಗ್ರಹಣದ ಪರಿಣಾಮವಾಗಿ ರಾಜ್ಯದಲ್ಲಿ ಕೋಮುಗಲಭೆ ನಡೆಯುತ್ತದಂತೆ. ಪತ್ರಕರ್ತರ ಮೇಲೆ ಹಲ್ಲೆಗಳು ನಡೆಯುತ್ತವಂತೆ. ಒಬ್ಬ ಪತ್ರಕರ್ತ ಕೊಲೆಯೂ ಆಗುತ್ತಾನೆ ಎಂದರಂತೆ. ಯಾಕೋ ಏನೋ ನಮಗೆ ಭಯವಾಗುತ್ತಿದೆ. [ಹಾಗೆ ಸುಮ್ಮನೆ 'ಗ್ರಹಣ' ಸಣ್ಣಕಥೆ ಓದಿರಿ]

English summary
Ill effects of lunar eclipse Wed 15 June 2011. Communal violence will surface and a Karnataka journalist will be killed in Karnataka. Source : Astro Predictions on Kannada TV Channels.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X