ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2ಜಿ ಸ್ಪೆಕ್ಟ್ರಂ ಶಾರುಕ್ ಖಾನ್ ಕೂಡಾ ಭಾಗಿ ?

By Srinath
|
Google Oneindia Kannada News

shahrukh khan
ನವದೆಹಲಿ, ಜೂನ್ 15: ಈಗಾಗಲೇ ಹಲವು ರಾಜಕಾರಿಣಿಗಳಿಗೆ ಕಂಟಕಪ್ರಾಯವಾಗಿರುವ 2ಜಿ ಸ್ಪೆಕ್ಟ್ರಂ ಹಗರಣ ಬಾಲಿವುಡ್ ಬಾದಷಾ ಶಾರುಕ್ ಖಾನ್ ಗೆ ಕೂಡಾ ಉರುಳಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹಗರಣದಲ್ಲಿ ಜೈಲು ಪಾಲಾಗಿರುವ ಕರೀಂ ಮೊರಾನಿ ಜೊತೆ ಖಾನ್ ಭಾಗಿಯಾಗಿದ್ದಾರೆನ್ನುವ ಸುದ್ದಿ ಬಾಲಿವುಡ್ ನಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ.

ಕರೀಂ ಮೊರಾನಿ ಮಗಳು ಝುಯಾ ಜೊತೆ ಶಾರೂಖ್ ತನ್ನ ಮಹತ್ವಾಕಾಂಕ್ಷೆಯ ರಾ1 ಚಿತ್ರ ನಿರ್ಮಿಸುತ್ತಿದ್ದಾರೆ. ಕೋಟ್ಯಾಂತರ ರೂಪಾಯಿ ಬಜೆಟ್ ನ ಈ ಚಿತ್ರಕ್ಕೆ 2ಜಿ ಸ್ಪೆಕ್ಟ್ರಂ ಹಗರಣದಿಂದ ಬಂದ ದುಡ್ಡನ್ನು ಸುರಿಯಲಾಗಿದೆ ಎನ್ನುವುದು ಶಾರೂಖ್ ವಿರುದ್ದ ಕೇಳಿ ಬರುತ್ತಿರುವ ಆರೋಪ.

ಡಿಬಿ ರಿಯಾಲಿಟಿ ಮತ್ತು ಕಲೈಂಜರ್ ಟಿವಿಗೆ 200 ಕೋಟಿ ರೂಪಾಯಿ ಸಂದಾಯವಾಗಿತ್ತು. ಇದಕ್ಕಾಗಿ ಕರೀಂ ಮೊರಾನಿ ಆರು ಕೋಟಿ ರೂಪಾಯಿಗಳನ್ನು ಸಿನಿ ಫಿಲಂ ಸೊಸೈಟಿ ಹೆಸರಿನಲ್ಲಿ ಪಡೆದಿದ್ದರು. ಈ ಹಣವನ್ನೇ ಚಿತ್ರಕ್ಕೆ ವ್ಯಯಿಸಲಾಗಿದೆ ಎನ್ನುವುದು ಈಗ ಕೇಳಿ ಬರುತ್ತಿರುವ ಆರೋಪ. ಅನುಭವ್ ಸಿನ್ಹಾ ನಿರ್ದೇಶನದ ಶಾರುಕ್, ಕರೀನಾ, ಅರ್ಜುನ್ ರಾಂಪಾಲ್ ಮುಖ್ಯ ಭೂಮಿಕೆಯಲ್ಲಿರುವ ರಾ1 ಚಿತ್ರ ದೀಪಾವಳಿ ಸಮಯದಲ್ಲಿ (ಅಕ್ಟೋಬರ್ ಅಂತ್ಯಕ್ಕೆ) ಬಿಡುಗಡೆಯಾಗುವ ಸಾಧ್ಯತೆಯಿದೆ.

ಈ ಆರೋಪವನ್ನು ಸಾರಾಸಗಾಟವಾಗಿ ತಳ್ಳಿ ಹಾಕಿರುವ ಶಾರುಕ್, ಈ ಆರೋಪ ಆಧಾರರಹಿತ, ನಾನು ಕೊಲ್ಕತ್ತಾ ನೈಟ್ ರೈಡರ್ಸ್ ಮಾಲೀಕ. ನನಗೂ ಮೊರಾನಿಗೂ ಚಿತ್ರ ನಿರ್ಮಾಣ ಸಂಬಂಧ ಸ್ನೇಹವಿದೆಯೇ ಹೊರತು 2ಜಿ ಸ್ಪೆಕ್ಟ್ರಂಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನೊಂದು ಮೂಲಗಳ ಪ್ರಕಾರ, ಇತ್ತೀಚಿಗೆ ಮುಕ್ತಾಯಗೊಂಡ ಐಪಿಎಲ್ ಪಂದ್ಯಾವಳಿ ಆಟಗಾರರ ಬಿಡ್ ಗೆ ಕೆಕೆಆರ್ ಮಾಲೀಕ ಶಾರುಕ್ 2ಜಿ ಸ್ಪೆಕ್ಟ್ರಂ ಹಗರಣದ ದುಡ್ಡನ್ನೇ ಬಳಸಿ ಕೊಂಡಿದ್ದಾರೆನ್ನುವುದು ಬಾಲಿವುಡ್ ನಲ್ಲಿ ಈಗ ಎದ್ದಿರುವ ಗುಸುಗುಸು. ದಿನಕ್ಕೊಂದು ರೀತಿಯಲ್ಲಿ ತಿರುವು ಪಡೆಯುತ್ತಿರುವ ಸ್ಪೆಕ್ಟ್ರಂ ಹಗರಣ ಶಾರುಕ್ ಕೊರಳಿಗೂ ಸುತ್ತಿಕೊಂಡರೆ ಆಶ್ಚಯವಿಲ್ಲ.

English summary
Even though Bollywood superstar Shahrukh Khan has recently poured water on all speculation about his connection in 2G scam and with one of the spectrum accused Karim Morani.Karim Morani, who has been sent to Tihar jail the allegation is not dying soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X