ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1 ಮಾರ್ಕ್ಸ್ ಗೆ 1 ಲಕ್ಷ ರೂ ಲಂಚ; ನೀವೂ ಡಾಕ್ಟರ್ ಆಗಿರಿ!

By Srinath
|
Google Oneindia Kannada News

Karnataka MBBS Sudents Marks Scandal
ಬೆಂಗಳೂರು, ಜೂನ್ 15: 1 ಮಾರ್ಕ್ಸ್ ಗೆ 1 ಲಕ್ಷ ರೂ ಲಂಚ; ನೀವೂ ಡಾಕ್ಟರ್ ಆಗಿರಿ! ಹೌದು, ಇದು ಸಾಧ್ಯ ಎಂದು ರಾಜ್ಯದ ಕೆಲವು ಮೆಡಿಕಲ್ ಕಾಲೇಜುಗಳು ಸಾಬೀತುಪಡಿಸಿವೆ. ಈ ಬಗ್ಗೆ ರಾಜ್ಯ ಪೊಲೀಸರು ಎಫ್ಐಆರ್ ಗಳನ್ನೂ ದಾಖಲಿಸಿದ್ದಾರೆ. ಇದು ಅವ್ಯಾಹತವಾಗಿ ನಡೆಯುತ್ತಿರುವ ನಕಲಿ ಅಂಕ ಹಗರಣಗಳ ಒಂದು ಸ್ಯಾಂಪಲ್.

ನೀವು ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದು ಹಣ ಕೊಟ್ಟು ಮಾರ್ಕ್ಸು ತೆಗೆದುಕೊಳ್ಳಲು ಸಿದ್ಧವಾಗಿದ್ದರೆ ನಿಮ್ಮೊಂದಿಗೆ ಕೈಜೋಡಿಸಿಲು ಮೌಲ್ಯಮಾಪಕರೂ ಸನ್ನದ್ಧರಾಗಿರುತ್ತಾರೆ. ಇದು ರೀಟೋಟಲಿಂಗ್ ಹಂತದಲ್ಲಿ ನಡೆಯುವ ದಂಧೆ.

ನಿಲ್ಲ ... ಹಣದ ಥೈಲಿಯೊಂದಿಗೆ ರೀಟೋಟಲಿಂಗ್ ಗೆ ಮೊರೆ ಹೋಗಿ. ಜತೆಗೆ ಮೌಲ್ಯಮಾಪಕರನ್ನೂ ಬುಕ್ ಮಾಡಿಕೊಳ್ಳಿ. ಅವರು ಒಂದೊಂದು ಅಂಕಕ್ಕೆ ಇಷ್ಟಿಷ್ಟು ಎಂದು ಫಿಕ್ಸ್ ಮಾಡುತ್ತಾರೆ. ನೀವು ಸಮ್ಮತಿ ನೀಡಿದರೆ ...ಮುಂದಿನದೆಲ್ಲ ಸಲೀಸು.

ಅನೇಕ ವಿದ್ಯಾರ್ಥಿಗಳು ಹೀಗೆಯೇ ಒಂದೊಂದು ಅಂಕ ಗಳಿಸಿ ಎಂಬಿಬಿಎಸ್ ಪಾಸು ಮಾಡುತ್ತಿದ್ದಾರೆ. 2006 ರಿಂದ ಒಟ್ಟು ಏಳು ಕಾಲೇಜುಗಳಲ್ಲಿ ಇಂತಹ ಅಕ್ರಮಗಳು ನಡೆದಿವೆ ಎನ್ನುತ್ತದೆ ಪೊಲೀಸ್ ವರದಿ. ಇಂತಹ 18 ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಆಘಾತಕಾರಿ ಸಂಗತಿ ಎಂದರೆ ಈ ರೀತಿ ಎಂಬಿಬಿಎಸ್ ಪಾಸು ಮಾಡಿರುವ ವಿದ್ಯಾರ್ಥಿಗಳು ನಿಮ್ಮ ಮಧ್ಯೆ ಈಗಾಗಲೇ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಹುಷಾರು!

ಬೆಂಗಳೂರಿನ ಅಲ್ ಅಮೀನ್ ಮೆಡಿಕಲ್ ಕಾಲೇಜು, ತುಮಕೂರು, ಚಿತ್ರದುರ್ಗ ಮತ್ತು ಗುಲ್ಬರ್ಗಾದ ಮೆಡಿಕಲ್ ಕಾಲೇಜುಗಳು ಇಂತಹ ದಂಧೆಗೆ ನೀರೆರೆಯುತ್ತಿವೆ ಎನ್ನಲಾಗಿದೆ. ಆರೋಪ ಸಾಬೀತಾದರೆ ಇವರ ಎಂಬಿಬಿಎಸ್ ಸರ್ಟಿಫಿಕೇಟ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಎ. ಆರ್. ರಾಮದಾಸ್ ಅವರು ಹೈಕೋರ್ಟ್ ಗೆ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.

English summary
One lakh rupees for every mark added - that's the rate fixed in the fake marks scam in Karnataka. If you are an MBBS student, you could pass the university exam by just shelling out money. Evaluating officers will change the marks when they get the copies for retotalling.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X