ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆಯಲ್ಲಿ ಬುಧವಾರದಿಂದ ಮೊಳಗಲಿದೆ ಕನ್ನಡ ಭಕ್ತಿಗೀತೆಗಳು

By Srinath
|
Google Oneindia Kannada News

sabarimala
ತಿರುವನಂತಪುರ, ಜೂನ್ 14: ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಬುಧವಾರದಿಂದ ಕನ್ನಡ ಭಕ್ತಿಗೀತೆಗಳನ್ನು ಆಲಿಸಬಹುದು. ಹಳೆಯ ಸಂಪ್ರದಾಯದಂತೆ ಮಲೆಯಾಳಂ ಮತ್ತು ಸಂಸ್ಕೃತ ಭಕ್ತಿಗೀತೆಗಳನ್ನು ಮಾತ್ರ ಪ್ರಸಾರ ಮಾಡಲಾಗುತ್ತಿತ್ತು. ಹಾಲಿ ಇರುವ ಎರಡು ಭಾಷೆಗಳ ಜತೆ ನಾಲ್ಕು ಭಾರತೀಯ ಭಾಷೆಗಳ ಭಕ್ತಿಗೀತೆಗಳನ್ನು ಬುಧವಾರದಿಂದ ದೇವಸ್ಥಾನದಲ್ಲಿ ಪ್ರಸಾರ ಮಾಡಲು ಆಡಳಿತ ಮಂಡಳಿ ನಿರ್ಧರಿಸಿದೆ.

ಶಬರಿಮಲೆ ದೇಶದ ಎಲ್ಲಾ ಭಾಗಗಳಿಂದಲೂ ಭಕ್ತರನ್ನು ಸೆಳೆಯುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದೇವಸ್ಥಾನದ ಆಡಳಿತ ನಡೆಸುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ ತಿಳಿಸಿದೆ.

ಇನ್ನು ಮುಂದೆ ಮುಂಜಾನೆ ಗರ್ಭ ಗುಡಿ ತೆರೆಯುವಾಗ ಮತ್ತು ಸಂಜೆ ದೇವಸ್ಥಾನ ಮುಚ್ಚುವಾಗ ಮಲೆಯಾಳಂ ಮತ್ತು ಸಂಸ್ಕೃತ ಗೀತೆಯೊಂದಿಗೆ ಕನ್ನಡ, ಹಿಂದಿ, ತೆಲಗು ಮತ್ತು ತಮಿಳು ಭಕ್ತಿ ಗೀತೆಗಳನ್ನು ಪ್ರಸಾರ ಮಾಡಲಾಗುವುದು. ಹಲವಾರು ದಶಕಗಳಿಂದ ದೇವಸ್ಥಾನ ತೆರೆಯುವಾಗ ಮತ್ತು ಮುಚ್ಚುವಾಗ ಯೇಸುದಾಸ್ ಮತ್ತು ಜಯನ್-ವಿಜಯನ್ ಜೋಡಿ ಹಾಡಿದ ಹಾಡು ಹಾಕಲಾಗುತ್ತಿತ್ತು.

ಈಗ ಸಿರ್ ಕಾಳಿ ಗೋವಿಂದರಾಜನ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ವೀರಮನ್-ಕಣ್ಣನ್ ಮತ್ತು ನಾರಾಯಣ ರೆಡ್ಡಿ ಅವರು ಹಾಡಿರುವ ವಿವಿಧ ಭಾಷೆಗಳ ಹಾಡಿನ ನೂತನ ಸಿ.ಡಿ.ಯನ್ನು ಸಿದ್ದಗೊಳಿಸಲಾಗಿದೆ. ಪ್ರತಿ ವರ್ಷ ನವೆಂಬರ್-ಜನವರಿ ಅವಧಿಯಲ್ಲಿ 30 ದಶ ಲಕ್ಷಕ್ಕೂ ಹೆಚ್ಚು ಮಂದಿ ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಾರೆ. ಇವರಲ್ಲಿ ಹೆಚ್ಚು ಮಂದಿ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ ಪ್ರದೇಶದವರಾಗಿರುತ್ತಾರೆ.

English summary
Ending decades-old practice of playing only Malayalam and Sanskrit devotional songs at the famed Sabarimala Ayyappa temple, authorities have decided to play songs in four more Indian languages including kannada at the hill shrine from Wednesday (June15).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X