ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಷ್ಣೋದೇವಿಗೆ ಮುಂದಿನ ವರ್ಷ ರೈಲಿನಲ್ಲೇ ಹೋಗಬಹುದು

By Srinath
|
Google Oneindia Kannada News

Vaishno Devi
ಹೊಸದಿಲ್ಲಿ , ಜೂನ್ 13: ಉಧಂಪುರ - ಕತ್ರಾ ನಡುವಿನ ಮಾರ್ಗದಲ್ಲಿ ಮುಂದಿನ ವರ್ಷದಿಂದ ರೈಲು ಸಂಚಾರ ಆರಂಭಗೊಳ್ಳುವ ಸಾಧ್ಯತೆಯಿದೆ. ಇದರೊಂದಿಗೆ ವೈಷ್ಣೋದೇವಿಗೆ ತೆರಳುವ ಯಾತ್ರಿಕರು ನೇರಾಗಿ ಕತ್ರಾ ಮೂಲ ಶಿಬಿರ ತಲಪಲು ಸಾಧ್ಯವಾಗಲಿದೆ.

ಕತ್ರಾ ನಿಲ್ದಾಣ ಕೂಡ ಬಹುತೇಕ ಪೂರ್ಣಗೊಂಡಿದ್ದು, ಉಧಂಪುರ - ಕತ್ರಾ ನಡುವಿನ ರೈಲು ಹಳಿ ಮಾರ್ಗದ ಕೆಲಸ ಭರದಿಂದ ಸಾಗುತ್ತಿದೆ. ಈ ರೈಲು ಮಾರ್ಗ 2012ರ ಡಿಸೆಂಬರಿನಲ್ಲಿ ಪೂರ್ಣವಾಗಲಿದೆ ಎಂದು ಈ ಯೋಜನೆಯ ಉಸ್ತುವಾರಿ ವಹಿಸಿರುವ ಹಿರಿಯ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಜಮ್ಮು- ಉಧಂಪುರ ನಡುವಣ 53 ಕಿ.ಮೀ. ಮಾರ್ಗದಲ್ಲಿ ಈಗಾಗಲೇ ರೈಲು ಓಡಾಟ ಆರಂಭಗೊಂಡಿದೆ. ಉಧಂಪುರ -ಕತ್ರಾ ನಡುವಿನ 25 ಕಿ.ಮೀ. ರೈಲು ಹಳಿ ಪೂರ್ಣಗೊಂಡರೆ ಕತ್ರಾವರೆಗೆ ರೈಲು ಸಂಚಾರ ಸಾದ್ಯವಾಗುತ್ತದೆ ಎಂದು ಅವರು ಹೇಳಿದರು.

ಕತ್ರಾ ಮೂಲ ಶಿಬಿರದಿಂದ ಸುಮಾರು 10 ದಶಲಕ್ಷ ಯಾತ್ರಾರ್ಥಿಗಳು ಪ್ರತಿ ವರ್ಷ ವೈಷ್ಣೋದೇವಿಗೆ ತೆರಳುತ್ತಾರೆ. ಕತ್ರಾ ಯೋಜನೆಗೆ ಸುಮಾರು 960 ಕೋಟಿ ರುಪಾಯಿ ವ್ಯಯವಾಗುವುದೆಂದು ಅಂದಾಜಿಸಲಾಗಿದೆ. ಪೂರ್ಣಗೊಳ್ಳಲಿರುವ 25 ಕಿ.ಮೀ. ರಸ್ತೆಯಲ್ಲಿ 7 ಸುರಂಗಗಳಿವೆ. ಒಟ್ಟು 30 ಸಣ್ಣ ಮತ್ತು ದೊಡ್ಡ ಸೇತುವೆಗಳಿವೆ.

English summary
Pilgrims to Vaishno Devi shrine will be able to travel directly to Katra base camp when the Udhampur -Katra rail line becomes operational next year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X