ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಡೆನ್‌ ಹೆಣ ತಡಕಲು ಪಾತಾಳಗರಡಿ ಹಿಡಿದ ಅಮೆರಿಕ ಆಸಾಮಿ

By Srinath
|
Google Oneindia Kannada News

underwater search for Osama's body
ಕ್ಯಾಲಿಫೋರ್ನಿಯಾ, ಜೂನ್ 13: 'ಲಾಡೆನ್‌ ಹತ್ಯೆ ಬಳಿಕ ಅವನ ಶವವನ್ನು ಅರಬ್ಬಿಸಮುದ್ರದಲ್ಲಿ ಬಿಸಾಡಿದೆವು' ಎಂಬರ್ಥದಲ್ಲಿ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಸಾಕ್ಷಾತ್ ಹೇಳಿದ್ದರೂ ಅದನ್ನು ನಂಬಲು ಅಮೆರಿಕದ ಸಾಗರ ಶೋಧಕನೊಬ್ಬ ಸಿದ್ಧನಿಲ್ಲ. ಒಬಾಮಾ ಹೇಳಿದ್ದರ ಸತ್ಯ-ಮಿಥ್ಯತೆಯನ್ನು ಅರಿಯಲು ಕ್ಯಾಲಿಫೋರ್ನಿಯಾದ 59 ವರ್ಷದ ಬಿಲ್‌ ವಾರೆನ್‌ ಸಮುದ್ರದಾಳಕ್ಕೆ ಇಳಿದು, ಲಾಡೆನ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ.

'ನಾನೊಬ್ಬ ದೇಶಭಕ್ತ ಅಮೆರಿಕದವ. ಲಾಡೆನ್‌ ನನ್ನು ಸಾಯಿಸಿದ್ದೇವೆ ಎಂಬುದಕ್ಕೆ ಒಬಾಮಾ ತಕ್ಕ ದಾಖಲೆಗಳನ್ನು ನೀಡಿಲ್ಲ. ಹೀಗಾಗಿ ನನಗೆ ಅಮೆರಿಕ ಸರಕಾರ ಅಥವಾ ಒಬಾಮಾ ಮೇಲೆ ನಂಬಿಕೆ ಇಲ್ಲ. ಲಾಡೆನ್‌ ಸಾವು ಖಚಿತಪಡಿಸಿಕೊಳ್ಳಲು ಶೋಧಕ್ಕೆ ನಾನೇ ಸ್ವತಃ ಮುಂದಾಗಿದ್ದೇನೆ' ಎಂದು ವಾರೆನ್ ಸಮುದ್ರಕ್ಕೆ ಧುಮಕಿದ್ದಾರೆ‌. ಅವನ ಶವ ಸಿಕ್ಕ ತಕ್ಷಣ ಡಿಎನ್ಎ ಟೆಸ್ಟ್ ಮಾಡಿ, ಒಸಾಮಾ ಸತ್ತಿದ್ದಾನೆ ಎಂದು ಇಡೀ ಜಗತ್ತಿಗೆ ಮನದಟ್ಟುಪಡಿಸುವ ಶಪಥ ವಾರೆನ್ ಅವರದ್ದಾಗಿದೆ.

ಅತ್ಯಾಧುನಿಕ ಉಪಕರಣಗಳು, ಹಲವು ಬೋಟ್‌ಗಳೊಂದಿಗೆ ಲಾಡೆನ್‌ ಶೋಧಕ್ಕೆ ವಾರೆನ್‌ ಮುಂದಾಗಿದ್ದಾರೆ. ಈ ಕಾರ್ಯಕ್ಕಾಗಿ ನಾಲ್ಕು ಲಕ್ಷ ಡಾಲರ್ ಹಣ ವ್ಯಯಿಸುತ್ತಿದ್ದಾರೆ. ಇಲ್ಲಿವರೆಗೂ ಅಮೆರಿಕ ಲಾಡೆನ್‌ನನ್ನು ಅರಬ್ಬಿಸಮುದ್ರದ ಉತ್ತರ ಭಾಗದಲ್ಲಿ ಹೂಳಲಾಗಿದೆ ಎಂದಷ್ಟೇ ಹೇಳಿದೆ. ವಿಶಾಲವಾದ ಅರಬ್ಬಿಸಮುದ್ರದಲ್ಲಿ ಲಾಡೆನ್‌ ಶವವನ್ನು ವಾರೆನ್‌ ಹೇಗೆ ಹುಡುಕುತ್ತಾರೆ ಎಂಬುದು ಸದ್ಯದ ಕುತೂಹಲ.

English summary
California salvage diver and entrepreneur Bill Warren, 59, has announced that he wants to find Osama Bin Laden's body as proof the Al Qaeda leader is really dead. Warren expects the search will cost about $400,000 and will rely on several boats and high-end technology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X