ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರುಣೆಯಿಲ್ಲ ವರುಣ, ಮಂಗಳೂರು ಮಳೆಗೆ ನವ ವಿವಾಹಿತ ಬಲಿ

|
Google Oneindia Kannada News

Mangalore Monsoon
ಮಂಗಳೂರು, ಜೂನ್ 13: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮುಂಗಾರು ಚುರುಕಾಗಿದೆ. ನಿನ್ನೆ ಸುರಿದ ಭಾರಿ ಮಳೆ ಕಾರ್ಕಳದ ನವವಿವಾಹಿತ ತರುಣನೊಬ್ಬನನ್ನು ಮೊದಲ ಬಲಿ ತೆಗೆದುಕೊಂಡಿದೆ. ಹೊಸ ಜೀವನಕ್ಕೆ ಮುನ್ನುಡಿಯಿಡುತ್ತಿದ್ದ ಸಂದರ್ಭದಲ್ಲಿ ಜವರಾಯನ ರೂಪದಲ್ಲಿ ಭಾನುವಾರ ಬಂದ ಮಳೆರಾಯ ಆತನ ಪತ್ನಿಯ ಕುಂಕುಮ ಅಳಿಸಿಹಾಕಿ ಹೋಗಿದೆ.

ಮಳೆಗೆ ಕಾರ್ಕಳದ ಅಜೆಕಾರು ಬೈಲುಮನೆ ನಿವಾಸಿ ಶಿಶುಪಾಲ ಶೆಟ್ಟಿ(32) ಆಯತಪ್ಪಿ ತೋಡಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಅವರು ಮದುವೆಯಾಗಿ 20 ದಿನಗಳು ಕಳೆದಿತ್ತಷ್ಟೇ. ಶಿಶುಪಾಲ ಹಲವು ವರ್ಷ ದೂರದ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಊರಿನಲ್ಲಿ ಸೆಟಲ್ ಆಗಿ ಕೃಷಿ ಕೆಲಸ ಮಾಡುತ್ತ ನೆಮ್ಮದಿಯ ಜೀವನ ನಡೆಸುವ ಕನಸು ಕಾಣುತ್ತಿದ್ದರು.

ನಿನ್ನೆ ಸುಬ್ರಹ್ಮಣ್ಯ, ಪುತ್ತೂರು, ಕೊಲ್ಲೂರು ಮತ್ತು ಇತರ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಕೊಲ್ಲೂರಿನಲ್ಲಿ ದಾಖಲೆ ಪ್ರಮಾಣದಲ್ಲಿ 11 ಸೆಂಟಿಮೀಟರ್ ಮಳೆ ಸುರಿದಿದೆ. ಸಂಪಿಗೆನಗರ, ಉದ್ಯಾವರದಲ್ಲಿ ಹಲವು ಮನೆಗಳು ಹಾನಿಗೀಡಾದ ವರದಿಯಾಗಿದೆ.

English summary
Rains intensified on June 12 in almost all the taluks of the Udupi and Dakshina Kannada. A newly-married Shishupal Shetty (32), resident of Nadimar Bailumane in Karkala taluk, lost his life after slipping and falling into a waterway brimming with water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X