ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಭೂಪಟದ ಗಡಿ ಗೆರೆ ತಿದ್ದಿದ ಕಿತಾಪತಿ ಆಸ್ಟ್ರೇಲಿಯಾ

By Mahesh
|
Google Oneindia Kannada News

ಮೆಲ್ಬೋರ್ನ್, ಜೂ.13: ಆಸ್ಟ್ರೇಲಿಯ ಸರ್ಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಭಾರತದ ಭೂಪಟವೊಂದರಲ್ಲಿ ಜಮ್ಮುಮತ್ತುಕಾಶ್ಮೀರ ಹಾಗೂ ಅರುಣಾಚಾಲ ಪ್ರದೇಶಗಳನ್ನು ಕಿತ್ತುಹಾಕಲಾಗಿದೆ. ಇದಕ್ಕೆ ಸ್ಥಳೀಯ ಭಾರತೀಯ ಸಮುದಾಯದವರಿಂದ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ನಂತರ ತನ್ನ ತಪ್ಪನ್ನು ಒಪ್ಪಿಕೊಂಡ ಆಸ್ಟ್ರೇಲಿಯಾ ಸರ್ಕಾರ, ಭೂಪಟದಲ್ಲಿ ಆಗಿರುವ ತಪ್ಪನ್ನು ಸರಿಪಡಿಸಲಾಗುವುದು, ತಕ್ಷಣವೇ ಈಗಿರುವ ಭೂಪಟವನ್ನು ಕಿತ್ತುಹಾಕಲಾಗುವುದು ಎಂದು ಹೇಳಿದೆ.

ಜಮ್ಮು ಮತ್ತುಕಾಶ್ಮೀರ ಹಾಗೂ ಅರುಣಾಚಲವನ್ನು ಕೈಬಿಟ್ಟು, ಸರ್ಕಾರಿ ವೆಬ್ ತಾಣದಲ್ಲಿ ಆಸ್ಟ್ರೇಲಿಯದ ಸರ್ಕಾರಪ್ರಕಟಿಸಿದ ತಪ್ಪು ಭೂಪಟದ ಕುರಿತು ಅಲ್ಲಿನ ಭಾರತೀಯ ಸಮುದಾಯ ಪ್ರಬಲ ಪ್ರತಿಭಟನೆ ನಡೆಸಿತ್ತು.ಆಸ್ಟ್ರೇಲಿಯ ವಲಸೆ ಮತ್ತು ಪೌರತ್ವ ಇಲಾಖೆ(Department of Immigration and Citizenship (DIAC) of Australia )ಯು ಈ 'ತಪ್ಪು" ಭೂಪಟ ಪ್ರಕಟಿಸಿದೆ.

ನ್ಯೂ ಸೌತ್‌ವೇಲ್ಸ್‌ನ ಭಾರತೀಯ ಆಸ್ಟ್ರೇಲಿಯನ್ ಸಮುದಾಯವನ್ನು ಪ್ರತಿನಿಧಿಸುವ ಅತ್ಯುಚ್ಚ ಮಂಡಳಿಯಾಗಿರುವ ದಿ ಕೌನ್ಸಿಲ್ ಆಫ್ ಇಂಡಿಯನ್ ಆಸ್ಟ್ರೇಲಿಯನ್ ಇಂಕ್ (CIA) ಜಾಲತಾಣದಲ್ಲಿ ನಕಾಶೆಯನ್ನು ಸರಿಪಡಿಸುವಂತೆ ಡಿಐಸಿಎಯನ್ನು ಆಗ್ರಹಿಸಿದೆ. ಸಿಐಎಇಂಕ್ ಈ ತಪ್ಪು ಭೂಪಟವನ್ನು ಆಸ್ಟ್ರೇಲಿಯ ಸರಕಾರದ ಗಮನಕ್ಕೆ ತರಲು ಬಯಸಿದೆ. ತಪ್ಪು ಭೂಪಟವನ್ನು ಸರಿಪಡಿಸಿ ಸರಿಯಾದ ಗಡಿಗಳನ್ನು ತೋರಿಸುವ ಮರು ವಿಮರ್ಶಿತ ಭೂಪಟವನ್ನು ಪ್ರಕಟಿಸುವಂತೆ ಒತ್ತಾಯಿಸಲಿದೆಯೆಂದು ಸಿಐಎಯ ಹೇಳಿಕೆಯೊಂದು ತಿಳಿಸಿದೆ.

English summary
Australian government website DIAC has published a map of India by omitting Jammu and Kashmir and Arunachal Pradesh states. This triggered strong protests from the Indian community in Australia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X