• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಕ್ಸ್‌ಪ್ಯಾಕ್ ಮಾಡೆಲಿಂಗ್‌ ಬೆಡಗಿ ಶರಪೋವಾ ‌!

By Srinath
|

ಲಂಡನ್‌, ಜೂನ್ 12: ಟೆನಿಸ್‌ ಜಗತ್ತಿನ ಅಗ್ರ ಆಟಗಾರ್ತಿ ಮರಿಯಾ ಶರಪೋವಾ ಮಾಡೆಲಿಂಗ್‌ನಲ್ಲೂ ತಾನು ನಂ.1 ಎನ್ನುವುದನ್ನು ಸಾದರಪಡಿಸಿದ್ದಾರೆ. ಶರಪೋವಾ ಗಂಡಸರ ಸಿಕ್ಸ್‌ ಪ್ಯಾಕ್‌ನಂತೆ ಹದಗೊಳಿಸಿರುವ ಉದರದ ಸ್ನಾಯುಗಳು ಆಕೆ ನಿರಂತರ ಜಿಮ್‌ನಲ್ಲಿ ವಕೌಟ್‌ ನಡೆಸುವುದಕ್ಕೆ ಸಾಕ್ಷಿಯಾಗಿದೆ.

ಇತ್ತೀಚೆಗೆ ನೈಕ್‌ ಕಂಪನಿಯ ಪ್ರಚಾರ ಅಭಿಯಾನದಲ್ಲಿ ಪಾಲ್ಗೊಂಡಿದ್ದ ರಷ್ಯಾದ ಶರಪೋವಾ ಬಾಡಿಬಿಲ್ಡರ್ ಗಳಂತೆ ಆಬ್ಸ್ ಮತ್ತು ಬೈಸೆಪ್ಸ್ ಪ್ರದರ್ಶಿಸಿದ್ದಾರೆ. ಅಮೆರಿಕ ಪೌರತ್ವವನ್ನೂ ಹೊಂದಿರುವ 24 ವರ್ಷದ ಮೋಹಕ ಹುಡುಗಿ 'ನೈಕ್‌ ನ್ಪೋರ್ಟ್ಸ್ ಬ್ರಾ' ಜಾಹೀರಾತು ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು.

ಕ್ರೀಡಾ ವೃತ್ತಿಜೀವನದ ಜೊತೆ ಮಾಡೆಲಿಂಗ್‌ನಿಂದಲೂ ದುಡ್ಡು ಮಾಡುತ್ತಿರುವ ಶರಪೋವಾ ನ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್‌ನ‌ ಸ್ವಿಮ್‌ಸೂಟ್‌ ಸಂಚಿಕೆ ಸೇರಿದಂತೆ ಅನೇಕ ಮ್ಯಾಗಝಿನ್‌ ಶೂಟಿಂಗ್‌ಗಳಲ್ಲೂ ಪಾಲ್ಗೊಂಡಿದ್ದಾರೆ.

ನೈಕ್‌ನ 'ಮೇಕ್‌ ಯುವರ್ ಸೆಲ್ಫ್' ಎಂಬ ಇನ್ನೊಂದು ಪ್ರಚಾರ ಅಭಿಯಾನದಲ್ಲಿ ಶರಪೋವಾ ಇತರ ಕ್ರೀಡಾಪಟುಗಳೊಂದಿಗೆ ಪೋಸ್‌ ನೀಡಿದ್ದಾರೆ. ಈ ಶೂಟಿಂಗ್‌ನಲ್ಲಿ ಶರಪೋವಾ ಜತೆ ಆಸ್ಟ್ರೇಲಿಯದ ಸಪುರ್ ಲಾರಾ ಎನ್ವರ್‌, ಬ್ರಿಟಿಷ್‌ ಓಟಗಾರ್ತಿ ಪೆರ್ರಿ ಶೇಕ್ಸ್‌-ಡ್ರೇಟನ್‌, ಅಮೆರಿಕದ ಫ‌ುಟ್‌ಬಾಲ್‌ ಆಟಗಾರ್ತಿ ಹೋಪ್‌ ಸೋಲೊ, ಚೀನಾದ ಫ್ರೆಂಚ್‌ ಓಪನ್‌ ಚಾಂಪಿಯನ್‌ ಲೀ ನಾ, ಆಲ್ಜೀರಿಯಾದ ನರ್ತಕಿ ಸೋಫಿಯಾ ಬೌಟೆಲ್ಲ ಮತ್ತು ಅಮೆರಿಕದ ಓಟಗಾರ್ತಿ ಅಲಿಸನ್‌ ಫಾಕ್ಸ್‌ ಪಾಲ್ಗೊಂಡಿದ್ದಾರೆ.

ಫ್ರೆಂಚ್‌ ಓಪನ್‌ ಸೆಮಿಫೈನಲ್‌ನಲ್ಲಿ ಲೀ ನಾ ವಿರುದ್ಧ ಸೋತಿದ್ದ ಶರಪೋವಾ ತಮ್ಮ ನೆಚ್ಚಿನ ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಸಾಧನೆಯ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ತಮ್ಮ ಖಾಸಗಿ ಜೀವನದಲ್ಲೂ ಸಾಕಷ್ಟು ಪ್ರಗತಿ ಸಾಧಿಸಿರುವ ಅವರು ಈಗಾಗಲೇ ಸ್ಲೊವೇನಿಯಾದ ಎನ್‌ಬಿಎ ಬ್ಯಾಸ್ಕೆಟ್‌ಬಾಲ್‌ ಆಟಗಾರ ಸಾಶಾ ವುಜಚಿಚ್‌ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
She’s a former world No. 1 in her sport but Maria Sharapova proved in her new Nike campaign that she’s not bad at modelling either. The Russian tennis player showed off her rock hard abs and bulging biceps. The stunning 24-year-old American posed in tiny blue hot pants and a white sports bra while holding an abdominal crunch position.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more