ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಪ್ಯೂಟರ್ ನಗ್ನ ಚಿತ್ರ ಖಯಾಲಿ: ಸೆರೆ ಸಿಕ್ಕ ತಂತ್ರಜ್ಞ

By Srinath
|
Google Oneindia Kannada News

spyware on computers
ಲಂಡನ್ , ಜೂ 10: ಬಳಕೆದಾರರ ಕಂಪ್ಯೂಟರ್ ಗೆ ತನ್ನಷ್ಟಕ್ಕೆ ತಾನೇ ನೆಲೆಗೊಳ್ಳುವ ಸ್ಪೈ ವೇರ್' ತಂತ್ರಾಂಶ ಹರಿಬಿಟ್ಟು ಮಹಿಳೆಯರ ನಗ್ನ ಹಾಗೂ ಅರೆನಗ್ನ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದ ಬ್ರಿಟನ್ನಿನ ತಂತ್ರಜ್ಞನೊಬ್ಬನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ಕಂಪ್ಯೂಟರ್ ತಂತ್ರಜ್ಞ ಟ್ರೆವರ್ ಹಾರ್ವೆಲ್ ಎಂಬಾತನೇ ಈ ದುಷ್ಕೃತ್ಯ ಎಸಗುತ್ತಿದ್ದ ಆರೋಪಿ. ಫುಲ್ಲರ್ಟನ್ ನಗರದಲ್ಲಿರುವ ಆತನ ನಿವಾಸದಿಂದ ಕೀಳು ಅಭಿರುಚಿಯ ಲಕ್ಷಾಂತರ ಚಿತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಳಕೆದಾರರ ಕಂಪ್ಯೂಟರ್ ಹಾಗೂ ವೆಬ್‌ಕ್ಯಾಮ್‌ಗಳಿಗೆ ದೂರದಿಂದಲೇ ಕನ್ನ ಹಾಕಬಲ್ಲ ತಂತ್ರಾಂಶವನ್ನು (ಸ್ಪೈ ವೇರ್) ಈತ ಸಿದ್ಧಪಡಿಸಿದ್ದ. ವ್ಯಕ್ತಿಗಳು ಕಂಪ್ಯೂಟರ್ ಬಳಸುತ್ತಿದ್ದಾಗ ಒಳಗಿನ ಸೆನ್ಸಾರ್ ನಲ್ಲಿ ದೋಷ ಕಂಡುಬಂದಿದೆ. ಇದನ್ನು ನಿವಾರಿಸಿಕೊಳ್ಳಬೇಕೆಂದರೆ ಬಿಸಿನೀರಿನ ಹಬೆಯ ಬಳಿ ನಿಮ್ಮ ಕಂಪ್ಯೂಟರನ್ನು ಕೆಲವು ನಿಮಿಷಗಳ ಕಾಲ ಬಿಡಿ' ಎಂಬ ಎಚ್ಚರಿಕೆಯ ಸಂದೇಶ ಬರುತ್ತಿತ್ತು.

ಇದನ್ನು ನೋಡಿದ ಬಹುತೇಕ ಬಳಕೆದಾರರು ತಾವು ಸ್ನಾನ ಮಾಡುವಾಗ ಕಂಪ್ಯೂಟರನ್ನು ಸ್ನಾನದ ಕೊಠಡಿಯಲ್ಲಿ ಇರಿಸಿಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ಹಾರ್ವೆಲ್ ದೂರದಿಂದಲೇ ಮಹಿಳೆಯರ ನಗ್ನ, ಅರೆನಗ್ನ ಚಿತ್ರಗಳನ್ನು ಸೆರೆ ಹಿಡಿದು ಅವನ್ನು ರಹಸ್ಯವಾಗಿ ಇರಿಸಲಾಗಿದ್ದ ಸರ್ವರ್ ಗೆ ಡೌನ್‌ಲೋಡ್ ಮಾಡುತ್ತಿದ್ದ. ನಂತರ ತನ್ನ ವೈಯಕ್ತಿಕ ಕಂಪ್ಯೂಟರ್ ಗೆ ಅವೆಲ್ಲವನ್ನೂ ರವಾನಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಮಹಿಳೆಯೊಬ್ಬರ ಕಂಪ್ಯೂಟರ್ ಗೆ ಮೇಲಿನ ಎಚ್ಚರಿಕೆ ಸಂದೇಶ ಬಂದಾಗ ಅನುಮಾನಗೊಂಡ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬಯಲಾಗಿದೆ.

English summary
A man in Britain has been accused of planting spyware on personal computers which enabled him to secretly photograph individuals in their private moments. Technician Trevor Harwell was arrested on June 8 at his home in California, where detectives found thousands of the pictures on his computer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X