ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನಗೆ ಗನ್‌ ಹಿಡಿಯೊಕ್ಕೆ ಬರೊಲ್ಲ: ಸಂತೋಷ್‌ ಹೆಗಡೆ

By Srinath
|
Google Oneindia Kannada News

Justice N Santhosh Hegde
ಬೆಂಗಳೂರು, ಜೂನ್ 10: ಬಾಬಾ ರಾಮದೇವ್‌ ಅವರು ನಡೆಸುತ್ತಿರುವ ಭ್ರಷ್ಟಾಚಾರ ವಿರೋಧಿ ಶಾಂತಿಯುತ ಹೋರಾಟಕ್ಕೆ ಮಾತ್ರ ತಮ್ಮ ಬೆಂಬಲವೇ ಹೊರತು ಅವರ ಇತರ ಕ್ರಾಂತಿಕಾರಿ ಹೆಜ್ಜೆಗಳಿಗಲ್ಲ ಎಂದು ಜನ ಲೋಕಪಾಲ್‌ ಕರಡು ಸಮಿತಿ ಸದಸ್ಯರಾದ ಲೋಕಾಯುಕ್ತ ಎನ್‌. ಸಂತೋಷ್‌ ಹೆಗಡೆ ಗುರುವಾರ ಸ್ಪಷ್ಟಪಡಿಸಿದ್ದಾರೆ.

'ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿಯೂ ಈ ಭೇದ ಇತ್ತು. ನಾವು ತೀವ್ರಗಾಮಿಗಳಲ್ಲ. ನಾವು ಗಾಂಧೀಜಿ ಅವರ ತತ್ವಗಳಲ್ಲಿ ನಂಬಿಕೆ ಇಟ್ಟವರು. ನಮಗೆ ಗನ್‌ ಹಿಡಿಯಲು ಬರುವುದಿಲ್ಲ' ಎಂದು ಅವರು ಮಾರ್ಮಿಕವಾಗಿ ಹೇಳಿದರು.

ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ನಿಂತಿರುವ ಬಾಬಾ ರಾಮದೇವ್‌ 11 ಸಾವಿರ ಯುವಕರ ಸೈನ್ಯ ಕಟ್ಟುವುದಾಗಿ ಹೇಳಿರುವ ಕುರಿತು ಸುದ್ದಿಗಾರರು ಗಮನ ಸೆಳೆದಾಗ ಈ ರೀತಿ ಪ್ರತಿಕ್ರಿಯಿಸಿದ ಸಂತೋಷ್‌ ಹೆಗಡೆ, 'ನಮ್ಮ ದೇಶ ಹುಟ್ಟಿದ್ದೇ ಅಹಿಂಸಾತ್ಮಕ ಚಳವಳಿಯಿಂದ' ಎಂದರು.

ರಾಮದೇವ್‌ ಚಳವಳಿ ದೊಡ್ಡದಿದೆ, ಅವರ ಬೇಡಿಕೆಗಳಿಗೆಲ್ಲ ಬೆಂಬಲ ಕೊಡಲಾಗದು. ಉದಾಹರಣೆಗೆ ಅವರ ಬೇಡಿಕೆಯಂತೆ ಹಿಂದಿ ಭಾಷೆಗೆ ಪ್ರಾಧಾನ್ಯ ನೀಡಿದರೆ ದೇಶ ಇಬ್ಭಾಗವಾಗುತ್ತದೆ ಎಂದರು. ಸರಕಾರದಲ್ಲಿ ಜನಪರವಾದ ಬಿಲ್‌ಗ‌ಳು ಪಾಸಾಗುವುದಿಲ್ಲ. ಶಾಸಕರ ಸಂಬಳ ಹೆಚ್ಚಳ, ಅವರ ಊಟದ ಬಿಲ್‌, ಟೀ ಕಾಫಿ ಬಿಲ್‌, ಪ್ರವಾಸದ ಬಿಲ್‌ಗ‌ಳೆಲ್ಲ ಸರಾಗವಾಗಿ ಪಾಸಾಗುತ್ತವೆ ಎಂದು ಮತ್ತೂಂದು ಪ್ರಶ್ನೆಗೆ ಅವರು ಉತ್ತರಿಸಿದರು

English summary
The Lokayukta of Karnataka, Justice N Santhosh Hegde has said that he doesn't know how to hold gun. He was reacting Baba Ramdev's announcement that he would set up an 11,000-strong force to deal with police and anti-social elements attempting to disrupt his movement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X