ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನಲ್ಲಿ ಆನೆ ನಂತರ ಚಿರತೆ ಪ್ರತ್ಯಕ್ಷ

By Bm Lavakumar
|
Google Oneindia Kannada News

Cheetah enters Mysore city
ಮೈಸೂರು, ಜೂ 10: ಕಳೆದ ಎರಡು ದಿನದ ಹಿಂದೆಯಷ್ಟೇ ಮೈಸೂರು ನಗರಕ್ಕೆ ಕಾಡಾನೆಗಳು ನುಗ್ಗಿ ದಾಂಧಲೆ ನಡೆಸಿದ ಘಟನೆ ಇನ್ನೂ ಹಸಿರಾಗಿರುವಾಗಲೇ ಚಿರತೆಯೊಂದು ನಿನ್ನೆ ಮಧ್ಯರಾತ್ರಿ ನಗರದ ನಂಜನಗೂಡು ರಸ್ತೆಯಲ್ಲಿ ಪ್ರತ್ಯಕ್ಷವಾಗಿದ್ದು ಜನರು ಭಯಭೀತರಾಗಿದ್ದಾರೆ.

ನಗರದ ವಿದ್ಯಾರಣ್ಯಪುರಂನ ಸೂಯೇಜ್ ಫಾರಂ ಬಳಿ ರಾತ್ರಿ 11.45ರ ವೇಳೆಗೆ ನಾಯಿಗಳು ಬಗುಳಲಾರಂಭಿಸಿದವು. ಈ ಸಂದರ್ಭ ಮನೆಯಿಂದ ಹೊರಬಂದು ನೋಡಿದ ವ್ಯಕ್ತಿಯೊಬ್ಬರಿಗೆ ಚಿರತೆಯೊಂದು ನಾಯಿಯನ್ನು ಅಟ್ಟಿಸಿಕೊಂಡು ಹೋಗುತ್ತಿರುವುದು ಕಾಣಿಸಿದೆ. ಇದೇ ಚಿರತೆಯನ್ನು ಜೆ.ಪಿ.ನಗರದ ನಿವಾಸಿಯಾದ ಸುಬ್ರಹ್ಮಣ್ಯ ಎಂಬುವರು ಕೂಡ ನೋಡಿದ್ದು ಅವರು ತಕ್ಷಣವೇ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆಯೇ ರಾತ್ರಿಯೇ ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳನ್ನು ಕಳುಹಿಸಲಾಗಿತ್ತು. ಇಂದು ಮುಂಜಾನೆ ಅರಣ್ಯಾಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಹುಡುಕಾಟ ನಡೆಸಿದರಾದರೂ ಅಲ್ಲಿ ಚಿರತೆ ಕಾಣಲಿಲ್ಲ.

ಅಲ್ಲಿನ ನಿವಾಸಿಗಳು ಹೇಳುವ ಪ್ರಕಾರ ಈ ಚಿರತೆ ಚಾಮುಂಡಿ ಬೆಟ್ಟದ ಕಾಡಿನಿಂದ ಬಂದಿದ್ದು ಅದು ಸೂಯೇಜ್ ಫಾರಂನಲ್ಲಿ(ಈ ಫಾರಂನಲ್ಲಿ ಹುಲ್ಲು ಬೆಳೆಯಲಾಗುತ್ತಿದೆ) ಹುಲ್ಲುಗಳ ನಡುವೆ ಅವಿತು ಕುಳಿತಿರುವ ಸಾಧ್ಯತೆ ಕಡಿಮೆಯಿದ್ದು, ಅದು ರಾತ್ರಿಯೇ ಹಿಂತಿರುಗಿದೆ.

ಸೂಯೇಜ್ ಫಾರಂ ನೂರಾರು ಎಕರೆ ವಿಸ್ತೀರ್ಣ ಹೊಂದಿದ್ದು, ಇಲ್ಲಿಗೆ ಸಮೀಪವೇ ಚಾಮುಂಡಿಬೆಟ್ಟ ಇರುವುದರಿಂದ ಅಲ್ಲಿನ ಕಾಡಿನಿಂದ ಒಮ್ಮೊಮ್ಮೆ ಚಿರತೆಗಳು ಇತ್ತ ಬರುವುದು ಸಾಮಾನ್ಯ. ಆದರೆ ಅವು ಯಾರಿಗೂ ತೊಂದರೆ ನೀಡದೆ ಹಿಂತಿರುಗುತ್ತವೆ. ಆ ಬಗ್ಗೆ ಭಯಭೀತರಾಗುವ ಅಗತ್ಯವಿಲ್ಲ ಎಂದು ಅಲ್ಲಿನ ನಿವಾಸಿಯೊಬ್ಬರು ಹೇಳಿದ್ದಾರೆ.

English summary
After the wild Elephants menace a Cheetah has entered city limit near Nanjangud road, Mysore city. Cheetah has entered Suyez farm house and disappeared, Forest Department and police are searching for the wild guest
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X