ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೃತ್ತಿಪರ ಕೋರ್ಸ್ ಗೊಂದಲ ಮುಕ್ತಾಯ, ಕೌನ್ಸೆಲಿಂಗ್ ಆರಂಭ

By Prasad
|
Google Oneindia Kannada News

VS Acharya
ಬೆಂಗಳೂರು, ಜೂ. 9 : ಸೀಟು ಹಂಚಿಕೆ ಮತ್ತು ವೃತ್ತಿಪರ ಕೋರ್ಸ್ ಗಳಿಗಾಗಿ ಶುಲ್ಕ ನಿಗದಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಮತ್ತು ಖಾಸಗಿ ಇಂಜಿಯರಿಂಗ್ ಕಾಲೇಜುಗಳ ನಡುವೆ ಉದ್ಭವಾಗಿದ್ದ ಗೊಂದಲ ಕೊನೆಯಾಗಿದ್ದು, ಕೌನ್ಸೆಲಿಂಗ್ ಪ್ರಾರಂಭವಾಗಿದೆ.

ಉನ್ನತ ಶಿಕ್ಷಣ ಸಚಿವ ಡಾ. ವಿಎಸ್ ಆಚಾರ್ಯ ಅವರ ಸಮ್ಮುಖದಲ್ಲಿ ಕನ್ಸಾರ್ಷಿಯಮ್ ಆಫ್ ಮೆಡಿಕಲ್, ಇಂಜಿನಿಯರಿಂಗ್ ಮತ್ತು ಡೆಂಟಲ್-ಕರ್ನಾಟಕ (ಕಾಮೆಡ್-ಕೆ) ಮತ್ತು ಸರಕಾರಗಳು 50:50 ಅನುಪಾತದಲ್ಲಿ ಸೀಟು ಹಂಚಿಕೊಳ್ಳಲು ಇಂದು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದವು.

50 ಅನುಪಾತದಲ್ಲಿ ಶೇ.45ರಷ್ಟು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮುಖಾಂತರ ಸೀಟು ಭರ್ತಿ ಮತ್ತು ಶೇ.5ರಷ್ಟು ಬಡಮಕ್ಕಳ ಕೋಟಾ ಒಳಗೊಂಡಿದೆ. ಈ ವರ್ಷ ಒಟ್ಟು 60 ಸಾವಿರ rank ನೀಡಲಾಗಿದ್ದು, ಇಂದಿನಿಂದ ಕೌನ್ಸೆಲಿಂಗ್ ಪ್ರಾರಂಭವಾಗಲಿದೆ ಎಂದು ಆಚಾರ್ಯ ತಿಳಿಸಿದರು.

ಖಾಸಗಿ ಕಾಲೇಜುಗಳು ಇಂಜಿನಿಯರಿಂಗ್ ಸೀಟಿಗೆ ಸರಕಾರಿ ಕೋಟಾದಡಿಯಲ್ಲಿ 35 ಸಾವಿರ ರು. ಮತ್ತು ಕಾಲೇಜು ಕೋಟಾದಡಿಯಲ್ಲಿ 1.25 ಲಕ್ಷ ರು.ಗಿಂತ ಹೆಚ್ಚು ಶುಲ್ಕ ವಿಧಿಸುವಂತಿಲ್ಲ. ಕಾಮೆಡ್-ಕೆ ಇನ್ನೂ ಶುಲ್ಕ ನಿಗದಿಯ ಬಗ್ಗೆ ವಿವರ ನೀಡಿಲ್ಲ.

English summary
The tussle between the Karnataka government and professional colleges ended and the couselling begins from June 9. Both COMED-K and the govt have signed an agreement and agreed to share the seats on the ratio at 50:50. Good news for the students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X