• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುದ್ದಿನ ಡೊನಾಲ್ಡ್‌ ಡಕ್‌ ಗೆ ಹ್ಯಾಪಿ ಬರ್ತ್ ಡೆ ಹೇಳಿದಿರಾ!?

By Srinath
|

ಬೆಂಗಳೂರು, ಜೂನ್ 9: ಅತ್ಯಂತ ಜನಪ್ರಿಯ ಡಿಸ್ನಿ ಕಾರ್ಟೂನ್‌ ಡೊನಾಲ್ಡ್‌ ಡಕ್‌ಗೆ ಇಂದು 77ರ ಹುಟ್ಟುಹಬ್ಬ. 1934ರಲ್ಲಿ ವಾಲ್ಟ್ ಡಿಸ್ನಿ ಮತ್ತು ಡಿಕ್‌ ಲುಂಡಿ ಅವರಿಂದ ರೂಪಿತಗೊಂಡ ಈ ಕಾರ್ಟೂನ್‌ 76 ವರ್ಷಗಳ ಬಳಿಕವೂ ತನ್ನ ಜನಪ್ರಿಯತೆಯನ್ನು ಹಿಂದಿನಂತೆಯೇ ಉಳಿದಿರುವುದು ಅದು ಪಡೆದಿರುವ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಡಿಸ್ನಿಯ ಫ್ಯಾಬ್‌ ನ ಪಾತ್ರಗಳಾದ ಮಿಕ್ಕಿ ಮೌಸ್‌, ಮಿನ್ನಿ ಮೌಸ್‌, ಡೈಸಿ ಡಕ್‌, ಪೂಟೋಗಳ ಜತೆಗೆ ಡೊನಾಲ್ಡ್‌ ಡಕ್‌ ಕೂಡಾ ಸೇರಿದೆ. 1934ರ ಜೂನ್‌ 9ರಂದು ಮೊದಲ ಪ್ರದರ್ಶನ ಕಂಡ 'ದಿ ವೈಸ್‌ ಲಿಟ್ಲ್ ಹೆನ್‌' ಎಂಬ ಕಾರ್ಟೂನ್‌ ಚಿತ್ರದಲ್ಲಿ ಇತರೆ ಪಾತ್ರಗಳ ಜೊತೆಗೆ ಮೊದಲ ಬಾರಿಗೆ ಡೊನಾಲ್ಡ್‌ ಡಕ್‌ ಕಾಣಿಸಿಕೊಂಡಿತ್ತು. ಬಳಿಕ ಡೊನಾಲ್ಡ್‌ ಡಕ್‌ಗೆ ಸಿಕ್ಕ ಜನಪ್ರಿಯತೆಯಿಂದಾಗಿ 1937ರಲ್ಲಿ ಪ್ರತ್ಯೇಕ ಕಾರ್ಟೂನ್‌ಗಳನ್ನು ಬಿಡುಗಡೆ ಮಾಡಲಾಯಿತು.

ವಾಲ್ಟ್ ಡಿಸ್ನಿ ಅವರು ಲಾಸ್ ಏಂಜಲೀಸ್ ಗೆ ಬರುವುದಕ್ಕೂ ಮುನ್ನ ತಮ್ಮ ಕಾರ್ಟೂನ್ ರಚನೆಗಳು ಮನ್ನಣೆ ಗಳಿಸದೆ ಭಾರಿ ಸೋಲುಂಡಿದ್ದರು. ಬ್ಯಾಂಕುಗಳಿಂದಲೂ ಹಣಕಾಸು ನೆರವು ದೊರಕಲಿಲ್ಲ. ಕೊನೆಗೆ, 1928ರಲ್ಲಿ ತಮ್ಮ ಕಾರನ್ನೇ ಮಾರಿ ಮಿಕ್ಕಿ ಮೌಸ್ ಗೆ ಜೀವ ತುಂಬಿದ್ದರು. 'ಸ್ನೊ ವೈಟ್ ಅಂಡ್ ಸೆವೆನ್ ಡ್ವಾರ್ಫ್ಸ್' ಬಾಕ್ಸಾಫೀಸಿನಲ್ಲಿ ಯಶ ಗಳಿಸಿದ ಬಳಿಕ ಡಿಸ್ನಿಗೆ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Thursday, June 9th marks the birthday of the iconic cartoon character created from the imagination of Walt Disney – Donald Duck. Donald’s first appearance came in 'The Wise Little Hen' which debuted June 9, 1934.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more