ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹ್ಯಾಕರ್ ಗಳ ಪಾಲಾದ ಸಿಟಿಗ್ರೂಪ್ ಕ್ರೆಡಿಟ್ ಕಾರ್ಡ್ ಮಾಹಿತಿ

By Prasad
|
Google Oneindia Kannada News

Citigroup card data hacked
ಲಂಡನ್, ಜೂ. 9 : ಸಿಟಿಗ್ರೂಪ್ ನ ಕಂಪ್ಯೂಟರ್ ನೆಟ್ವರ್ಕ್ ಗೆ ಕನ್ನಡ ಹಾಕಿರುವ ಹ್ಯಾಕರ್ ಗಳು ಅಮೆರಿಕದಲ್ಲಿರುವ ಲಕ್ಷಾಂತರ ಕ್ರೆಡಿಟ್ ಕಾರ್ಡ್ ಬಳಕೆದಾರರ ಅತ್ಯಮೂಲ್ಯ ಮಾಹಿತಿಗಳಿಗೆ ಲಗ್ಗೆ ಹಾಕಿದ್ದಾರೆ ಎಂದು ಫೈನಾನ್ಶಿಯಲ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಉತ್ತರ ಅಮೆರಿಕಾದಲ್ಲಿಯೇ 210 ಲಕ್ಷ ಸಿಟಿಬ್ಯಾಂಕ್ ಕಾರ್ಡ್ ಬಳಕೆದಾರರಿದ್ದಾರೆ. ಇವರಲ್ಲಿ ಶೇ.1ರಷ್ಟು ಬಳಕೆದಾರರ ಮಾಹಿತಿ ಮಾತ್ರ ಸೈಬರ್ ಕ್ರಿಮಿನಲ್ ಗಳ ಪಾಲಾಗಿದೆ. ಈ ಮಾಹಿತಿಗೆ ಕನ್ನ ಹಾಕಿರುವುದು ಮೇ ತಿಂಗಳಲ್ಲಿಯೇ ಬೆಳಕಿಗೆ ಬಂದಿದೆ.

ಸಿಟಿ ಆನ್ ಲೈನ್ ಅಕೌಂಟ್ ತಾಣವನ್ನು ಹೊಕ್ಕ ಹ್ಯಾಕರ್ ಗಳು ಬಳಕೆದಾರರ ಹೆಸರು, ಈಮೇಲ್ ವಿಳಾಸ, ಅಕೌಂಟ್ ನಂಬರ್ ಗಳನ್ನು ಮಾತ್ರ ದಕ್ಕಿಸಿಕೊಂಡಿದ್ದಾರೆ. ಆದರೆ, ಕಾರ್ಡ್ ಸುರಕ್ಷತಾ ಕೋಡ್, ಸೋಷಿಯಲ್ ಸೆಕ್ಯುರಿಟಿ ನಂಬರ್ ಗಳನ್ನು ಪಡೆಯಲು ಅವರಿಗೆ ಸಾಧ್ಯವಾಗಿಲ್ಲ.

ಇದರಿಂದ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಹೆಚ್ಚಾಗಿ ಬಿಸಿ ತಾಗಿದೆ. ಡೆಬಿಟ್ ಕಾರ್ಡ್ ಬಳಕೆದಾರರ ಮಾಹಿತಿ ಕೂಡ ತಿರುಚಲಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ. ಅತ್ಯಂತ ಸುರಕ್ಷಿತವಾಗಿದೆ ಎನ್ನಲಾಗದ ಇಂಥ ಮಾಹಿತಿಗಳು ಇತರರ ಪಾಲಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಲಾಖೀಡ್ ಮಾರ್ಟಿನ್, ಸೋನಿ ಮುಂತಾದ ಸಂಸ್ಥೆಗಳಲ್ಲಿಯೂ ಮಾಹಿತಿಗಳನ್ನು ಹ್ಯಾಕರುಗಳು ಹೆಕ್ಕುತ್ತಿದ್ದಾರೆ.

English summary
Hackers have hacked the Citigroups credit card customers' vital data in North America. Though the hackers could not access security code, social security numbers, the Financial Times has reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X