ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೆರೆಗಳ ತಜ್ಞ, ಸೊಗಸುಗಾರ ಎಂಎಫ್ ಹುಸೇನ್ ನಿಧನ

By Mahesh
|
Google Oneindia Kannada News

Artist Mf hussain Passes away in London
ಲಂಡನ್, ಜೂ 9: ವಿವಾದಿತ ಭಾರತೀಯ ಕುಂಚ ಕಲಾವಿದ ಎಂಎಫ್ ಹುಸೇನ್ ಲಂಡನ್ ನಲ್ಲಿ ನಿಧನರಾಗಿದ್ದಾರೆ. ಪಿಕಾಸೋ ಆಫ್ ಇಂಡಿಯಾ ಎಂದು ಕರೆಸಿಕೊಂಡಿದ್ದ ಹುಸೇನ್, ಹಿಂದೂ ವಿರೋಧಿ ಚಿತ್ರಗಳನ್ನು ರಚಿಸಿ ವಿವಾದಕ್ಕೆ ಕಾರಣರಾಗಿದ್ದರು. ಕಳೆದ ಎರಡು ತಿಂಗಳಿನಿಂದ ಅನಾರೋಗ್ಯ ಪೀಡಿತರಾಗಿದ್ದ 95 ವರ್ಷದ ಹುಸೇನ್ ಅವರನ್ನು ಎರಡು ದಿನಗಳ ಹಿಂದೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಇಂದು 2.30 ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಸೆಪ್ಟೆಂಬರ್ 17, 1915ರಲ್ಲಿ ಪಂಧರ್ ಪುರ್ ನಲ್ಲಿ ಜನಿಸಿದ ಹುಸೇನ್, ಜಗತ್ತು ಕಂಡ ಉತ್ತಮ ಕಲಾವಿದರಲ್ಲಿ ಒಬ್ಬರು. 70ರ ದಶಕದಲ್ಲಿ ಹಿಂದೂ ವಿರೋಧಿ ನಗ್ನ ದೇವತೆಗಳನ್ನು ಚಿತ್ರಿಸಿ ಕುಖ್ಯಾತಿ ಗಳಿಸಿದರು. ನಂತರ 2006ರಲ್ಲಿ ಭಾರತವನ್ನು ತೊರೆದು ಕತಾರ್ ನಲ್ಲಿ ನೆಲೆಸಿ ಅಲ್ಲಿನ ಪೌರತ್ವ ಪಡೆದಿದ್ದರು. ಭಾರತದಲ್ಲಿ ಹುಸೇನ್ ವಿರುದ್ಧ ಇವರ ಮೊಕದ್ದಮೆಗಳು ಇನ್ನೂ ಬಾಕಿ ಇದ್ದು ಅವರ ಆಸ್ತಿ ಪಾಸ್ತಿ ಕೋರ್ಟ್ ಪಾಲಾಗಿದೆ.

ಬೆಂಗಾಲ್ ಸ್ಕೂಲ್ ಆಫ್ ಆರ್ಟ್ ನ ಕಲಾವಿದರಾದ ಹುಸೇನ್ ಜೂರಿಚ್ ನಲ್ಲಿ ಚಿತ್ರ ಪ್ರದರ್ಶನ ಮಾಡಿ ಯಶಸ್ವಿಯಾಗಿದ್ದರು. ಭಾರತ ಸರ್ಕಾರ ಹುಸೇನ್ ಅವರಿಗೆ ಪದ್ಮಶ್ರೀ, ಪದ್ಮ ವಿಭೂಷಣ್ ಪ್ರಶಸ್ತಿ ನೀಡಿ ಗೌರವಿಸಿದೆ.ರಾಜಾ ರವಿವರ್ಮ ಪ್ರಶಸ್ತಿ ಕೂಡಾ ಪಡೆದಿದ್ದರು.

ಬಾಲಿವುಡ್ ನಂಟು: ಮಾಧುರಿ ದೀಕ್ಷಿತ್ ರನ್ನು ಸಿಕ್ಕಾಪಟ್ಟೆ ಇಷ್ಟಪಡುತ್ತಿದ್ದ ಹುಸೇನ್, ಗಜ ಗಾಮಿನಿ ಎಂಬ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದರು. ಮಾಧುರಿ ದೀಕ್ಷಿತ್ ರನ್ನು ಕಾಳಿದಾಸನ ವರ್ಣನೆಯ ಕಾವ್ಯ ಕನ್ನಿಕೆ, ಮೊನಾಲಿಸಾ ಮಂದಹಾಸ, ಬಂಡಾಯಗಾರ್ತಿ ಮುಂತಾದ ರೀತಿಯಲ್ಲಿ ಚಿತ್ರಿಸಿ ಆನಂದ ಹೊಂದಿದ್ದರು. ನಂತರ ಟಬು ನಾಯಕಿಯಾಗಿದ್ದ ಮೀನಾಕ್ಷಿ: ಟೇಲ್ ಆಫ್ ಥ್ರೀ ಸಿಟೀಸ್ ಎಂಬ ಚಿತ್ರವನ್ನು ನಿರ್ಮಿಸಿದರು. ಎಂಎಫ್ ಹುಸೇನ್ ಅವರ ಜೀವನ ಕಥೆ ಆಧಾರಿತ ಚಿತ್ರ"ದ ಮೇಕಿಂಗ್ ಆಫ್ ದ ಪೈಂಟರ್" ಚಿತ್ರ ನಿರ್ಮಾಣಗೊಳ್ಳುತ್ತಿದ್ದು, ಹುಸೇನ್ ಪಾತ್ರಾನ್ನು ಶ್ರೇಯಸ್ ತಲ್ಪಾಡೆ ನಿರ್ವಹಿಸುತ್ತಿದ್ದಾರೆ. [ವಿದ್ಯಾ ಬಾಲನ್ ನಗ್ನ ಚಿತ್ರ ಎಲ್ಲಾ ಹುಸಿ!]

ವಿವಾದಗಳು : 40ರ ದಶಕದಲ್ಲೇ ವೃತ್ತಿಪರ ಕಲಾವಿದರಾಗಿ ಹುಸೇನ್ ಕಾಣಿಸಿಕೊಂಡವರು. 90ರ ದಶಕದಲ್ಲಿ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗ, ವಿವಾದಗಳು ಅವರ ಬೆನ್ನ ಹತ್ತತೊಡಗಿದವು. ಹಿಂದೂ ದೇವತೆಗಳಾದ ದುರ್ಗಾ,ಸರಸ್ವತಿ, ಹನುಮಂತ ಹಾಗೂ ಭಾರತ ಮಾತೆಯನ್ನು ಲೈಂಗಿಕ ಪ್ರಚೋದನಕಾರಿಯಾಗಿ, ನಗ್ನವಾಗಿ ಚಿತ್ರಿಸಿದ ಹುಸೇನ್, ಬಹು ಸಂಖ್ಯಾತ ಹಿಂದೂಗಳ ಆಕ್ರೋಶಕ್ಕೆ ಗುರಿಯಾದರು. ಬಜರಂಗ ದಳ, ಶಿವಸೇನೆಯಿಂದ ಹುಸೇನ್ ಮೇಲೆ ಸತತ ದಾಳಿ ನಡೆಯುತ್ತಲೇ ಇತ್ತು.

ಮೀನಾಕ್ಷಿ ಚಿತ್ರದಲ್ಲಿ ಇದ್ದ ಖವ್ವಾಲಿ ಹಾಡು ನೂರು ಉನ್ ಅಲಾ ನೂರ್ ಕೇಳಿದ ಮುಸ್ಲಿಂ ಸಂಘಟನೆಗಳು ಹುಸೇನ್ ವಿರುದ್ಧ ತಿರುಗಿ ಬಿದ್ದವು. ಕುರಾನ್ ನ ಸಾಲುಗಳನ್ನು ನೇರವಾಗಿ ಬಳಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಪ್ರತಿಭಟನೆಗಳ ಸಹ ನಡೆದವು. ಹಿಂದೂ ದೇವತೆಗಳಂತೆ ಇಸ್ಲಾಂ ದೇವರನ್ನು ನಗ್ನವಾಗಿ ಚಿತ್ರಿಸುವ ಧೈರ್ಯ ಇದೆಯೇ? ಎಂದು ಖ್ಯಾತ ಕಲಾವಿದ ಸತೀಶ್ ಗುಜ್ರಾಲ್ ಅವರು ಹುಸೇನ್ ಅವರನ್ನು ಪ್ರಶ್ನಿಸಿದ್ದರು. ಆ

ವಿವಾದಗಳಿಂದ ಬೇಸತ್ತ ಹುಸೇನ್ ಭಾರತದಿಂದ ಸ್ವಯಂ ಗಡಿಪಾರಾಗಿ ದುಬೈ, ಕತಾರ್ ನಲ್ಲಿ ನೆಲೆಸಿ, ಭಾರತಕ್ಕೆ ಮತ್ತೆ ವಾಪಾಸ್ಸಾಗುವ ಯಾವುದೇ ಆಸೆ ವ್ಯಕ್ತಪಡಿಸಲಿಲ್ಲ. ಆದರೆ, ಭಾರತದಿಂದ ದೂರಾದ ಹುಸೇನ್ ಗೆ ಭಾರತದ ಸರ್ವ ಶ್ರೇಷ್ಠ ನಾಗರೀಕ ಪ್ರಶಸ್ತಿ ಭಾರತ ರತ್ನ ನೀಡಬೇಕೆಂದು ಶಶಿ ತರೂರ್ ಸೇರಿದಂತೆ ಹಲವರು ಒತ್ತಾಯಿಸಿದ್ದು ವಿಪರ್ಯಾಸ. ಆದರೂ, ಹುಸೇನ್ ನಿಧನದಿಂದ ಒಂದು ಯುಗಾಂತ್ಯವಾಗಿ ಎಂದರೆ ತಪ್ಪಾಗಲಾರದು.

ಲೇಖನಗಳು :
ಮಕ್ಬೂಲ್ ಫಿದಾ ಹುಸೇನ್ ಜೀವನ ಮತ್ತು ವಿವಾದಗಳು

English summary
Connoisseurs of arts miss a Narcissist and a painter in MF Hussain : India's most celebrated painter living in exile following his controversial works that angered a section of Hindus, is passed away in early hours of 9 June 2011 in a London hospital. He died of heart attack reports Hindustan Time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X