ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾತೃಪಕ್ಷಕ್ಕೆ ವಾಪಸಾದ ಉಮಾ ಭಾರತಿ

By Srinath
|
Google Oneindia Kannada News

Uma Bharti returns to BJP
ನವದೆಹಲಿ‌, ಜೂನ್ 7: ಬಿಜೆಪಿಯ ವಿವಾದಿತ ನಾಯಕಿ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಅವರು 6 ವರ್ಷಗಳ ಬಳಿಕ ಮಾತೃಪಕ್ಷಕ್ಕೆ ಮಂಗಳವಾರ ಮರಳಿದ್ದಾರೆ. ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಹೂಗುಚ್ಛ ನೀಡಿ ಉಮಾ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು. 2005ರ ಡಿಸೆಂಬರ್ ನಲ್ಲಿ ಪಕ್ಷವು ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಉಚ್ಛಾಟಿಸಿತ್ತು.

ಇತ್ತೀಚೆಗೆ ಲಕ್ನೋದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಮುಂದಿನ ವರ್ಷ ರಾಜ್ಯ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಉತ್ತರ ಪ್ರದೇಶದಲ್ಲಿ ಪಕ್ಷದ ಪರ ಪ್ರಚಾರ ಕಾರ್ಯಭಾರವನ್ನು ಉಮಾಗೆ ವಹಿಸಲಾಗಿದೆ ಎಂದು ಗಡ್ಕರಿ ತಿಳಿಸಿದ್ದಾರೆ.

ಮೊಹಮದ್ ಅಲಿ ಜಿನ್ನಾ ಅವರನ್ನು ಎಲ್.ಕೆ. ಅಡ್ವಾಣಿ ಅವರು ತಮ್ಮ ಪುಸ್ತಕದಲ್ಲಿ ಹಾಡಿಹೊಗಳಿದ್ದನ್ನು ಉಮಾ ತೀವ್ರವಾಗಿ ಖಂಡಿಸಿದ್ದರು. ಅಡ್ವಾಣಿ ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆಯೂ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷವು ಅವರನ್ನು ಉಚ್ಛಾಟಿಸಿತ್ತು. ಬಳಿಕ ಉಮಾ ಭಾರತೀಯ ಜನಶಕ್ತಿ ಪಕ್ಷವನ್ನು ಸ್ಥಾಪಿಸಿದ್ದರು.

English summary
Former Madhya Pradesh chief minister Uma Bharti, who was expelled from the Bhratiya Janata Party (BJP) in December 2005 for indiscipline, was re-inducted in the party on Tuesday (June7) after almost 6 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X