ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ಣಾ ಉಪವಾಸ ರಾಜ್ ಘಾಟ್ ಗೆ ಸ್ಥಳಾಂತರ

By Srinath
|
Google Oneindia Kannada News

Anna Hazare
ನವದೆಹಲಿ, ಜೂನ್ 7: ಅಣ್ಣಾ ಹಜಾರೆ ಅವರು ಜನಲೋಕಪಾಲ ಮಸೂದೆ ಆಂದೋಲನವನ್ನು ಬುಧವಾರ (ಜೂನ್ 8) ಬೆಳಗ್ಗೆ ರಾಜಘಾಟ್ ಬಳಿ ಮುಂದುವರಿಸಲಿದ್ದಾರೆ ಎಂದು ಜನಲೋಕಪಾಲ ಕರಡು ಮಸೂದೆ ಸಮಿತಿ ಸದಸ್ಯ ಕೇಜ್ರಿವಾಲ್ ಪ್ರಕಟಿಸಿದ್ದಾರೆ.

ನಿಷೇದಾಜ್ಞೆ ಹೊರತಾಗಿ ರಾಜಘಾಟ್ ನಲ್ಲಿ ಪೊಲೀಸರೊಂದಿಗೆ ಘರ್ಷಣೆಯಲ್ಲಿ ತೊಡಗದೆ ಶಾಂತಿಯುತವಾಗಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ. ಭಜನೆ, ಪ್ರಾರ್ಥನೆಗಳ ಜತೆ ಜತೆಗೆ 5 ಗಂಟೆಗೆ ಚರ್ಚಾ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.

ಈ ಮಧ್ಯೆ, ರಾಜಧಾನಿಯಲ್ಲಿ ಈಗಾಗಲೇ ನಿಷೇದಾಜ್ಞೆ ಜಾರಿಯಲ್ಲಿರುವುದರಿಂದ ಜಂತರ್ ಮಂತರ್ ನಲ್ಲಿ ಟೀಂ ಅಣ್ಣಾ ಉಪವಾಸ ಸತ್ಯಾಗ್ರಹಕ್ಕೆ ಅನುಮತಿ ನೀಡಲು ಸರಕಾರ ನಿರಾಕರಿಸಿತು. ಆದರೆ, ರಾಜಘಾಟ್ ಸುತ್ತಮುತ್ತ ನಿಷೇದಾಜ್ಞೆ ಇಲ್ಲದಿರುವುದರಿಂದ ಅಲ್ಲಿಗೆ ಸತ್ಯಾಗ್ರಹ ಸ್ಥಳವನ್ನು ಬದಲಾಯಿಸಲಾಗಿದೆ ಎಂದು ಟೀಂ ಅಣ್ಣಾ ಘೋಷಿಸಿದೆ.

English summary
Anna Hazare and his Janlokpal movement have shifted the venue of tomorrow's fast to Raj Ghat. The Fast will be from 10 am to 6 pm on June 8. There will also be a debate at 5 pm, in addition to bhajans and prayers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X