ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರನ್ ಕಿರುಕುಳಕ್ಕೆ ಏರ್ಸೆಲ್ ಮಾರಿಬಿಟ್ಟೆ: ಶಿವಶಂಕರನ್

|
Google Oneindia Kannada News

ದಯಾನಿಧಿ ಮಾರನ್
ನವದೆಹಲಿ, ಜೂನ್ 6: ಇತ್ತೀಚೆಗೆ 2ಜಿ ಗಾಳಕ್ಕೆ ಸಿಕ್ಕಿರುವ ಹೊಸ ಮೀನು ದಯಾನಿಧಿ ಮಾರನ್ ತನಿಖೆಯನ್ನು ಸಿಬಿಐ ತೀವ್ರಗೊಳಿಸಿದೆ. ಇಂದು ಮಾರನ್ ವಿರುದ್ಧ ಏರ್ಸೆಲ್ ಮಾಜಿ ಮಾಲೀಕ ಮಾಡಿರುವ "ಕಿರುಕುಳ" ಆರೋಪವನ್ನು ಸಿಬಿಐ ದಾಖಲಿಸಿಕೊಂಡಿದೆ.

"ಏರ್ಸೆಲ್ ಕಂಪನಿಯನ್ನು ಟಿ. ಆನಂದಕೃಷ್ಣನ್ ಗೆ ಮಾರಾಟ ಮಾಡುವಂತೆ ಒತ್ತಾಯಿಸುತ್ತಿದ್ದರು. ಪ್ರತಿಬಾರಿಯು ಮೊಬೈಲ್ ನೆಟ್ ವರ್ಕ್ ಪರವಾನಿಗೆ ಅಪ್ಲಿಕೇಷನ್ ತಿರಸ್ಕರಿಸುವ ಮೂಲಕ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಕಿರುಕುಳ ನೀಡಿತ್ತು" ಎಂದು ಏರ್ಸೆಲ್ ಮಾಜಿ ಮಾಲಿಕ ಶಿವಶಂಕರನ್ ಆರೋಪಿಸಿದ್ದಾರೆ.

ಆದರೆ ಬಲವಂತದಿಂದ ಕಂಪನಿಯನ್ನು ಮಾರಾಟ ಮಾಡಿಸಿದ್ದಾರೆ. ನಂತರ ಆನಂದಕೃಷ್ಣನ್ ಏರ್ಸೆಲನ್ನು ಸ್ವಾಧೀನಪಡಿಸಿಕೊಂಡರು. ಆದರೆ ಅವರು ಸ್ವಾಧೀನಪಡಿಸಿಕೊಂಡ ಒಂದೇ ತಿಂಗಳಲ್ಲಿ ಸುಮಾರು 14 ಮೊಬೈಲ್ ನೆಟ್ ವರ್ಕ್ ಪರವಾನಿಗೆಯನ್ನು ನೀಡಲಾಗಿದೆ ಎಂದು ಶಿವಶಂಕರನ್ ಹೇಳಿದ್ದಾರೆ.

ಆನಂದಕೃಷ್ಣನ್ ಕಂಪನಿ ಸನ್ ಟಿವಿಗೆ ಸುಮಾರು 800 ಕೋಟಿ ರು. ಹೂಡಿಕೆ ಮಾಡಿದೆ ಎಂದರು. ಆದರೆ ಇವರ ಆರೋಪವನ್ನು ಶಿವಶಂಕರನ್ ತಳ್ಳಿಹಾಕಿದ್ದಾರೆ. ಶಿವಶಂಕರನ್ ಗೆ ಕಿರುಕುಳ ನೀಡಲು ತನ್ನ ಹುದ್ದೆಯನ್ನು ಬಳಸಿಕೊಂಡಿಲ್ಲ ಮತ್ತು ತಾನು ಸನ್ ಟಿವಿಯಲ್ಲಿ ಯಾವುದೇ ಷೇರನ್ನು ಹೊಂದಿಲ್ಲ ಎಂದು ಮಾರನ್ ಹೇಳಿದ್ದಾರೆ.

English summary
Mr Sivasankaran claims that harassment by the Department of Telecommunications (DoT), which repeatedly rejected his applications for mobile network licenses, forced him to sell his company to T Anandakrishnan (ndtv report).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X