ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮದೇವ್ ಬಂಧನ: ದೆಹಲಿಯಲ್ಲಿ ಅರಾಜಕತೆ

By Srinath
|
Google Oneindia Kannada News

Baba Ramdev
ನವದೆಹಲಿ, ಜೂನ್ 5: ಕಪ್ಪುಹಣದ ವಿರುದ್ಧ ಶನಿವಾರ ಬೆಳಿಗ್ಗೆ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಿದ ಯೋಗ ಗುರು ಬಾಬಾ ರಾಮ್‌ದೇವ್ ಅವರನ್ನು ಭಾನುವಾರ ಬೆಳಗಿನ ಜಾವ 1.15ರಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಬಲವಂತದ ಕಾರ್ಯಾಚರಣೆಯಿಂದ ಸ್ಥಳದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ಸಂಪೂರ್ಣ ಗೊಂದಲದ ಗೂಡಾಗಿದೆ.

ಬಾಬಾ ಬಂಧನದಿಂದ ಕೆರಳಿದ ಅನುಯಾಯಿಗಳನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಆಶ್ಚರ್ಯವೆಂದರೆ ನಿರಶನದಲ್ಲಿ ಪಾಲ್ಗೊಂಡಿದ್ದ ಮಹಿಳೆಯರನ್ನು ಲೆಕ್ಕಿಸದೆ ಪೊಲೀಸರು ಎಲ್ಲರ ಮೇಲೂ ಬಲ ಪ್ರಯೋಗ ಮಾಡಿದ್ದಾರೆ. ಮಹಿಳೆಯರ ವಿರುದ್ಧ ಕ್ರಮ ಕೈಗೊಳ್ಳುವ ವೇಳೆ ಒಬ್ಬೇ ಒಬ್ಬ ಮಹಿಳಾ ಪೊಲೀಸ್ ಸ್ಥಳದಲ್ಲಿರಲಿಲ್ಲ. ಎಲ್ಲ ಪುರುಷ ಪೊಲೀಸರದ್ದೇ ಕಾರುಬಾರು ನಡೆದಿದೆ.

ಭದ್ರತೆಯ ದೃಷ್ಟಿಯಿಂದ ಉಪವಾಸಕ್ಕೆ ನೀಡಿದ್ದ ಒಪ್ಪಿಗೆಯನ್ನು ವಾಪಸ್ ತೆಗೆದುಕೊಳ್ಳಲಾಗಿದ್ದು, ನಿರಶನ ನಿರತ ಬಾಬಾ ಅನುಯಾಯಿಗಳನ್ನು ರಾಮಲೀಲಾ ಮೈದಾನದಿಂದ ಹೊರಕ್ಕೆ ಹಾಕಲಾಗಿದೆ. ರಾಮಲೀಲಾ ಮೈದಾನದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬಾಬಾ ಅವರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಅವರನ್ನು ಹರಿದ್ವಾರದಲ್ಲಿರುವ ಅವರ ಆಶ್ರಮಕ್ಕೆ ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.

English summary
Baba Ramdev arrested on sunday (June5) at 1.15 am by Delhi police. Ram Lila Maidan forcefully emptied by police. Anarchy Rules in Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X