ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವೆ ಶೋಭಾ ಕರಂದ್ಲಾಜೆಗೆ 'ಲಂಚ': ಪತ್ರಕರ್ತರ ಸೆರೆ

By Srinath
|
Google Oneindia Kannada News

Shobha Karandlaje
ಬೆಂಗಳೂರು, ಜೂನ್ 5: ವಿದ್ಯುತ್‌ ಉತ್ಪಾದನಾ ಕಂಪನಿಗೆ ರಾಜ್ಯ ಇಂಧನ ಇಲಾಖೆಯಿಂದ ಬಿಡುಗಡೆ ಆಗಬೇಕಾಗಿದ್ದ 17 ಕೋಟಿ ರುಪಾಯಿ ಬಾಕಿ ಹಣ ಮಂಜೂರು ಮಾಡಿಸಲು ಕಮೀಷನ್‌ ರೂಪದಲ್ಲಿ 1.7 ಕೋಟಿ ರೂ. ನೀಡುವಂತೆ ಒತ್ತಾಯಿಸಿದ್ದ ಐವರನ್ನು ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ 1.7 ಕೋಟಿ ರೂ. ಹಣ ನೀಡಬೇಕಿದೆ ಎಂದು ಹೇಳಿ ವಿದ್ಯುತ್‌ ಉತ್ಪಾದನಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರ ಬಳಿ ಹಣಕ್ಕಾಗಿ ಇವರು ಒತ್ತಾಯಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಚಿವರ ಹೆಸರು ಹೇಳಿಕೊಂಡು ಹಣಕ್ಕಾಗಿ ಒತ್ತಾಯಿಸಿದವರ ವಿರುದ್ಧ ವಿದ್ಯುತ್‌ ಉತ್ಪಾದನಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಒಂದು ವಾರದ ಹಿಂದೆ ನೇರವಾಗಿ ಸಚಿವೆ ಶೋಭಾ ಅವರನ್ನೇ ಭೇಟಿಯಾಗಿ ಅಲವತ್ತುಕೊಂಡಿದ್ದರು. ಇಂಧನ ಸಚಿವಾಲಯದ ಅಧಿಕಾರಿಗಳು ಪ್ರಕರಣವನ್ನು ವಿಧಾನಸೌಧ ಪೊಲೀಸ್‌ ಠಾಣೆಗೆ ಒಪ್ಪಿಸಿದ್ದರು.

ಆ ನಂತರ ಪ್ರಕರಣವನ್ನು ಕಬ್ಬನ್‌ಪಾರ್ಕ್‌ಗೆ ವರ್ಗಾವಣೆ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ ಐವರನ್ನು ವಿಚಾರಣೆ ನಡೆಸಲಾಯಿತು. ಪೊಲೀಸರು ವಿಚಾರಣೆಗೊಳಪಡಿಸಿದವರಲ್ಲಿ ಹೈದರಾಬಾದ್‌ ಮೂಲದ ನರಸಿಂಹ ಚೌದರಿ ಮತ್ತು ಬೆಂಗಳೂರಿನ ಮೋಹನ್‌ ಎಂಬುವರಲ್ಲದೆ ಖಾಸಗಿ ವಾಹಿನಿಯ ಮ್ಯಾನೇಜರ್‌ ಹಾಗೂ ಇಬ್ಬರು ಪತ್ರಕರ್ತರು ಸೇರಿದ್ದಾರೆ.

English summary
Two journalists from a private TV channel were booked for allegedly playing middlemen to help a Hyderabad-based power generation company, which had pending bills to the tune of Rs 17 crore with the state government. Police action followed after an official from energy minister Shobha Karandlaje's office filed a criminal case against all four of them a week ago, and booked an extortion case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X