ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ ಡಿಕೆ: 6 ವರ್ಷದಲ್ಲಿ 231 ಕೋಟಿ ರು ಅಕ್ರಮ ಸಕ್ರಮ

By Srinath
|
Google Oneindia Kannada News

bjp
ಬೆಂಗಳೂರು, ಜೂನ್ 5: ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಗಳಿಸಿದ ಸುಮಾರು 231 ಕೋಟಿ ರೂ. ಅಕ್ರಮ ಹಣವನ್ನು ತಮ್ಮ ಕುಟುಂಬಕ್ಕೆ ಸೇರಿದ 25 ಕಂಪನಿಗಳಲ್ಲಿ ಹೂಡಿ ಸಕ್ರಮ ಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಬಿ.ಜೆ. ಪುಟ್ಟಸ್ವಾಮಿ ಆರೋಪಿಸಿದ್ದಾರೆ.

25 ಕಂಪನಿಗಳು ದೇವೇಗೌಡರ ಮಕ್ಕಳು ಹಾಗೂ ಮೊಮ್ಮಕ್ಕಳ ಹೆಸರಿನಲ್ಲಿವೆ. ಈ ಎಲ್ಲಾ ಕಂಪನಿಗಳಲ್ಲಿ 2005ರ ನಂತರ ಹೂಡಿಕೆಯಾದ ಮೊತ್ತ 231 ಕೋಟಿ ರೂಪಾಯಿ. ಈ ಹಣ ಎಲ್ಲಿಂದ ಬಂತು ಎಂಬುದಕ್ಕೆ ಕುಮಾರಸ್ವಾಮಿ ಉತ್ತರ ನೀಡಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಭ್ರಷ್ಟಾಚಾರದ ಕುರಿತು ಕಾನೂನು ಹೋರಾಟ ಕೈಗೊಳ್ಳುವುದಾಗಿ ಕುಮಾರಸ್ವಾಮಿ ಹೇಳುತ್ತಾರೆ. ಆದರೆ, ನಮಗೆ 3 ಎಕರೆ ಜಮೀನು ಮಾತ್ರ ಇತ್ತು. ಹೆಣ್ಣು ಕೊಡಲು ಯಾರೂ ಮುಂದೆ ಬಂದಿರಲಿಲ್ಲ ಎಂದಿದ್ದ ದೇವೇಗೌಡ ಅವರ ಕುಟುಂಬ ಈ ಪ್ರಮಾಣದಲ್ಲಿ ಕಂಪನಿಗಳನ್ನು ಆರಂಭಿಸಿ ಉದ್ದಿಮೆ ನಡೆಸಲು ಹೇಗೆ ಸಾಧ್ಯವಾಯಿತು ಎಂಬುದನ್ನು ಹೇಳಬೇಕು ಎಂದರು.

ದೇವೇಗೌಡ ಹಾಗೂ ಅವರ ಕುಟುಂಬದ ಹೆಸರಿನಲ್ಲಿರುವ ಕಂಪನಿಗಳ ಪೈಕಿ ಬಹುತೇಕ ಕಂಪನಿಗಳು 2005ರ ನಂತರ ಆರಂಭಗೊಂಡಿವೆ. ಈ ಕಂಪನಿಗಳಿಗೆ ಷೇರು ರೂಪದಲ್ಲಿ ಕುಮಾರಸ್ವಾಮಿ ಅವರು ಗಳಿಸಿದ ಅಕ್ರಮ ಹಣ ತೊಡಗಿಸಿದ್ದಾರೆ ಎಂದು ಆರೋಪಿಸಿದರು.

English summary
B J Puttaswamy, political secretary to the chief minister BSY told reporters on saturday (June 4) that former Chief Minister H D Kumaraswamy has invested 231 crores of Rupees in last 5-6 years that he gained during his tenure as Karnataka Chief Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X