• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾನಿಯಾ ಜೋಡಿಗೆ ದಕ್ಕದ ಫ್ರೆಂಚ್ ಓಪನ್ ಕಿರೀಟ

By Mahesh
|
ಪ್ಯಾರೀಸ್‌, ಜೂನ್ 4: ಭಾರತದ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ರಷ್ಯಾದ ಎಲೆನಾ ವೆಸ್ನಿನಾ ಜೋಡಿ ಮಹಿಳೆಯರ ವಿಭಾಗದ ಡಬಲ್ಸ್‌ ಪ್ರಶಸ್ತಿ ಸುತ್ತಿಯಲ್ಲಿ ಸೋಲುಂಡಿದೆ. ಶುಕ್ರವಾರ ನಡೆದ ಅಂತಿಮ ಹಣಾಹಣಿಯಲ್ಲಿ ಇದೇ ಮೊದಲ ಬಾರಿಗೆ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶ ಪಡೆದಿದ್ದ ಸಾನಿಯಾ-ವೆಸ್ನಿನಾ ಜೋಡಿ ಜೆಕ್ ನ ಹಚುಕೋವಾ ಹಾಗೂ ಲೂಸಿ ಹ್ರಾಡಿಕಾ ಅವರ ವಿರುದ್ಧ 6-4, 6-3 ನೇರ ಸೆಟ್‌ಗಳ ಅಂತರದಲ್ಲಿ ಮಣಿದಿದೆ.

2009ರಲ್ಲಿ ಮಹೇಶ್ ಭೂಪತಿ ಜೊತೆಯಲ್ಲಿ ಆಡಿ ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಸಾನಿಯಾ ಗೆದ್ದಿದ್ದರು. ಸಾನಿಯಾ ಅವರ ಎರಡನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆಲ್ಲುವ ಕನಸು ಭಗ್ನವಾಗಿದೆ. ಸುಮಾರು 1 ಗಂಟೆ 22 ನಿಮಿಷ ನಡೆದ ಅಂತಿಮ ಹಣಾಹಣಿಯಲ್ಲಿ ಸಾನಿಯಾ ಹಾಗೂ ವೆಸ್ನಿನಾ ಜೋಡಿ ಅನಗತ್ಯ ಡಬಲ್ ಫಾಲ್ಟ್ ಗಳನ್ನು ಮಾಡಿ ಪಂದ್ಯವನ್ನು ಎದುರಾಳಿಗಳಿಗೆ ಬಿಟ್ಟು ಕೊಟ್ಟರು.

ವಿಜೇತ ಜೆಕ್ ಜೋಡಿಗೆ 330 ಯೂರೋ ಹಾಗೂ ಟ್ರೋಫಿ ಲಭಿಸಿತು. ರನ್ನರ್ ಅಪ್ ಆದ ಇಂಡೋ ರಷ್ಯಾ ಜೋಡಿಗೆ 165 ಯೂರೋ ನಗದು ಪ್ರಶಸ್ತಿ ಸಿಕ್ಕಿದೆ. ಫೈನಲ್ ಪಂದ್ಯ ಸೋತರೂ ಫ್ರೆಂಚ್ ಓಪನ್ ಅಂತಿಮ ಹಣಾಹಣಿ ತಲುಪಿದ ಸಾಧನೆಯನ್ನು ಸಾನಿಯಾ ಮೆರೆದಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The ace tennis player Sania Mirza and Vesnina fail to win French Open doubles title 2011. Sania mirza's dream of lifting 2nd grand slam title didn't come true. Sania and her Russian partner Elena Vesnina were defeated by Un seeded Czech pair of Andrea Hlavackova and Lucie Hradecka in the final.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more