ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನುಡಿದಂತೆ ನಡೆದ ಸಿಇಸಿ, ಆಸ್ತಿ ವಿವರ ಬಹಿರಂಗ

By Mahesh
|
Google Oneindia Kannada News

CEC SY Qureshi
ನವದೆಹಲಿ, ಜೂ 4: ನುಡಿದಂತೆ ನಡೆದು ಮಾದರಿ ಅಧಿಕಾರಿಗಳಾಗಿ ಚುನಾವಣಾ ಆಯೋಗದ ಅಧಿಕಾರಿಗಳು ದೇಶದ ಹೆಮ್ಮೆ ಎನಿಸಿದ್ದಾರೆ. ಮುಖ್ಯ ಚುನಾವಣಾಯುಕ್ತ ಎಸ್ ವೈ ಖುರೇಶಿ ಹಾಗೂ ಇಬ್ಬರು ಆಯುಕ್ತರಾದ ವಿಎಸ್ ಸಂಪತ್ ಮತ್ತು ಎಚ್ ಎಸ್ ಬ್ರಹ್ಮ ತಮ್ಮ ಸ್ಥಿರ ಆಸ್ತಿ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಆಯುಕ್ತರುಗಳ ಆಸ್ತಿವಿವರ ಭಾರತೀಯ ಚುನಾವಣಾ ಆಯೋಗದ ವೆಬ್ ತಾಣ(eci.nic.in)ದಲ್ಲಿ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿದೆ.

ಖುರೇಶಿ: ಗುರ್ ಗಾಂವ್, ಗ್ರೇಟರ್ ನೊಯ್ಡ ಹಾಗೂ ಆಗ್ರಾಗಳಲ್ಲಿ ತಲಾ ಒಂದು ನಿವೇಶನ ಹೊಂದಿದ್ದಾರೆ. ಹುಡಾ(HUDA) ಗುರ್ಗಾಂವ್‌ನ ಸೆಕ್ಟರ್ 17ರಲ್ಲಿ ರೂ.63,089 ಬೆಲೆ ಬಾಳುವ 500 ಚ.ಗಜ ನಿವೇಶನವನ್ನು ಖುರೇಶಿಯವರಿಗೆ 1980ರಲ್ಲಿ ಮಂಜೂರು ಮಾಡಿದ್ದು, ಈಗ ಅದರ ಬೆಲೆ ರೂ. 1.75 ಕೋಟಿಗಳಿರಬಹುದು ಎಂದು ಅಂದಾಜಿಸಲಾಗಿದೆ.

ಅವರು 2006ರಲ್ಲಿ ನಿವೃತ್ತಿ ಸೌಲಭ್ಯ, ಪ್ರಾವಿಡೆಂಟ್ ಫಂಡ್ ಹಾಗೂ ಬ್ಯಾಂಕ್ ಸಾಲದ ಮೂಲಕ ರೂ. 36 ಲಕ್ಷಗಳಿಗೆ ಗ್ರೇಟರ್ ನೊಯ್ಡಾದಲ್ಲಿ 350 ಚ.ಗಜ ನಿವೇಶನವನ್ನು ಖರೀದಿಸಿದ್ದಾರೆ. ಅಲ್ಲದೆ ತನ್ನ ಉಳಿತಾಯದಿಂದ ಆಗ್ರಾದಲ್ಲಿ ರೂ. 8 ಲಕ್ಷ ಪಾವತಿಸಿ 525 ಚ.ಗಜ ನಿವೇಶನವೊಂದನ್ನು ಕಾಯ್ದಿರಿಸಿದ್ದಾರೆ.

ಸಂಪತ್ : ಘೋಷಣೆಯಲ್ಲಿ ಹೇಳಿರುವಂತೆ ಸಂಪತ್ 1986ರಲ್ಲಿ ಹೈದರಾಬಾದ್‌ನ ಸಿರಿವಂತ ಬಂಜಾರಾ ಹಿಲ್ಸ್ ಪ್ರದೇಶದಲ್ಲಿ ರೂ. 47,009ಕ್ಕೆ 436.6 ಚ.ಮೀ. ಗೃಹ ನಿವೇಶನ ಖರೀದಿಸಿದ್ದಾರೆ. ಅದರ ಈಗಿನ ವೌಲ್ಯ ಅಂದಾಜು ರೂ. 2 ಕೋಟಿಗಳಾಗಿದ್ದು, ಅದರ ಬಾಡಿಗೆಯಾಗಿ ಪ್ರತಿವರ್ಷ ರೂ. 7.5 ಲಕ್ಷ ಅವರಿಗೆ ದೊರೆಯುತ್ತಿದೆ.

ಅಲ್ಲದೆ ಸಂಪತ್ 1991ರಲ್ಲಿ ರೂ. 68,500 ನೀಡಿ ಆಂಧ್ರಪ್ರದೇಶದ ಗುತ್ತಲಸ ಬೇಗಂಪೇಟ್‌ನಲ್ಲಿ ಮನೆ ಸಹಿತ 418.05 ಚ.ಮೀ. ಗೃಹ ನಿವೇಶನ ಖರೀದಿಸಿದ್ದು, ಅದರ ಚಾಲ್ತಿ ಬೆಲೆಯನ್ನು ರೂ. 95 ಲಕ್ಷಗಳೆಂದು ಅಂದಾಜಿಸಲಾಗಿದೆ. ಇದರಿಂದ ಅವರಿಗೆ ವಾರ್ಷಿಕ ರೂ. 3.60 ಲಕ್ಷ ಆದಾಯ ದೊರೆಯುತ್ತಿದೆ.ಇದಕ್ಕೆ ಹೊರತಾಗಿ ಸಂಪತ್ ಹೈದರಾಬಾದ್‌ನ ಯೆಲ್ಲಾರೆಡ್ಡಿಯಲ್ಲಿ ರೂ. 18 ಲಕ್ಷಗಳಿಗೆ 1957 ಚ.ಅಡಿಯ ಅಪಾರ್ಟ್‌ಮೆಂಟ್ ಖರೀದಿಸಿದ್ದು, ಅದರ ಈಗಿನ ಬೆಲೆ ರೂ. 40 ಲಕ್ಷಗಳೆಂದು ಹೇಳಿಕೆ ವಿವರಿಸಿದೆ.

ಬ್ರಹ್ಮ: ಕೋಕ್ರಜಾರ್‌ನಲ್ಲಿ ರೂ. 8 ಲಕ್ಷ ಬೆಲೆಯ 40 ಬಿಘಾ ಕೃಷಿ ಭೂಮಿ ಹಾಗೂ ಅಸ್ಸಾಂನ ಗೋಪಾಯಿಗಾಂವ್‌ನಲ್ಲಿ ರೂ. 5ಲಕ್ಷ ಪಿತ್ರಾರ್ಜಿತ ಆಸ್ತಿ ಹೊಂದಿದ್ದಾರೆ. 1989ರಲ್ಲಿ ಹೈದರಾಬಾದ್‌ನಲ್ಲಿ ಜುಬಿಲಿಹಿಲ್‌ನಲ್ಲಿ ಮನೆ ನಿರ್ಮಾಣಕ್ಕಾಗಿ ರೂ. 8 ಲಕ್ಷಗಳಿಗೆ ಸ್ಥಳವನ್ನು ಸಹಕಾರಿ ಸಂಘವೊಂದರಿಂದ ಖರೀದಿಸಿದ್ದಾರೆ. ಅದರ ಈಗಿನ ವೌಲ್ಯ ರೂ. 3.80 ಕೋಟಿ.ಅದನ್ನು ಪ್ರಕೃತ ಬಾಡಿಗೆಗೆ ನೀಡಲಾಗಿದ್ದು, ತಿಂಗಳಿಗೆ ರೂ. 1ಲಕ್ಷ ಆದಾಯ ದೊರೆಯುತ್ತಿದೆ. ಈ ಹೇಳಿಕೆಗಳಲ್ಲಿ ಮೂವರು ಆಯುಕ್ತರ ಕುಟುಂಬ ಸದಸ್ಯರು ಹೊಂದಿರುವ ಆಸ್ತಿಯ ವಿವರಗಳನ್ನು ಇನ್ನೂ ನೀಡಿಲ್ಲ.

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ದಾಖಲಿಸುವ ಮುನ್ನ ಸಲ್ಲಿಸಬೇಕಾಗಿರುವ ಕ್ರಿಮಿನಲ್ ದಾಖಲೆಗಳು ಹಾಗೂ ಆಸ್ತಿ ಘೋಷಣೆಯ ಫಾರ್ಮುಗಳಲ್ಲಿ ಇತ್ತೀಚೆಗೆ ಆಯೋಗವು ಪ್ರಮುಖ ಬದಲಾವಣೆ ತಂದಿದೆ. ಬದಲಾವಣೆಯಂತೆ ಅಭ್ಯರ್ಥಿ ಕೊನೆಗೆ ಖರೀದಿಸಿರುವ ಆಸ್ತಿಯ ವಿವರವನ್ನು ದಿನಾಂಕ ಹಾಗೂ ಬೆಲೆಯೊಂದಿಗೆ ನಮೂದಿಸಬೇಕು ಹಾಗೂ ತಾನು ಹೊಂದಿರುವ ಸ್ಥಿರಾಸ್ತಿಯ ಈಗಿನ ಬೆಲೆಯನ್ನು ತಿಳಿಸಬೇಕು.

English summary
Election Commission Chief SY Quraishi and other two Election Commissioners VS Sampath and HS Brahma have declared their immovable assets. The information is available on website of the Election Commission of India (eci.nic.in).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X