ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮಗೂ ಮಾರನ್ ಗೂ 2ಜಿ ಸಂಬಂಧವಿಲ್ಲ : ಸನ್ ಟಿವಿ

By Mahesh
|
Google Oneindia Kannada News

Sun TV denies 2G scam link
ಚೆನ್ನೈ, ಜೂ 3: 2ಜಿ ಹಗರಣದ ಹೊಚ್ಚ ಹೊಸ ಆರೋಪಿ ಕೇಂದ್ರ ಸಚಿವ ದಯಾನಿಧಿ ಮಾರನ್ ಗೂ ತಮ್ಮ ಸಂಸ್ಥೆಗೂ ಯಾವುದೇ ರೀತಿ ಸಂಬಂಧವಿಲ್ಲ ಎಂದು ಸನ್ ಟಿವಿ ನೆಟ್ವರ್ಕ್ ಇಂದು ಷೇರುಪೇಟೆಯಲ್ಲಿ ಘೋಷಿಸಿದೆ. 2ಜಿ ಹಗರಣವನ್ನು ಮಾರನ್, ಸನ್ ಟಿವಿಯಲ್ಲಿ ತೊಡಗಿಸಿದ್ದಾರೆ ಎಂಬ ಸುದ್ದಿ ಹರಡಿದ ಮೇಲೇ ಸನ್ ಟಿವಿ ಷೇರುಗಳು ಕೆಳಮುಖವಾಗತೊಡಗಿತ್ತು. ಹೀಗಾಗಿ ಈ ಬಗ್ಗೆ ಸನ್ ಟಿವಿ ಇಂದು ಸ್ಪಷ್ಟನೆ ನೀಡಿದೆ.

323 ಬಿಎಸ್ ಎನ್ ಎಲ್ ಸಂಪರ್ಕಗಳನ್ನು ಅಕ್ರಮವಾಗಿ ದಯಾನಿಧಿ ಮಾರನ್ ಹೊಚೆನ್ನೈ, ಜೂ 3: 2ಜಿ ಹಗರಣದ ಹೊಚ್ಚ ಹೊಸ ಆರೋಪಿ ಕೇಂದ್ರ ಸಚಿವ ದಯಾನಿಧಿ ಮಾರನ್ ಗೂ ತಮ್ಮ ಸಂಸ್ಥೆಗೂ ಯಾವುದೇ ರೀತಿ ಸಂಬಂಧವಿಲ್ಲ ಎಂದು ಸನ್ ಟಿವಿ ನೆಟ್ವರ್ಕ್ ಇಂದು ಷೇರುಪೇಟೆಯಲ್ಲಿ ಘೋಷಿಸಿದೆ. 2ಜಿ ಹಗರಣವನ್ನು ಮಾರನ್, ಸನ್ ಟಿವಿಯಲ್ಲಿ ತೊಡಗಿಸಿದ್ದಾರೆ ಎಂಬ ಸುದ್ದಿ ಹರಡಿದ ಮೇಲೇ ಸನ್ ಟಿವಿ ಷೇರುಗಳು ಕೆಳಮುಖವಾಗತೊಡಗಿತ್ತು. ಹೀಗಾಗಿ ಈ ಬಗ್ಗೆ ಸನ್ ಟಿವಿ ಇಂದು ಸ್ಪಷ್ಟನೆ ನೀಡಿದೆ.

323 ಬಿಎಸ್ ಎನ್ ಎಲ್ ಸಂಪರ್ಕಗಳನ್ನು ಅಕ್ರಮವಾಗಿ ದಯಾನಿಧಿ ಮಾರನ್ ಹೊಂದುವ ಮೂಲಕ ಸಾರ್ವಜನಿಕ ವಲಯಕ್ಕೆ ಭಾರಿ ನಷ್ಟ ಉಂಟು ಮಾಡಿದ್ದಾರೆ. ಈ ಲೈನ್ ಗಳು ಮಾರನ್ ಗೃಹದಿಂದ ಸನ್ ಟಿವಿಯತ್ತ ಸೇರಿದೆ ಎಂದು ಗುರುವಾರವಿಡೀ ಸುದ್ದಿ ಹಬ್ಬಿತ್ತು. ಇದರಿಂದ ಸನ್ ಟಿವಿ ಷೇರುಗಳು ಕೆಳಗೆ ಜಾರಿದ್ದವು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಸನ್ ಟಿವಿ, ದಯಾನಿಧಿ ಮಾರನ್ ಗೆ ಸನ್ ಟಿವಿ ನೆಟ್ ವರ್ಕ್ ಅಥವಾ ಸನ್ ಡೈರೆಕ್ಟ್ ಟಿವಿಯಲ್ಲಿ ಯಾವುದೇ ಷೇರುಗಳಿಲ್ಲ. ಆಧಾರ ರಹಿತ ಸುದ್ದಿಗಳಿಂದ ಸಂಸ್ಥೆಯ ಷೇರುಗಳು ಕೆಳಮುಖ ಕಂಡಿರುವುದನ್ನು ಒಪ್ಪಿಕೊಂಡ ಸನ್ ಟಿವಿ, 2ಜಿ ಹಗರಣಕ್ಕೂ ಸನ್ ಟಿವಿಗೂ ಏನು ಸಂಬಂಧವಿಲ್ಲ. ದಯಾನಿಧಿ ಮಾರನ್ ಹಾಗೂ ಕಲಾನಿಧಿ ಮಾರನ್ ಗೆ ಸನ್ ಟಿವಿಗೂ ಆರ್ಥಿಕ ವ್ಯವಹಾರವಿಲ್ಲ. ಯಾವುದೇ ಹಣವನ್ನು ನಮ್ಮಲ್ಲಿ ಠೇವಣಿಯಾಗಿ ಇಟ್ಟಿಲ್ಲ ಎಂದು ಸನ್ ಸಂಸ್ಥೆ ಹೇಳಿದೆ.

ಮಾರನ್ ಸ್ಥಾನಕ್ಕೆ ಸಂಚಕಾರ: ಸನ್ ಟಿವಿ ಸ್ಪಷ್ಟನೆ ನೀಡಿದರೂ,ಮಾರನ್ ಹೂಡಿರುವ ಬಂಡವಾಳಗಳ ಪಟ್ಟಿಯನ್ನು ನೋಡಿದರೆ ಸನ್ ಟಿವಿ ಪಾಲುಗಾರಿಕೆಯ ಚಿತ್ರಣ ಸಿಗುತ್ತದೆ. ಮಲೇಷಿಯಾ ಮೂಲದ ಏರ್ ಸೆಲ್ ಕಂಪೆನಿಗೆ 2ಜಿ ತರಂಗಾಂತರ ಗುಚ್ಛ ಕೊಡಿಸಿದ್ದು, ಸನ್ ಟಿವಿ ಡೈರೆಕ್ಟ್ ನಲ್ಲಿ ಸುಮಾರು 675 ಕೋಟಿ ರು ಷೇರು ಹೊಂದಿರುವುದು ಮುಂತಾದ ಆರೋಪಗಳು ಕೇಳಿ ಬಂದಿರುವುದರಿಂದ ಸಿಬಿಐ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ತನಿಖೆಗೆ ಒಳಪಟ್ಟರೆ ಕೇಂದ್ರ ಜವಳಿ ಸಚಿವ ದಯಾನಿಧಿ ಮಾರನ್ ತಲೆದಂಡ ಹಾಗೂ ಜೈಲುವಾಸ ಖಚಿತ ಎನ್ನಬಹುದು.

ದುವ ಮೂಲಕ ಸಾರ್ವಜನಿಕ ವಲಯಕ್ಕೆ ಭಾರಿ ನಷ್ಟ ಉಂಟು ಮಾಡಿದ್ದಾರೆ. ಈ ಲೈನ್ ಗಳು ಮಾರನ್ ಗೃಹದಿಂದ ಸನ್ ಟಿವಿಯತ್ತ ಸೇರಿದೆ ಎಂದು ಗುರುವಾರವಿಡೀ ಸುದ್ದಿ ಹಬ್ಬಿತ್ತು. ಇದರಿಂದ ಸನ್ ಟಿವಿ ಷೇರುಗಳು ಕೆಳಗೆ ಜಾರಿದ್ದವು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಸನ್ ಟಿವಿ, ದಯಾನಿಧಿ ಮಾರನ್ ಗೆ ಸನ್ ಟಿವಿ ನೆಟ್ ವರ್ಕ್ ಅಥವಾ ಸನ್ ಡೈರೆಕ್ಟ್ ಟಿವಿಯಲ್ಲಿ ಯಾವುದೇ ಷೇರುಗಳಿಲ್ಲ. ಆಧಾರ ರಹಿತ ಸುದ್ದಿಗಳಿಂದ ಸಂಸ್ಥೆಯ ಷೇರುಗಳು ಕೆಳಮುಖ ಕಂಡಿರುವುದನ್ನು ಒಪ್ಪಿಕೊಂಡ ಸನ್ ಟಿವಿ, 2ಜಿ ಹಗರಣಕ್ಕೂ ಸನ್ ಟಿವಿಗೂ ಏನು ಸಂಬಂಧವಿಲ್ಲ. ದಯಾನಿಧಿ ಮಾರನ್ ಹಾಗೂ ಕಲಾನಿಧಿ ಮಾರನ್ ಗೆ ಸನ್ ಟಿವಿಗೂ ಆರ್ಥಿಕ ವ್ಯವಹಾರವಿಲ್ಲ. ಯಾವುದೇ ಹಣವನ್ನು ನಮ್ಮಲ್ಲಿ ಠೇವಣಿಯಾಗಿ ಇಟ್ಟಿಲ್ಲ ಎಂದು ಸನ್ ಸಂಸ್ಥೆ ಹೇಳಿದೆ.

ಮಾರನ್ ಸ್ಥಾನಕ್ಕೆ ಸಂಚಕಾರ: ಸನ್ ಟಿವಿ ಸ್ಪಷ್ಟನೆ ನೀಡಿದರೂ,ಮಾರನ್ ಹೂಡಿರುವ ಬಂಡವಾಳಗಳ ಪಟ್ಟಿಯನ್ನು ನೋಡಿದರೆ ಸನ್ ಟಿವಿ ಪಾಲುಗಾರಿಕೆಯ ಚಿತ್ರಣ ಸಿಗುತ್ತದೆ. ಮಲೇಷಿಯಾ ಮೂಲದ ಏರ್ ಸೆಲ್ ಕಂಪೆನಿಗೆ 2ಜಿ ತರಂಗಾಂತರ ಗುಚ್ಛ ಕೊಡಿಸಿದ್ದು, ಸನ್ ಟಿವಿ ಡೈರೆಕ್ಟ್ ನಲ್ಲಿ ಸುಮಾರು 675 ಕೋಟಿ ರು ಷೇರು ಹೊಂದಿರುವುದು ಮುಂತಾದ ಆರೋಪಗಳು ಕೇಳಿ ಬಂದಿರುವುದರಿಂದ ಸಿಬಿಐ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ತನಿಖೆಗೆ ಒಳಪಟ್ಟರೆ ಕೇಂದ್ರ ಜವಳಿ ಸಚಿವ ದಯಾನಿಧಿ ಮಾರನ್ ತಲೆದಂಡ ಹಾಗೂ ಜೈಲುವಾಸ ಖಚಿತ ಎನ್ನಬಹುದು.

English summary
Sun TV Network denied link with 2G scam and former telecom and current Union Minister Dayanidhi Maran. Sun TV clearly said that Dayanidhi Maran or Kalanithi Maran does not own any shares in Sun TV Network.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X