ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೊಳಕ ಮಂಡಲ'ವಾದ ಬನ್ನೇರುಘಟ್ಟ: 53 ಹಾವುಗಳ ಜನನ

By Srinath
|
Google Oneindia Kannada News

Russell's Viper gives birth Bannerghatta park
ಬೆಂಗಳೂರು, ಜೂನ್ 3: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿನ ಕೊಳಕ ಮಂಡಲ ಹಾವು 53 ಮರಿಗಳಿಗೆ ಮೇ 31ರ ರಾತ್ರಿ ಜನ್ಮ ನೀಡಿದೆ. ತಾಯಿ ಮತ್ತು ಮರಿಗಳು ಆರೋಗ್ಯವಾಗಿವೆ. ಇನ್ನೆರಡು ದಿನದಲ್ಲಿ ಮರಿಗಳನ್ನು ಕಾಡಿಗೆ ಬಿಡುವ ಬಗ್ಗೆ ಆಲೋಚಿಸಲಾಗುತ್ತಿದೆ.

ಹಾವುಗಳ ಜಾತಿಗಳಲ್ಲಿ ಕೊಳಕ ಮಂಡಲ ಒಂದು ವಿಶಿಷ್ಟತೆ ಹೊಂದಿದೆ. ಬೇರೆಲ್ಲ ಹಾವುಗಳು ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಆದರೆ ಕೊಳಕಮಂಡಲ ಹಾವು ಮಾತ್ರ ತನ್ನ ಹೊಟ್ಟೆಯಲ್ಲೆ ಮೊಟ್ಟೆ ಇಟ್ಟುಕೊಂಡು, ಕಾವು ಕೊಟ್ಟು, ಮರಿಗಳನ್ನು ಹೊರ ಹಾಕುತ್ತವೆ ಎಂದು ಉದ್ಯಾನವನದ ವೈದ್ಯಾಧಿಕಾರಿ ಡಾ. ಚೆಟ್ಟಿಯಪ್ಪ ಹೇಳಿದರು.

ಸಹಜವಾಗಿ ಒಂದು ಬಾರಿಗೆ ಇದು 40 ಮರಿಗಳನ್ನು ಹಾಕುತ್ತವೆ. ಅತಿ ಹೆಚ್ಚು ಎಂದರೆ 70 ಮರಿಗಳನ್ನು ಒಂದು ಬಾರಿಗೆ ಹಾಕುವ ಸಾಮರ್ಥ್ಯ ಹೊಂದಿರುತ್ತವೆ. ಇದರ ಜೀವಿತಾವವಧಿ 12 ರಿಂದ 13 ವರ್ಷ, ಹಾವು ಒಂದೂವರೆ ವರ್ಷದ ನಂತರ ಪ್ರೌಢಾವಸ್ಥೆಗೆ ಬರುತ್ತದೆ ಎಂದು ಅವರು ತಿಳಿಸಿದರು. ಕೊಳಕ ಮಂಡಲ ವಿಷ ಪೂರಿತ ಹಾವು. ಇಲಿ, ಮತ್ತಿತರೆ ಸಣ್ಣ ಸಣ್ಣ ಕೀಟಗಳು ಇದರ ಆಹಾರ. ಉದ್ಯಾನವನದಲ್ಲೂ ಇಲಿಗಳನ್ನು ಆಹಾರವಾಗಿ ನೀಡಲಾಗುತ್ತದೆ ಎಂದು ಅವರು ಹೇಳಿದರು.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ 4 ಗಂಡು, 5 ಹೆಣ್ಣು ಕೊಳಕ ಮಂಡಲ ಹಾವುಗಳಿವೆ. ಇದರಲ್ಲಿ ಒಂದು ಹೆಣ್ಣಾವು 53 ಮರಿಗಳಿಗೆ ಜನ್ಮ ನೀಡಿದೆ. ಈಗಾಗಲೇ 9 ಹಾವುಗಳು ಇರುವುದರಿಂದ ಮರಿಗಳನ್ನು ಇಲ್ಲೇ ಉಳಿಸಿಕೊಳ್ಳಲು ಕಷ್ಟವಾಗುತ್ತದೆ. ಆದ್ದರಿಂದ ಇನ್ನೆರಡು ದಿನದಲ್ಲಿ ಕಾಡಿಗೆ ಬಿಡಲು ಚಿಂತನೆ ನಡೆದಿದೆ ಎಂದು ಉದ್ಯಾನವನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಆರ್. ರಾಜು ಹೇಳಿದ್ದಾರೆ.

;
English summary
A Russell’s Viper in the Bannerghatta Biological Park in Bangalore has given birth to 53 young ones. The Forest Department officials said the young ones were born on May 31, 2011 and would be released into the forest soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X